Advertisement

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

01:17 AM Jul 27, 2024 | Team Udayavani |

ಕರಾಚಿ: ಮುಂದಿನ ವರ್ಷದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿ ವೇಳೆ ಭಾರತದ ತಾರಾ ಬ್ಯಾಟರ್‌ ವಿರಾಟ್‌ ಕೊಹ್ಲಿ ಪಾಕಿಸ್ಥಾನಕ್ಕೆ ಬರಬೇಕು, ಇಲ್ಲಿ ಆಡಬೇಕು, ಇದು ನಮ್ಮ ಆಸೆ…. ಎಂದು ಪಾಕ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಯೂನಿಸ್‌ ಖಾನ್‌ ಹೇಳಿದ್ದಾರೆ.

Advertisement

ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ ಏಕದಿನ ಪಂದ್ಯಾವಳಿಗಾಗಿ ಭಾರತ ತಂಡವನ್ನು ಪಾಕಿಸ್ಥಾನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮೂಲ ಹೇಳಿತ್ತು. ಇದೇ ವಿಚಾರವನ್ನು ಮುಂದಿಟ್ಟಿರುವ ಯೂನಿಸ್‌ ಖಾನ್‌, ಕೊಹ್ಲಿ ಈವರೆಗೆ ಪಾಕಿಸ್ಥಾನದಲ್ಲಿ ಆಡಿಲ್ಲ. ಇದಕ್ಕೆ ಬಿಸಿಸಿಐ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 2006ರಲ್ಲಿ ಪಾಕಿಸ್ಥಾನಕ್ಕೆ ಪ್ರವಾಸ ಹೋಗಿದ್ದ ಭಾರತ ತಂಡ, ಇಲ್ಲಿ ಕೊನೆಯ ಸಲ ಸರಣಿಯನ್ನಾಡಿತ್ತು. ಅಂದು ಕೊಹ್ಲಿ ಭಾರತ ತಂಡದಲ್ಲಿರಲಿಲ್ಲ. ಹೀಗಾಗಿ ಪಾಕ್‌ನಲ್ಲಿ ಕೊಹ್ಲಿ ಬ್ಯಾಟಿಂಗ್‌ ವೈಭವ ಮೆರೆಯಲು ಭಾರತ ಸರಕಾರ, ಬಿಸಿಸಿಐ ಅನುವು ಮಾಡಿಕೊಡಬೇಕು ಎಂದು ಯೂನಿಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next