Advertisement
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 8 ವಿಕೆಟಿಗೆ 282 ರನ್ ಪೇರಿಸಿದರೆ, ವೆಸ್ಟ್ ಇಂಡೀಸ್ 45.3 ಓವರ್‌ಗಳಲ್ಲಿ 206 ರನ್ನಿಗೆ ಕುಸಿಯಿತು. ವಿಜೇತ ತಂಡದ ಪರ ಕೀಪರ್ ಮ್ಯಾಕ್ವೆಟು ಅಜೇಯ 99 ರನ್ ಹೊಡೆದರೆ, ರಾಲ್ಫೆಸ್ 33 ರನ್ನಿತ್ತು 4 ವಿಕೆಟ್ ಉಡಾಯಿಸಿದರು. ಅಲಿಕ್ ಅತನೇಜ್ (76) ಮತ್ತು ಕರ್ಸ್ಟನ್ ಕಾಳೀಚರಣ್ (44) ಸೇರಿಕೊಂಡು ಮಧ್ಯಮ ಕ್ರಮಾಂಕದಲ್ಲಿ ಹೋರಾಟವೊಂದನ್ನು ಸಂಘಟಿಸಿದರೂ ವಿಂಡೀಸಿಗೆ ಲಾಭವಾಗಲಿಲ್ಲ. ಕೊನೆಯ 6 ವಿಕೆಟ್‌ಗಳು 29 ರನ್ ಅಂತರದಲ್ಲಿ ಹಾರಿ ಹೋದವು!
ವಾಂಗರಿ: ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾ ವಳಿಯ “ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಪಾಕಿಸ್ಥಾನವನ್ನು ಮಣಿಸಿ ಸುದ್ದಿಯಾಗಿದ್ದ ಅಫ್ಘಾನಿಸ್ಥಾನ, ಬುಧವಾರದ ದ್ವಿತೀಯ ಮುಖಾಮುಖೀಯಲ್ಲಿ ಏಷ್ಯಾದ ಮತ್ತೂಂದು ಬಲಿಷ್ಠ ತಂಡವಾದ ಶ್ರೀಲಂಕಾವನ್ನು 32 ರನ್ನುಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಸ್ಥಾನವನ್ನು ಖಚಿತಪಡಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ಥಾನ 7 ವಿಕೆಟಿಗೆ 284 ರನ್ನುಗಳ ಬೃಹತ್ ಮೊತ್ತ ಒಟ್ಟುಗೂಡಿಸಿದರೆ, ಶ್ರೀಲಂಕಾ ಚೇಸಿಂಗ್ ವೇಳೆ ಮಳೆ ಸುರಿಯಿತು. ಹೀಗಾಗಿ 38 ಓವರ್‌ಗಳಲ್ಲಿ 235 ರನ್ನುಗಳ ಗುರಿ ನಿಗದಿಗೊಳಿಸಲಾಯಿತು. ಆದರೆ ಕಮಿಂಡು ಮೆಂಡಿಸ್ ಪಡೆ 37.3 ಓವರ್‌ಗಳಲ್ಲಿ 202 ರನ್ನಿಗೆ ಆಲೌಟ್ ಆಯಿತು.
Related Articles
Advertisement
ನ್ಯೂಜಿಲ್ಯಾಂಡ್ ಬೃಹತ್ ಮೊತ್ತಕ್ರೈಸ್ಟ್ಚರ್ಚ್: ಕೀನ್ಯಾ ವಿರುದ್ಧ ನ್ಯೂಜಿಲ್ಯಾಂಡ್ 243 ರನ್ನುಗಳ ಪ್ರಚಂಡ ಜಯಭೇರಿ ಮೊಳಗಿಸಿದೆ. ಕಿವೀಸ್ 4 ವಿಕೆಟಿಗೆ 436 ರನ್ ಪೇರಿಸಿತು. ಇದು ಅಂಡರ್-19 ವಿಶ್ವಕಪ್ ಇತಿಹಾಸದ 2ನೇ ಸರ್ವಾಧಿಕ ಮೊತ್ತ. ಜವಾಬಿತ್ತ ಕೀನ್ಯಾ ಪೂರ್ತಿ 50 ಓವರ್ ಆಡಿ 4 ವಿಕೆಟಿಗೆ 193 ರನ್ ಗಳಿಸಿ ಶರಣಾಯಿತು. ನ್ಯೂಜಿಲ್ಯಾಂಡ್ ಪರ ಆರಂಭಿಕರಾದ ಜೇಕಬ್ ಭುಲ 180 ಹಾಗೂ ರಚಿನ್ ರವೀಂದ್ರ 117 ರನ್ ಹೊಡೆದರು. ನ್ಯೂಜಿಲ್ಯಾಂಡ್ ಎರಡೂ ಪಂದ್ಯಗಳನ್ನು ಗೆದ್ದಿದ್ದು, ನಾಕೌಟ್‌ಗೆ ಲಗ್ಗೆ ಇರಿಸಿದೆ.