Advertisement

Namma clinic: ದೊಡ್ಡಾಸ್ಪತ್ರೆಯಲ್ಲಿ ರೋಗಿಗಳ ಒತ್ತಡ ತಗ್ಗಿಸಿದ ನಮ್ಮ ಕ್ಲಿನಿಕ್‌

03:49 PM Aug 14, 2023 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಒಟ್ಟು ಮೂರು ನಮ್ಮ ಕ್ಲಿನಿಕ್‌ ಗಳನ್ನು ಆರಂಭಿಸಿದ್ದು ಆ ಪ್ರದೇಶದ ಜನ ಸಣ್ಣಪುಟ್ಟ ಕಾಯಿಲೆಗೆ ದೊಡ್ಡ ಆಸ್ಪತ್ರೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ.

Advertisement

ಚಾಮರಾಜನಗರದ ಕರಿನಂಜನಪುರ ಬಡಾವಣೆ, ಗುಂಡ್ಲುಪೇಟೆಯ ಅಂಬೇಡ್ಕರ್‌ ವೃತ್ತದ ಬಳಿ, ಕೊಳ್ಳೇಗಾ ಲದ ಮಠದ ಬೀದಿಯಲ್ಲಿ ನಮ್ಮ ಕ್ಲಿನಿಕ್‌ ಕಾರ್ಯನಿರ್ವಹಿಸುತ್ತಿವೆ.

ಗುಂಡ್ಲುಪೇಟೆಯಲ್ಲಿ ಸಿಬ್ಬಂದಿ ಇಲ್ಲ: ನಮ್ಮ ಕ್ಲಿನಿಕ್‌ಗಳಲ್ಲಿ ತಲಾ ನಾಲ್ವರು ಸಿಬ್ಬಂದಿ ಇದ್ದಾರೆ. ಓರ್ವ ವೈದ್ಯ, ಓರ್ವ ಸ್ಟಾಫ್ ನರ್ಸ್‌,  ಪ್ರಯೋಗಾಲಯ ತಂತ್ರಜ್ಞ ಮತ್ತು ಓರ್ವ ಫಾರ್ಮಾಸಿಸ್ಟ್‌ ಇದ್ದಾರೆ. ಜಿಲ್ಲೆಯ 3 ನಮ್ಮ ಕ್ಲಿನಿಕ್‌ ಪೈಕಿ ಗುಂಡ್ಲುಪೇಟೆಯಲ್ಲಿ ವೈದ್ಯ ಹುದ್ದೆ ಸದ್ಯಕ್ಕೆ ಖಾಲಿಯಿದೆ. ಉಳಿದಂತೆ ಎಲ್ಲಾ ಸಿಬ್ಬಂದಿ ಇದ್ದಾರೆ. ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾ ಗಿದ್ದು, ಗುಂಡ್ಲುಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಬೇರೆಡೆ ತೆರಳಿದ್ದರಿಂದ ಅಲ್ಲಿ ವೈದ್ಯರಿಲ್ಲ.

ರಾಜ್ಯದಲ್ಲೂ ನಗರ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್‌ ಅನ್ನು ಈ ಹಿಂದಿನ ಬಿಜೆಪಿ ಸರ್ಕಾರ ಕಳೆದ ವರ್ಷ ಡಿಸೆಂಬರ್‌ನಲ್ಲಿ ಆರಂಭಿಸಿತ್ತು.    ಕೊಳಗೇರಿ ಪ್ರದೇಶ ಗಳಲ್ಲಿ ನಮ್ಮ ಕ್ಲಿನಿಕ್‌ ಸ್ಥಾಪಿಸಿ ಉಚಿತ ಆರೋಗ್ಯ ಸೇವೆ ದೊರ ಕಿಸುವುದು ಇದರ ಮೂಲ ಉದ್ದೇಶ.

ಮಂಜೂರು: ನಮ್ಮ ಕ್ಲಿನಿಕ್‌ ಸ್ಥಾಪಿಸುವ ಪಟ್ಟಣಗಳಲ್ಲಿ ಕನಿಷ್ಠ 30 ಸಾವಿರ ಜನಸಂಖ್ಯೆ ಇರಬೇಕೆಂಬ ನಿಯಮ ಇತ್ತು. ಆ ಪ್ರಕಾರ ಜಿಲ್ಲೆಗೆ ಪ್ರಾರಂಭದಲ್ಲಿ ಚಾಮರಾಜನಗರದಲ್ಲಿ ಮಾತ್ರ ಒಂದು ಕ್ಲಿನಿಕ್‌ ಮಂಜೂರಾಗಿತ್ತು. ಜಿಲ್ಲೆಯ ಪಟ್ಟಣಗಳಲ್ಲಿ ಆರೋಗ್ಯ ಸೇವೆ ಅಗತ್ಯದ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಮನವಿ ಮಾಡಿದ್ದರಿಂದ ಇನ್ನೆರಡು ಕ್ಲಿನಿಕ್‌ಗಳನ್ನು ಮಂಜೂರು ಮಾಡಲಾಯಿತು.

