Advertisement

ಅಳಿವಿನಂಚಿನ ಮಾಕಳಿ ಬೇರು ಕಳ್ಳಸಾಗಾಟದಿಂದ ಸಸ್ಯಕ್ಕೆ ಕುತ್ತು

03:57 PM Aug 30, 2021 | Team Udayavani |

ಯಳಂದೂರು: ಬಿಆರ್‌ಟಿ ಅರಣ್ಯ ಪ್ರದೇಶದವ್ಯಾಪ್ತಿಯಲ್ಲಿ ಮಾಕಳಿ ಬೇರಿನ ಅಕ್ರಮ ಸಂಗ್ರಹಣೆಮಾಡಿ ಮಾರಾಟ ಪ್ರಕರಣಗಳು ಹೆಚ್ಚಾಗಿದ್ದು,ಅಪರೂಪದ ಸಸ್ಯ ಮಾಕಳಿ (ಮೀಸೇಕಾಯಿ ಗಿಡ)ರಕ್ಷಣೆಗೆ ಮಾಡುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

Advertisement

ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ,ಬಂಡೀಪುರ, ಕಾವೇರಿ ವನ್ಯಧಾಮ, ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶ ಸೇರಿದಂತೆ ಇತರೆ ಕಲ್ಲು ಬಂಡೆಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಬೆಳೆಯುತ್ತದೆ. ಅಪೋಸೈನಿಸಿಯೆ ಕುಟುಂಬಕ್ಕೆಸೇರಿದ ವನ್ಯಸಸ್ಯ ಮಾಕಳಿಬೇರು ಇದನ್ನು ಮಾಗಳಿಬೇರು ಎಂತಲೂ ಕರೆಯುತ್ತಾರೆ. ಇದರಲ್ಲಿ ಬಿಡುವಕಾಯಿ ಮೀಸೆ ಆಕಾರದಲ್ಲಿರುವುದರಿಂದ ಮೀಸೇ ಕಾಯಿಬೇರು ಪರ್ಯಾಯನಾಮದಿಂದ ಕರೆಯುವ ವಾಡಿಕೆ ಇದೆ. ಇದರ ವೈಜ್ಞಾನಿಕಹೆಸರು ಡೆಕಾಲೆಪಿಸ್‌ ಹ್ಯಾಮಿಲ್‌ಟೋನಿ ಎಂದುಕರೆಯುತ್ತಾರೆ.

ದಕ್ಷಿಣ ಭಾರದದಲ್ಲೇಕಂಡುಬರುವ ಅಪರೂಪದ ಸಸ್ಯ ವರ್ಗವಾಗಿದೆ.ಬಂಡೆಗಳ ನಡುವೆ ಹೆಚ್ಚಾಗಿ ಬೆಳೆಯುತ್ತಿದೆ. ಈಸಸ್ಯ ವರ್ಗ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಂದ ಅಳಿವಿನ ಅಂಚಿಗೆ ಸಾಗುತ್ತಿದೆ.

ಬಿಆರ್‌ಟಿ ಅರಣ್ಯ ವ್ಯಾಪ್ತಿಯ ಯಳಂದೂರುವಲಯದಲ್ಲಿ ಇತ್ತೀಚಿನಕೆಲವು ದಿನಗಳಲ್ಲಿ ಎರಡುಪ್ರಕರಣಗಳಿಂದ 1300ಕೆ.ಜಿ.ಗಳಷ್ಟುಹಸಿಮಾಕಳಿ ಬೇರನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದದನ್ನುಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹೆಚ್ಚಿ 5 ಜನಆರೋಪಿಗಳನ್ನು ಬಂಧಿಸಿದ್ದರು.

ಅಳಿವಿನಂಚಿನಲ್ಲಿರುವ ಮಾಕಳಿ ಬೇರಿಗೆತಮಿಳುನಾಡು, ಕೇರಳ ರಾಜ್ಯದಲ್ಲಿ ಅಪಾರಬೇಡಿಕೆ ಇದೆ. ಕಲ್ಲು ಬಂಡೆಗಳ ಕೆಳಗೆ ಬಳ್ಳಿಯಾಕಾರದಲ್ಲಿ ಸುಮಾರು 8 ಮೀಟರ್‌ವರೆಗೆಬೆಳೆಯುತ್ತದೆ. ಜುಲೈ, ಆಗಸ್ಟ್‌ ಸಮಯದಲ್ಲಿ ಈಬೇರನ್ನು ಸಂಗ್ರಹಿಸಲು ಸುಲಭವಾಗುತ್ತದೆ.

Advertisement

ಈಹಿನ್ನೆಲೆಯಲ್ಲಿ ಹೆಚ್ಚಾಗಿ ಮಳೆಗಾಲದಲ್ಲಿ ಈಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತದೆ.111ಔಷಧಿ ಗುಣವುಳ್ಳ ಮಾಕಳಿ111ಮಾಕಳಿ ಬೇರನ್ನು ಬಳಸಿಕೊಂಡು ಉಪ್ಪಿನಕಾಯಿತಯಾರಿಸಲಾಗುತ್ತದೆ. ಜೊತೆಗೆ ಔಷಧ ರೂಪದಲ್ಲಿಅಜೀರ್ಣ, ಹೆಂಗಸರ ಗುಪ್ತ ರೋಗಗಳ ನಿವಾರಣೆ,ಜ್ವರ,ಕೆಮ್ಮು, ಶೀತ ಸೇರಿದಂತೆ ಆಯುರ್ವೇದ,ಯುನಾನಿ, ಸಿದ್ಧ ಔಷಧಗಳಲ್ಲಿ ಇದರ ಬಳಕೆ ಅಧಿಕವಾಗಿದೆ.

ಈ ಬೇರಿನ ಪುಡಿಗೆಕಿಲೋಗೆ 500 ರಿಂದ600 ರೂ. ಮಾರುಕಟ್ಟೆ ದರವಿದೆ.ಕೆಲ ಸಂದರ್ಭದಲ್ಲಿಇನ್ನೂ ಹೆಚ್ಚಿನ ದರಕ್ಕೂ ಮಾರಾಟವಾಗುತ್ತದೆ. ಇದರಅಕ್ರಮ ಸಾಗಾಟವಾದಲ್ಲಿ ಜೀವ ಹಾಗೂ ಸಸ್ಯವೈವಿಧ್ಯತೆಗೆ ಮಾರಕವಾಗಿ ಪರಿಗಣಿಸುವ ಸಾಧ್ಯತೆಇದ್ದು, ಇದಕ್ಕೆಕಡಿವಾಣ ಹಾಕುವ ನಿಟ್ಟಿನಲ್ಲಿ ಮತ್ತಷ್ಟುಕಠಿಣ ಕಾನೂನು ರೂಪಿಸಬೇಕಿದೆ.

ಫೈರೋಜ್‌ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next