Advertisement

ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಕೈ ಪ್ರತಿಭಟನೆ

04:53 PM Jun 04, 2021 | Team Udayavani |

ಚಾಮರಾಜನಗರ: ಜಿಲ್ಲಾ ಕೋವಿಡ್‌ ಅಸ್ಪತ್ರೆಯಲ್ಲಿಅಕ್ಸಿಜನ್‌ ಕೊರತೆಯಿಂದ 36 ಮಂದಿ ಮೃತಪಟ್ಟುಒಂದು ತಿಂಗಳಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಮೃತಪಟ್ಟ ಕುಟುಂಬದವರಿಗೆಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ, ಜಿಲ್ಲಾಕಾಂಗ್ರೆಸ್‌ ಕಚೇರಿ ಮುಂದೆ ಗುರುವಾರ ಪ್ರತಿಭಟನೆನಡೆಸಲಾಯಿತು.

Advertisement

ಪ್ರತಿಭಟನೆ ನೇತೃತ್ವವನ್ನು ಜಿಲ್ಲಾ ಕಾಂಗ್ರೆಸ್‌ ಪಿ.ಮರಿಸ್ವಾಮಿ, ಶಾಸಕ ಸಿ. ಪುಟ್ಟರಂಗಶೆಟ್ಟಿ ವಹಿಸಿದ್ದರು.ಕೋವಿಡ್‌ ನಿರ್ವಹಣೆಯಲ್ಲಿ ವಿಫ‌ಲವಾಗಿರುವಬಿಜೆಪಿ ಸರ್ಕಾರವನ್ನು ವಜಾಗೊಳಿಸಿ, ರಾಜ್ಯಪಾಲರಆಡಳಿತ ಜಾರಿಗೊಳಿಸಿ ಒತ್ತಾಯಿಸಿದರು.ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ,ಘಟನೆ ನಡೆದಿ ತಿಂಗಳಾರೂ ಕಾರಣರಾದವರ ವಿರುದ್ದಕ್ರಮ ಕೈಗೊಂಡಿಲ್ಲ. ತಪ್ಪಿತಸ್ಥ ಅಧಿಕಾರಿಗಳನ್ನುಆಮಾನತು ಮಾಡಿಲ್ಲ.

ಘಟನೆಯ ಹೊಣೆ ಹೊತ್ತುಆರೋಗ್ಯ ಸಚಿವ ಸುಧಾಕರ್‌, ಜಿಲ್ಲಾ ಉಸ್ತುವಾರಿಸಚಿವ ಸುರೇಶ್‌ಕುಮಾರ್‌ ರಾಜೀನಾಮೆ ನೀಡಬೇಕುಎಂದರು.ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಮೃತಪಟ್ಟಕುಟುಂಬಗಳಿಗೆ ತಲಾ 20 ಲಕ್ಷ ರೂ. ಪರಿಹಾರನೀಡಬೇಕು. ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ವಕ್ತಾರ ಕೆರೆಹಳ್ಳಿನವೀನ್‌,ಜಿಪಂ ಸದಸ್ಯ ಸದಾಶಿವಮೂರ್ತಿ, ಕಾಂಗ್ರೆಸ್‌ಉಪಾಧ್ಯಕ್ಷ ಬಿ.ಕೆ. ರವಿಕುಮಾರ್‌, ಪ್ರಧಾನಕಾರ್ಯದರ್ಶಿಗಳಾದ ಚಿಕ್ಕಮಹದೇವ್‌, ಆರ್‌.ಮಹದೇವ್‌, ಬ್ಲಾಕ್‌ ಅಧ್ಯಕ್ಷ ಮಹಮದ್‌ ಅಸYರ್‌,ಯುವಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್‌ ಅಜೀಜ್‌,ಕೆಪಿಸಿಸಿಸದಸ್ಯ ಸೈಯದ್‌ ರಫಿ, ಅರುಣ್‌ಕುಮಾರ್‌, ಎಎಚ್‌ಎನ್‌ ಖಾನ್‌, ತೈಸಿಪ್‌ ಖಾನ್‌, ಹೆಬ್ಬಸೂರು ಮಧುಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next