Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಚಿವ ಎಸ್.ಸುರೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ದಸರಾ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯು ಹೆಚ್ಚುತ್ತಿದೆ. ಹೀಗಾಗಿ ಸಾಮಾಜಿಕ ಅಂತರ, ಇನ್ನಿತರ ಕಾರಣಗಳಿಂದ ಈ ಹಿಂದಿನಂತೆ ಪೂಜೆ ಮತ್ತಿತರ ಸಾಂಪ್ರದಾಯಕ ಆಚರಣೆ ಮಾತ್ರ ಇರುವುದು ಒಳಿತು. ಆದರೆ ದೀಪಾಲಂಕಾರ ಮಾತ್ರ ಎಂದಿನಂತೆ ಇರಲಿ, ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಬೇಡ ಎಂದರು.
Related Articles
Advertisement
ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಆನ್‌ಲೈನ್ ಮೂಲಕ ಮಾತನಾಡಿ, ನಗರದ ಪ್ರಮುಖ ರಸ್ತೆ, ಉದ್ಯಾನವನಗಳಿಗೆ ದೀಪಾಲಂಕಾರಕ್ಕಾಗಿಮುಂದೆ ಬರುವ ಪ್ರಾಯೋಜಕರೊಂದಿಗೆ ಸಮಾಲೋಚಿಸಲಾಗುವುದು, ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ಪೂಜೆ-ಪುನಸ್ಕಾರಕ್ಕಾಗಿ ತಿಳಿಸಲಾಗುವುದು ಎಂದರು.
ತಾಪಂ ಉಪಾಧ್ಯಕ್ಷ ಕೆ.ರವೀಶ್, ಜಿಪಂ ಸಿಇಒ ಹರ್ಷಲ್ ಬೋಯಲ್ ನಾರಾಯಣ್ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಹೆಚ್ಚುವರಿ ಎಸ್ಪಿ ಅನಿತಾ ಹದ್ದಣ್ಣನವರ್, ಎಸಿ ಡಾ. ಗಿರೀಶ್ ದಿಲೀಪ್ ಬೋಡ್ಲೆ ಇತರರಿದ್ದರು.