ಚಾಮರಾಜನಗರ: ಕೋವಿಡ್ ಎರಡನೇ ಅಲೆ ಆರಂಭವಾದ ಬಳಿಕ 700 ರವರೆಗೂ ಹೋಗಿದ್ದ ಪ್ರತಿದಿನದ ಪ್ರಕರಣಗಳ ಸಂಖ್ಯೆ ಮಂಗಳವಾರ ಎರಡಂಕಿಗೆ ಇಳಿದಿದೆ. ಮಂಗಳವಾರ 93 ಪ್ರಕರಣಗಳು ದೃಢಪಟ್ಟಿವೆ.
ಎರಡನೇ ಅಲೆ ಆರಂಭವಾದ ಬಳಿಕ ಜಿಲ್ಲೆಯಲ್ಲಿ ಪ್ರತಿದಿನದ ಪ್ರಕರಣಗಳು ನಾಗಾಲೋಟದಿಂದ ಏರುತ್ತ 700ರವರೆಗೂ ತಲುಪಿದ್ದವು. ಕಳೆದ ಒಂದು ವಾರದಿಂದ 200, 150ರ ಆಸುಪಾಸಿನಲ್ಲಿದ್ದ ಪ್ರಕರಣಗಳು, ಮಂಗಳವಾರ 93ಕ್ಕೆ ಬಂದಿವೆ.
ಇದೇ ವೇಳೆ ಜಿಲ್ಲೆಯಲ್ಲಿ ಮಂಗಳವಾರ ಸೋಂಕಿನಿಂದ ಓರ್ವ ವೃದ್ಧರು ಮೃತಪಟ್ಟಿದ್ದಾರೆ. ತಾಲೂಕಿನ ಬಾನಹಳ್ಳಿ ಗ್ರಾಮದ 80 ವರ್ಷದ ವೃದ್ಧರು ಮಂಗಳವಾರ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತುತ 1233 ಸಕ್ರಿಯ ಪ್ರಕರಣಗಳಿವೆ. ಒಟ್ಟು 463 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. ಒಟ್ಟು 29730 ಮಂದಿಗೆ ಸೋಂಕು ದೃಢಪಟ್ಟಿದ್ದು, ಇವರಲ್ಲಿ 28014 ಮಂದಿ ಗುಣಮುಖರಾಗಿದ್ದಾರೆ.
ಕೋವಿಡ್ ಅಂಕಿ ಅಂಶ
ಇಂದಿನ ಪ್ರಕರಣ: 93
ಇಂದು ಗುಣಮುಖ: 128
ಒಟ್ಟು ಗುಣಮುಖ: 28014
ಇಂದಿನ ಸಾವು: 01
ಒಟ್ಟು ಸಾವು: 463
ಸಕ್ರಿಯ ಪ್ರಕರಣಗಳು: 1233
ಒಟ್ಟು ಪ್ರಕರಣಗಳು: 29730