ಗುಂಡ್ಲುಪೇಟೆ : ಟಿಪ್ಪರ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೆ ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಬೇಗೂರು ಸಮೀಪದ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ನಡೆದಿದೆ.
ನೆರೆಯ ಕೇರಳ ಮೂಲದ ಸುಜಿತ್ ಕೃಷ್ಣನ್ (30) ಮೃತ ವ್ಯಕ್ತಿ. ವಿಜೇಶ್, ಜೀತು, ಸುಲೇಮಾನ್, ಜೋವನ್ ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆ ರವಾನಿಸಲಾಗಿದೆ. ಮೃತ ಸುಜಿತ್ ದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಘಟನೆ ವಿವರ: ಗುರುವಾರ ಮುಂಜಾನೆ 7:30ರ ಸಮಯ ಬೇಗೂರು ರಾಷ್ಟ್ರೀಯ ಹೆದ್ದಾರಿ – 766ರಲ್ಲಿ ಪ್ರವಾಸದ ನಿಮಿತ್ತ ಮೈಸೂರು ಕಡೆಯಿಂದ ಇನೋವಾ ಕಾರು ಬಂದಿದ್ದು, ಅದರ ಮುಂದೆ ಮರಳು ತುಂಬಿದ ಟಿಪ್ಪರ್ ಸಂಚರಿಸಿದೆ. ಈ ವೇಳೆ ಬೇಗೂರಿನ ಸಮೀಪದ ಟಿ.ಬಿ. ಸರ್ಕಲ್ ಹತ್ತಿರ ಮುಂದೆ ಹೋಗುತ್ತಿದ್ದ ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ ಇಂಡಿಕೆಟರ್ ಹಾಕದೆ ಏಕಾಏಕಿ ಬಲಕ್ಕೆ ತಿರುಗಿಸಿದೆ. ಆ ಸಂದರ್ಭ ಹಿಂಬದಿಯಿಂದ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ನಕ್ಸಲ್ ನಂಟು : ವಿಠಲ ಮಲೆಕುಡಿಯ,ತಂದೆ ನಿರ್ದೋಷಿ ಎಂದ ಕೋರ್ಟ್
ಘಟನೆ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.