Advertisement

ಜಿಲ್ಲೆಯಲ್ಲಿ ಅಷ್ಟಾಗಿ ಕುಡಿವ ನೀರಿನ ಸಮಸ್ಯೆ ಇಲ್ಲ

12:48 PM Apr 06, 2021 | Team Udayavani |

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲತಾಲೂಕುಗಳಲ್ಲಿ ಕುಡಿಯುವ ನೀರಿಗೆ ಸದ್ಯಕ್ಕೆ ಸಮಸ್ಯೆಯಿಲ್ಲ. ಆದರೆ, ಹನೂರು ತಾಲೂಕುಮಾರ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 21 ಜನವಸತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.

Advertisement

ಬಹುಗ್ರಾಮ ಯೋಜನೆಯಡಿ ಈಗಾಗಲೇ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನಗ್ರಾಮಗಳಿಗೆ ನದಿ ಮೂಲದಿಂದ ನೀರು ಪೂರೈಕೆಯಾಗುತ್ತಿದೆ. ಯಳಂದೂರು ತಾಲೂಕಿನಲ್ಲೂಅಂತರ್ಜಲ ಸಮಸ್ಯೆ ಇಲ್ಲ. ಹನೂರು ತಾಲೂಕಿನಲ್ಲಿ ಬಹುಗ್ರಾಮ ಯೋಜನೆ ಜಾರಿಗೊಂಡಿಲ್ಲ. ಹೀಗಾಗಿಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಮಾರ್ಟಳ್ಳಿ ಗ್ರಾಮ ಪಂಚಾಯಿತಿಯ ಒಟ್ಟು 22 ಜನವಸತಿಗಳಲ್ಲಿ ಸಮಸ್ಯೆಯಿದೆ. ಜಿಲ್ಲಾ ಪಂಚಾಯಿತಿಯ ನೀರು ಹಾಗೂ ನೈರ್ಮಲ್ಯ ಇಲಾಖೆಈ ಪ್ರದೇಶವನ್ನು ವಿಶೇಷವಾಗಿ ಪರಿಗಣಿಸಿ, ಸಮಸ್ಯೆತಲೆದೋರದಂತೆ ಮಾಡುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಮಾಡಿದೆ.

ಹನೂರು ತಾಲೂಕಿನಲ್ಲಿ ಅಂತರ್ಜಲ ಮಟ್ಟ ತೀವ್ರರೀತಿಯಲ್ಲಿ ಕುಸಿದಿದೆ. ಮಾರ್ಟಳ್ಳಿ ಪಂಚಾಯಿತಿವ್ಯಾಪ್ತಿಯಲ್ಲಿ 1200 ಅಡಿ ಕೊರೆದರೂ ನೀರು ಬಾರದಂಥ ಪರಿಸ್ಥಿತಿ ಇದೆ. ಹೀಗಾಗಿಕೊಳವೆಬಾವಿಗಳನ್ನು ರೀಬೋರ್‌ ಮಾಡುವುದು,ಬೋರ್‌ವೆಲ್‌ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ.

16 ಖಾಸಗಿ ಜಮೀನಿನಲ್ಲಿರುವ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಈ ಬಾವಿಗಳಲ್ಲಿ ನೀರಿನ ಪ್ರಮಾಣ ಸಮಾಧಾನಕರವಾಗಿದೆ. ಹೀಗಾಗಿ ಆ ಜಮೀನಿನ ಮಾಲೀಕರೊಂದಿಗೆಮಾತುಕತೆ ನಡೆಸಿ, ಅಲ್ಲಿಂದ ಗ್ರಾಮಗಳ ಮಿನಿ ಟ್ಯಾಂಕ್‌ಗಳಿಗೆ ನೀರು ಪೂರೈಸಲಾಗುತ್ತಿದೆ.ಒಟ್ಟು ಸಮಸ್ಯೆ ಇರುವ 22 ಗ್ರಾಮಗಳ ಪೈಕಿ 16ಗ್ರಾಮಗಳ ವ್ಯಾಪ್ತಿಯಲ್ಲಿ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತದೆ. ಉಳಿದೆಡೆ ಸರ್ಕಾರಿಭೂಮಿಯಲ್ಲಿರುವ ಕೊಳವೆ ಬಾವಿಗಳನ್ನೇ ಮತ್ತಷ್ಟು ಆಳ ಕೊರೆಸಿ, ನೀರು ತೆಗೆಯಲು ಯತ್ನಿಸಲಾಗುತ್ತದೆ.

ಬಹುಗ್ರಾಮ ನೀರಿನ ಯೋಜನೆ ಪ್ರಗತಿ :

Advertisement

ಹನೂರು ತಾಲೂಕಿನ ಒಟ್ಟು 291 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನದಿ ಮೂಲದಿಂದ ನೀರು ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಮೊದಲ ಹಂತದಲ್ಲಿ ಒಟ್ಟು 98 ಗ್ರಾಮಗಳಿಗೆ ನೀರು ಕೊಡುವ ಯೋಜನೆಯನ್ನುಸಮರೋಪಾದಿಯಲ್ಲಿ ಕೈಗೊಳ್ಳಲಾಗಿದೆ. ಈ ಕಾಮಗಾರಿ ಮುಗಿಯಲು ನವೆಂಬರ್‌ತಿಂಗಳವರೆಗೂ ಕಾಲಾವಕಾಶ ಇದೆಯಾದರೂ ಆಗಸ್ಟ್‌ ಅಂತ್ಯದೊಳಗೆ ನೀರು ಪೂರೈಸಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಶಿವಶಂಕರ್‌ ತಿಳಿಸಿದರು.

ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಹನೂರು ಭಾಗದಲ್ಲಿ ಅದರಲ್ಲೂಮಾರ್ಟಳ್ಳಿ ಗ್ರಾಪಂನ 21 ಜನವಸತಿ ಪ್ರದೇಶಗಳಲ್ಲಿ ಸಮಸ್ಯೆ ಇದೆ. ಬಹುಗ್ರಾಮಕುಡಿಯುವ ನೀರಿನ ಯೋಜನೆ ಬರುವವರೆಗೂ ಬೋರ್‌ವೆಲ್‌ ಕೊರೆಸುವುದು,ರೀ ಬೋರ್‌ ಮಾಡಿಸಲಾಗು ವುದು. ಖಾಸಗಿ ಬೋರ್‌ವೆಲ್‌ ಮೂಲಕ, ಮಿನಿವಾಟರ್‌ ಕನೆಕ್ಷನ್‌ ಕೊಡಿಸಲಾಗಿದೆ. ಸದ್ಯಕ್ಕೆ ಅಲ್ಲಿ ನೀರಿಗೆ ತೊಂದರೆ ಯಿಲ್ಲ.ಶಿವಶಂಕರಯ್ಯ, ಕಾರ್ಯಪಾಲಕ ಎಎಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ.

 

-ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next