Advertisement
ಅತೀ ಎತ್ತರದ ವಿಗ್ರಹ: ದಕ್ಷಿಣಾ ಏಷ್ಯಾದಲ್ಲೇ ಎತ್ತರದ ವಿಗ್ರಹವೆಂಬ ಖ್ಯಾತಿ ಹೊಂದಿರುವ ಶ್ರೀ ಚಾಮುಂಡೇಶ್ವರಿ ಪಂಚಲೋಹ ವಿಗ್ರಹ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ವಿಧಿ ವಿಧಾನಗಳೊಡನೆ ಅನಾವರಣಗೊಂಡು ಭಕ್ತರ ಹರ್ಷೋದ್ಘಾರಕ್ಕೆ ಕಾರಣವಾಯಿತು.
ಅವರಿಗೆ ಕ್ಷೀರಾಭಿಷೇಕ ಜರುಗಿತು. ಇದನ್ನೂ ಓದಿ:ಆಗಸ್ಟ್ 9 ಮಲೆ(ಳೆ)ನಾಡಿಗರ ಪಾಲಿಗೆ ಕರಾಳ ದಿನ.! ಇನ್ನೂ ತಪ್ಪಲಿಲ್ಲ ಸಂತ್ರಸ್ಥರ ಕಣ್ಣೀರು.. !
Related Articles
Advertisement
ಆಶೀರ್ವಚನ : ಬೇವೂರು ಮಠದ ಮೃತ್ಯುಂಜಯ್ಯ ಶಿವಾಚಾರ್ಯ ಶ್ರೀಗಳು ನೂತನ ಪ್ರತಿಮೆಯ ಅನಾವರಣ ಮತ್ತು ಇತರೆ ಕಾರ್ಯಕ್ರಮಗಳ ವೇಳೆ ಪಾಲ್ಗೊಂಡು ಆಶೀರ್ವಚನ ನೀಡಿದರು.. ಕಳೆದ ದಶಕದಿಂದೀಚೆಗೆ ಶ್ರೀಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಭಕ್ತರ ನೆರವಿನೊಂದಿಗೆ ಸಾಗಿದ್ದು, ಶಕ್ತಿ ದೇವತೆ ಚಾಮುಂಡೇಶ್ವರಿ ಶಾಂತ ಸ್ವರೂಪಿ ಮೂರ್ತಿ ಪ್ರತಿಷ್ಠಾಪನೆ ಭಕ್ತರ ಅಭೀಕ್ಷೆಯಂತೆ ನೆರೆವೇ ರಿರುವುದಾಗಿ ಸಂಸ್ಥೆ ಧರ್ಮದರ್ಶಿ ಜಿ.ಬಿ. ಮಲ್ಲೇಶ್ ಪತ್ರಿಕೆಗೆ ತಿಳಿಸಿದರು.
ವಿಗ್ರಹದ ವಿಶೇಷತೆಭೂಮಟ್ಟದಿಂದ 60 ಅಡಿ ಎತ್ತರವಿದ್ದು,24 ಅಡಿ ಪೀಠವುಳ್ಳ 36 ಅಡಿ ಲೋಹದ ಮೂರ್ತಿಗೆ ಸ್ವರ್ಣ ಲೇಪನ ಕಾರ್ಯ ಪೂರ್ಣಗೊಂಡಿದ್ದು, ಪುಷ್ಪಲಂಕಾರಗಳ ನಡುವೆ ಅಲಂಕೃತಗೊಂಡಿದ್ದ ಮೂರ್ತಿ ನೋಡುಗರ ಗಮನಸೆಳೆಯಿತು.