ಪೈರೇಟ್ಸ್‌ಗೆ 34-32 ಅಂಕಗಳ ಸೋಲುಣಿಸಿದೆ.
Advertisement
ಮೊದಲ ಮುಖಾಮುಖೀಯಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ತಂಡವನ್ನು ಯು ಮುಂಬಾ 31-25 ಅಂಕಗಳಿಂದ ಮಣಿಸಿತು.ಅಭಿಷೇಕ್, ನರ್ವಾಲ್ ಮಿಂಚು ಮುಂಬಾ ಗೆಲುವಿಗೆ ಅಭಿಷೇಕ್ ಸಿಂಗ್ ಮತ್ತು ಸಂದೀಪ್ ನರ್ವಾಲ್ ನೆರವಾದರು. ದಾಳಿಯಲ್ಲಿ ಮಿಂಚಿದ ಅಭಿಷೇಕ್ 16 ಬಾರಿ ಯತ್ನ ನಡೆಸಿ 10 ಅಂಕ ಗಳಿಸಿದರು. ಇನ್ನೊಂದು ಕಡೆ ರೋಹಿತ್ ಬಲಿಯನ್ ಕೂಡ ದಾಳಿಯಲ್ಲಿ ಮಿಂಚಿ 4 ಅಂಕ ಗಳಿಸಿದರು. ಇವರಿಗೆ ರಕ್ಷಣೆಯಲ್ಲಿ ಸಂದೀಪ್ ನರ್ವಾಲ್ ನೆರವಿಗೆ ನಿಂತರು. ಎದುರಾಳಿಯನ್ನು ಕೆಡವಿಕೊಳ್ಳಲು 5 ಬಾರಿ ಯತ್ನ ನಡೆಸಿ ಅದರಲ್ಲಿ 4 ಅಂಕ ಪಡೆದರು. ಇದು ಮುಂಬಾ ಗೆಲುವನ್ನು ಖಚಿತಪಡಿಸಿತು.