ಚಾಮರಾಜನಗರ: ಜಿಲ್ಲೆಯಲ್ಲಿ ಇಂದು ಒಟ್ಟು 28 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 434 ಕ್ಕೇರಿದೆ. 232 ಮಂದಿ ಗುಣಮುಖರಾಗಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 196 ಇವೆ.
ಇಂದು 589 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದರಲ್ಲಿ 216 ಮಾದರಿಗಳು ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಆಗಿವೆ. 560 ಮಾದರಿಗಳ ಫಲಿತಾಂಶ ನೆಗೆಟಿವ್ ಆಗಿದೆ.
ಕೊಳ್ಳೇಗಾಲ ತಾಲೂಕಿನಿಂದ 15, ಚಾಮರಾಜನಗರ ತಾಲೂಕಿನಿಂದ 9, ಗುಂಡ್ಲುಪೇಟೆ ತಾಲೂಕಿನಿಂದ 2, ಯಳಂದೂರು ಹಾಗೂ ಹನೂರು ತಾಲೂಕಿನಿಂದ ತಲಾ 1 ಪ್ರಕರಣ ಪತ್ತೆಯಾಗಿವೆ.
ಕೊಳ್ಳೇಗಾಲ ತಾಲೂಕು: 31 ವರ್ಷದ ಯುವಕ, ಪೌರಕಾರ್ಮಿಕ ಕಾಲೋನಿ, ಪಟ್ಟಣ. 34 ವರ್ಷದ ಯುವಕ, 24 ವರ್ಷದ ಯುವತಿ, 56 ವರ್ಷದ ಪುರುಷ, 30 ವರ್ಷದ ಯುವಕ ಮಹದೇಶ್ವರ ಬೆಟ್ಟ, 18 ವರ್ಷದ ಯುವತಿ, 75 ವರ್ಷದ ವೃದ್ಧ ಪಟ್ಟಣ. 48 ವರ್ಷದ ಪುರುಷ ಕುರುಬರ ಬೀದಿ, ಪಟ್ಟಣ. 45 ವರ್ಷದ ಪುರುಷ ರಾಜೀವ್‌ನಗರ, ಪಟ್ಟಣ. 40 ವರ್ಷದ ಮಹಿಳೆ, 60 ವರ್ಷದ ಮಹಿಳೆ ಸತ್ತೇಗಾಲ. 32 ವರ್ಷದ ಯುವತಿ, 50 ವರ್ಷದ ಮಹಿಳೆ, 45 ವರ್ಷದ ಪುರುಷ, 45 ವರ್ಷದ ಮಹಿಳೆ, ನಾಯಕರ ಬೀದಿ, ಇಕ್ಕಡಹಳ್ಳಿ.
ಚಾಮರಾಜನಗರ ತಾಲೂಕು: 20 ವರ್ಷದ ಯುವತಿ, ಪಟ್ಟಣ. 39 ವರ್ಷದ ಪುರುಷ ಅಂಬೇಡ್ಕರ್ ಬೀದಿ, ಪಟ್ಟಣ. 35 ವರ್ಷದ ಮಹಿಳೆ ಬುದ್ಧನಗರ, 47 ವರ್ಷದ ಪುರುಷ ಸೋಮವಾರಪೇಟೆ. 23 ವರ್ಷದ ಯುವಕ, 24 ವರ್ಷದ ಯುವಕ, ಬಾನಹಳ್ಳಿ. 30 ವರ್ಷದ ಯುವಕ, ಕಣ್ಣೇಗಾಲ. 36 ವರ್ಷದ ಪುರುಷ ರೈಲ್ವೆ ಬಡಾವಣೆ, ಪಟ್ಟಣ. 64 ವರ್ಷದ ವೃದ್ಧ, ಮಾದಾಪುರ.
ಗುಂಡ್ಲುಪೇಟೆ ತಾಲೂಕು: 20 ವರ್ಷದ ಯುವತಿ, ತೊಂಡವಾಡಿ. 26 ವರ್ಷದ ಯುವತಿ, ಪಟ್ಟಣ ಪೊಲೀಸ್ ಠಾಣೆ.
ಹನೂರು ತಾಲೂಕು: 26 ವರ್ಷದ ಯುವಕ ಬಂಡಳ್ಳಿ.
ಯಳಂದೂರು ತಾಲೂಕು: 22 ವರ್ಷದ ಯುವತಿ, ಮಾಂಬಳ್ಳಿ.