ಚಿತ್ರಕಲಾವಿದ ಎಂ. ಶೈಲಕುಮಾರ್ ಅವರು ಒಟ್ಟು 1316 ಮತಗಳನ್ನೂ, ಅವರ ಸಮೀಪದ ಪ್ರತಿಸ್ಪರ್ಧಿ ಗಾಯಕ ಸಿ.ಎಂ. ನರಸಿಂಹಮೂರ್ತಿ 673 ಮತಗಳನ್ನೂ ಪಡೆದರು. ಇನ್ನೋರ್ವ ಸ್ಪರ್ಧಿ ನಾಗೇಶ್ ಸೋಸ್ಲೆ 150 ಮತಗಳನ್ನು ಪಡೆದರೆ, ಸ್ನೇಹಾ 22 ಮತ ಗಳಿಸಿದ್ದಾರೆ.
Advertisement
ಎಂ. ಶೈಲಕುಮಾರ್ ಅವರು, ಚಾಮರಾಜನಗರದ ತಾಲೂಕು ಕಚೇರಿ ಸಭಾಂಗಣದ ಮತಗಟ್ಟೆಯಲ್ಲಿ 266, ಆಡಳಿತ ಶಾಖೆ ಮತಗಟ್ಟೆಯಲ್ಲಿ 223 ಹಾಗೂ ಚುನಾವಣಾ ಶಾಖೆ ಮತಗಟ್ಟೆಯಲ್ಲಿ 112 ಮತಗಳನ್ನೂ, ಯಳಂದೂರು ತಾಲೂಕಿನಲ್ಲಿ 143, ಕೊಳ್ಳೇಗಾಲ ತಾಲೂಕಿನಲ್ಲಿ 177, ಗುಂಡ್ಲುಪೇಟೆ ತಾಲೂಕಿನಲ್ಲಿ 328 ಮತಗಳನ್ನೂ, ಹನೂರು ತಾಲೂಕಿನಲ್ಲಿ 67 ಮತಗಳನ್ನು ಪಡೆದರು.
Related Articles
Advertisement
ಇದನ್ನೂ ಓದಿ : ಕಡಬ: ಕಡ್ಯ ಕೊಣಾಜೆ ಪ್ರದೇಶದಲ್ಲಿ ಹಾಡಹಗಲೇ ಮನೆ ಅಂಗಳಕ್ಕೆ ನುಗ್ಗಿದ ಕಾಡಾನೆ
ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವೆ: ಆಯ್ಕೆ ಬಳಿಕ ಮಾತನಾಡಿದ ಶೈಲಕುಮಾರ್, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹೋಬಳಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನವನ್ನು ಮಾಡುವ ಉದ್ದೇಶವನ್ನು ಹೊಂದಿ ಮತಯಾಚನೆ ಮಾಡಿದ್ದೆ. ಜಿಲ್ಲೆಯ ಮತದಾರರು ಇದಕ್ಕೆ ಪೂರಕವಾಗಿ ಸ್ಪಂದಿಸಿ, ಹೆಚ್ಚಿನ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದಾರೆ. ಅವರಿಗೆ ಅಭಾರಿಯಾಗಿದ್ದೇನೆ.
ನನ್ನ ಗೆಲುವಿಗೆ ಕಾರಣಕರ್ತರಾದ ಪರಿಷತ್‌ನ ಹಿಂದಿನ ಅಧ್ಯಕ್ಷರಾದ ಮಲೆಯೂರು ಗುರುಸ್ವಾಮಿ, ಎ.ಎಂ. ನಾಗಮಲ್ಲಪ್ಪ, ಸೋಮಶೇಖರ್ ಬಿಸಲ್ವಾಡಿ ಹಾಗೂ ಬಿ.ಎಸ್. ವಿನಯ್ ಅವರು ಹಾಗೂ ಜಿಲ್ಲೆಯ ಎಲ್ಲಾ ಸಾಹಿತ್ಯಸಕ್ತರು, ಹಾಗೂ ಮತದಾರರಿಗೆ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲಾ ಸಾಹಿತ್ಯಕ್ತರು, ಚುನಾಯಿತ ಪ್ರತಿನಿಧಿಗಳ ಸಹಕಾರದೊಂದಿಗೆ ಗಡಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅನ್ನು ಹೆಚ್ಚಿನ ಪ್ರಗತಿ ಮಾಡುವುದಾಗಿ ಶೈಲಕುಮಾರ್ ತಿಳಿಸಿದರು.
ವಿಜಯೋತ್ಸವ : ಶೈಲಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು ಹೂವಿನ ಹಾರ ಹಾಕಿ, ಸಿಹಿ ತಿನ್ನಿಸುವ ಮೂಲಕ ವಿಜಯೋತ್ಸವ ಆಚರಣೆ ಮಾಡಿದರು.