Advertisement

ಸೇವೆ: ನಮ್ಮ ಕ್ಲಿನಿಕ್‌ಗಳಲ್ಲಿ ಬಿಪಿ, ಶುಗರ್‌, ಪ್ರಾಥಮಿಕ ಆರೋಗ್ಯ ಸೇವೆಗೆ ಸಂಬಂಧಿಸಿದ ರಕ್ತ ಪರೀಕ್ಷೆ, ವೈದ್ಯರಿಂದ ತಪಾಸಣೆ, ಸಲಹೆ ಸೂಚನೆ, ಔಷಧಿ, ಮಾತ್ರೆ ವಿತರಣೆ ಮಾಡಲಾಗುತ್ತಿದೆ. ಜನರ ಆರೋಗ್ಯ ತಪಾಸಣೆ ನಮ್ಮ ಕ್ಲಿನಿಕ್‌ನ ಉದ್ದೇಶವಾಗಿದ್ದು  ಎಷ್ಟೋ ಜನರಿಗೆ ತಮಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಇದೆ ಎಂಬುದು ತಿಳಿದಿರುವು ದಿಲ್ಲ. ಹಾಗಾಗಿ ಚಿಕಿತ್ಸೆ ಪಡೆದಿರುವುದಿಲ್ಲ.  ಅವರು ತಮ್ಮ ಜೀವನ ಶೈಲಿ ಸುಧಾರಿಸಿ ಆರೋಗ್ಯವಾಗಿ ರಲು ಸಹಾಯಕವಾ ಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವೇಶ್ವರಯ್ಯ ತಿಳಿಸಿದರು.

ನಮ್ಮ ಕ್ಲಿನಿಕ್‌ ಸಮಯ :

ನಮ್ಮ ಕ್ಲಿನಿಕ್‌ ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ಕಾರ್ಯನಿರ್ವಹಿಸುತ್ತಿದೆ. ಮುಂದೆ ಈ ವೇಳೆ ಬದಲಿಸಿ, ಬೆಳಗ್ಗೆ ಪ್ರಯೋಗಾಲಯ ತಪಾಸಣೆಗೆ ಸೀಮಿತ, ಮಧ್ಯಾಹ್ನ 3 ರಿಂದ 8ರವರೆಗೆ ವೈದ್ಯರಿಂದ ತಪಾಸಣೆ ಚಿಕಿತ್ಸೆ ನೀಡುವಂತೆ ವೇಳಾಪಟ್ಟಿ ಬದಲಿಸಲು ಸರ್ಕಾರ ಉದ್ದೇಶಿಸಿದೆ. ಪ್ರಾಯೋಗಿಕವಾಗಿ ಕೆಲ ಕ್ಲಿನಿಕ್‌ಗಳಲ್ಲಿ ಈ ವೇಳೆ ಜಾರಿಗೊಳಿಸಲಾಗುವುದು. ಜಿಲ್ಲೆಯಲ್ಲಿ ಕೊಳ್ಳೇಗಾಲ ನಮ್ಮ ಕ್ಲಿನಿಕ್‌ನಲ್ಲಿ ಈ ವೇಳಾಪಟ್ಟಿ ಜಾರಿಗೊಳಿಸಲಾಗುವುದು ಎಂದು ಡಿಎಚ್‌ಒ ಡಾ.ವಿಶ್ವೇಶ್ವರಯ್ಯ “ಉದಯವಾಣಿ’ಗೆ ತಿಳಿಸಿದರು.

ನಮ್ಮ ಕ್ಲಿನಿಕ್‌ ಸರ್ಕಾರದ ಉತ್ತಮ ಯೋಜನೆ. ಸಣ್ಣಪುಟ್ಟ ಕಾಯಿಲೆಗೆ ರೋಗಿಗಳು ದೊಡ್ಡ ಆಸ್ಪತ್ರೆಗೆ ಹೋದರೆ, ಚೀಟಿ ಮಾಡಿಸಬೇಕು, ಕ್ಯೂ ನಿಲ್ಲಬೇಕು. ನಮ್ಮ ಕ್ಲಿನಿಕ್‌ನಲ್ಲಿ ನೇರವಾಗಿ ಆಗಮಿಸಿ ಚಿಕಿತ್ಸೆ ಪಡೆಯಬಹುದು.-ಡಾ.ಕೆ.ಎಂ.ವಿಶ್ವೇಶ್ವರಯ್ಯ, ಜಿಲ್ಲಾ ಆರೋಗ್ಯಾಧಿಕಾರಿ 

-ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next