Advertisement
ಸೋಮವಾರದ 3ನೇ ಹಾಗೂ ಕೊನೆಯ ಮುಖಾಮುಖಿಯಲ್ಲಿ ಲಂಕಾ ವನಿತೆಯರು ಭಾರತವನ್ನು 7 ವಿಕೆಟ್‌ಗಳಿಂದ ಮಣಿಸಿ ಒಂದಿಷ್ಟು ಗೌರವ ಸಂಪಾದಿಸಿದರು. ಮೊದ ಲೆರಡೂ ಪಂದ್ಯಗಳನ್ನು ಜಯಿಸಿದ್ದ ಭಾರತ 2-1ರಿಂದ ಸರಣಿ ಮೇಲೆ ಹಕ್ಕು ಚಲಾಯಿಸಿತು.
Related Articles
Advertisement
ಈ ಬ್ಯಾಟಿಂಗ್ ವೈಭವದ ವೇಳೆ ಚಾಮರಿ ಅತಪಟ್ಟು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಎರಡು ಸಾವಿರ ರನ್ ಪೂರೈಸಿದ ಶ್ರೀಲಂಕಾದ ಮೊದಲ ಕ್ರಿಕೆಟರ್ ಎನಿಸಿದರು. ಇಲ್ಲಿನ ಪುರುಷರಿಂದಲೂ ಈ ಮೈಲುಗಲ್ಲು ದಾಖಲಾಗಿಲ್ಲ ಎಂಬುದು ಉಲ್ಲೇಖನೀಯ. 1,889 ರನ್ ಮಾಡಿದ ತಿಲಕರತ್ನೆ ದಿಲ್ಶನ್ ಅವರದೇ ಹೆಚ್ಚಿನ ಗಳಿಕೆ.
ಭಾರತ ಒಟ್ಟು 7 ಬೌಲರ್‌ಗಳನ್ನು ದಾಳಿಗೆ ಇಳಿಸಿದರೂ ಅತಪಟ್ಟು ಮಾತ್ರ ಪಟ್ಟು ಸಡಿಲಿಸದೆ ಹೋರಾಡಿದರು. ಅವರಿಗೆ ನೀಲಾಕ್ಷಿ ಡಿ ಸಿಲ್ವ ಉತ್ತಮ ಬೆಂಬಲ ನೀಡಿದರು. ನೀಲಾಕ್ಷಿ ಗಳಿಕೆ 28 ಎಸೆತಗಳಿಂದ 30 ರನ್ (4 ಬೌಂಡರಿ).ಭಾರತದ ಬ್ಯಾಟಿಂಗ್ ಸರದಿಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ 33 ಎಸೆತಗಳಿಂದ ಸರ್ವಾಧಿಕ 39 ರನ್ ಹೊಡೆದರು. ಈ ಅಜೇಯ ಇನ್ನಿಂಗ್ಸ್‌ನಲ್ಲಿ 3 ಫೋರ್ ಹಾಗೂ ಒಂದು ಸಿಕ್ಸರ್ ಸೇರಿತ್ತು. ಜೆಮಿಮಾ ರೋಡ್ರಿಗಸ್ 30 ಎಸೆತಗಳಿಂದ 33 ರನ್ (3 ಬೌಂಡರಿ), ಸ್ಮತಿ ಮಂಧನಾ ಮತ್ತು ಎಸ್. ಮೇಘನಾ ತಲಾ 22 ರನ್ ಮಾಡಿದರು. ಕೌರ್, ಜೆಮಿಮಾ ಮತ್ತು ಪೂಜಾ ವಸ್ತ್ರಾಕರ್ (ಅಜೇಯ 13) ಸೇರಿಕೊಂಡು ಕೊನೆಯ 5 ಓವರ್‌ಗಳಲ್ಲಿ 49 ರನ್ ಒಟ್ಟುಗೂಡಿಸಿದರು. ಸಂಕ್ಷಿಪ್ತ ಸ್ಕೋರ್
ಭಾರತ-5 ವಿಕೆಟಿಗೆ 138 (ಕೌರ್ ಔಟಾಗದೆ 39, ಜೆಮಿಮಾ 33, ಮಂಧನಾ 22, ಮೇಘನಾ 22, ರಣಸಿಂಘೆ 31ಕ್ಕೆ 1). ಶ್ರೀಲಂಕಾ-17 ಓವರ್‌ಗಳಲ್ಲಿ 3 ವಿಕೆಟಿಗೆ 141 (ಅತಪಟ್ಟು ಔಟಾಗದೆ 80, ನೀಲಾಕ್ಷಿ 30, ರೇಣುಕಾ 27ಕ್ಕೆ 1). ಪಂದ್ಯಶ್ರೇಷ್ಠ: ಚಾಮರಿ ಅತಪಟ್ಟು.
ಸರಣಿಶ್ರೇಷ್ಠ: ಹರ್ಮನ್‌ಪ್ರೀತ್ ಕೌರ್.