Advertisement

ಮತದಾರರಿಗೆ ಆಮಿಷವೊಡ್ಡಿದರೆ ನಿರ್ದಾಕ್ಷಿಣ್ಯಕ್ರಮ : ಜಿಲ್ಲಾಧಿಕಾರಿ ಎಚ್ಚರಿಕೆ

12:38 PM Dec 10, 2020 | sudhir |

ಚಾಮರಾಜನಗರ: ಗ್ರಾಮಪಂಚಾಯ್ತಿಚುನಾವಣೆಮಾದರಿನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಯಾವುದೇ ಭಾಗದಲ್ಲಿ ಆಮಿಷವೊಡ್ಡುವುದು, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡುವುದು ಕಂಡು ಬಂದಲ್ಲಿ
ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರವಿ ಸೂಚಿಸಿದರು.

Advertisement

ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಿಗದಿಯಾಗಿರುವ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ‌ ಅವರು ಬುಧವಾರ ಭೇಟಿ ನೀಡಿ ಚುನಾವಣಾ ಕಾರ್ಯ ಪ್ರಕ್ರಿಯೆಯನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ಹಾಗೂ ಗುಂಡ್ಲುಪೇಟೆ ತಾಲೂಕಿನ
ತೆರಕಣಾಂಬಿ, ಬೇಗೂರು, ಕಬ್ಬಳ್ಳಿ, ಸೋಮಳ್ಳಿ, ಬಲಚವಾಡಿ, ರಾಘವಾಪುರ, ಅಗತಗೌಡನಹಳ್ಳಿ ಗ್ರಾಮ ಪಂಚಾಯಿತಿಯಗಳಿಗೆ ಭೇಟಿ ನೀಡಿ ಚುನಾವಣಾ ಸಂಬಂಧ ಅಧಿಕಾರಿಗಳು ನಿರ್ವಹಿಸುತ್ತಿರುವಕಾರ್ಯಗಳನ್ನು ವೀಕ್ಷಿಸಿದರು.

ಮಾಸ್ಕ್ ಕಡ್ಡಾಯ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಅತ್ಯಂತ ಶಿಸ್ತು ಬದ್ಧವಾಗಿ ನಿರ್ವಹಿಸಬೇಕು.ಕೋವಿಡ್‌ ಮುಂಜಾಗ್ರತಾಕ್ರಮಗಳನ್ನುಕಡ್ಡಾಯವಾಗಿ ಪಾಲನೆ ಮಾಡಬೇಕು. ಅಭ್ಯರ್ಥಿಗಳು ಹಾಗೂ ಅವರ ಪರವಾಗಿ ಬರುವ ಸೂಚಕರು
ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಈ ಬಗ್ಗೆ ಗ್ರಾಮ ಪಂಚಾಯಿತಿಯ ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಬೇಕು. ನಾಮಪತ್ರ ಸ್ವೀಕರಿಸಿದ ದಿನಾಂಕ ಹಾಗೂ ಸಮಯವನ್ನು ತಪ್ಪದೇ ಸ್ಪಷ್ಟವಾಗಿ ನಮೂದಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಇದನ್ನೂ ಓದಿ;ಫ್ಯಾಷನ್‌ ಲೋಕ…ಹೆಂಗಳೆಯರ ಮನಸೂರೆಗೊಳ್ಳುವ ವೈವಿಧ್ಯಮಯ ಹೇರ್ ಕ್ಲಿಪ್

ಪ್ರತಿ ಗ್ರಾಮಪಂಚಾಯಿತಿ ಕಾರ್ಯಾಲಯದ ಮುಂಭಾಗದಲ್ಲಿಚುನಾವಣೆಯ ಕ್ಷೇತ್ರಗಳು ಮತ್ತು ಸ್ಥಾನಗಳ ಸಂಖ್ಯೆಯನ್ನು ಸಾರ್ವಜನಿಕರು ತಿಳಿಯುವಂತೆ ಪ್ರದರ್ಶಿಸಬೇಕು. ನಾಮಪತ್ರ ಸ್ವೀಕೃತಿ ಸಂಬಂಧ ರಿಜಿಸ್ಟರ್ ನಿರ್ವಹಣೆ ಮಾಡಬೇಕು
ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

ಮೂಲಸೌಕರ್ಯ: ಮತಗಟ್ಟೆಯಲ್ಲಿ ಮೂಲ ಸೌಕರ್ಯಗಳನ್ನು ಖಾತರಿಪಡಿಸಿಕೊಳ್ಳಬೇಕು, ಪ್ರತಿ ಮತಗಟ್ಟೆಯಲ್ಲಿ ನೀರು, ವಿದ್ಯುತ್‌, ಶೌಚಾಲಯ, ರ್‍ಯಾಂಪ್‌ ಇತರೆ ಸೌಲಭ್ಯಗಳು ಸರಿ ಇವೆಯೇ ಎಂಬ ಬಗ್ಗೆ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲಸಬೇಕು. ತಹಶೀಲ್ದಾರರು ಹಾಗೂ ತಾಪಂ ಇಒಗಳು ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಜನರಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ಕುರಿತು ವ್ಯಾಪಕವಾಗಿ ತಿಳಿವಳಿಕೆ ಜಾಗೃತಿ ಮೂಡಿಸಬೇಕೆಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌, ಗುಂಡ್ಲುಪೇಟೆ ತಹಶೀಲ್ದಾರ್‌ ನಂಜುಂಡಯ್ಯ,
ತಾಪಂ ಇಒ ವಿ.ಪಿ.ಕುಲದೀಪ್‌ ಇತರೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next