Advertisement

ಕೋವಿಡ್‌ನಿಂದಾಗಿ ಚೀನಾದಿಂದ ಭಾರತಕ್ಕೆ ಬಂದರೂ ಕೋವಿಡ್‌ಗೆ ಬಲಿಯಾದ ಸಂಶೋಧಕ

08:37 PM May 23, 2021 | Team Udayavani |

ಚಾಮರಾಜನಗರ: ಚೀನಾದಲ್ಲಿ ಕೋವಿಡ್ ಕಾಣಿಸಿಕೊಂಡ ಕಾರಣ 2019ರಲ್ಲಿ ಭಾರತಕ್ಕೆ ಮರಳಿದ್ದ ಹಿರಿಯ ಸಂಶೋಧಕರೋರ್ವರು ಕೋವಿಡ್‌ನಿಂದಾಗಿಯೇ ಮೃತಪಟ್ಟಿರುವ ವಿಪರ್ಯಾಸದ ಘಟನೆ ಜಿಲ್ಲೆಯ ಹನೂರು ತಾಲೂಕಿನ ಗುಂಡಾಪುರದಲ್ಲಿ ನಡೆದಿದೆ.

Advertisement

ಗುಂಡಾಪುರ ಗ್ರಾಮದ ಸೆಲ್ವನಾಯಕ್ (36) ಮೃತಪಟ್ಟವರು. ಇವರಿಗೆ 15 ದಿನಗಳ ಹಿಂದೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿತ್ತು. ಹೋಂ ಐಸೋಲೇಷನ್ ನಲ್ಲಿದ್ದರು. ವಾರದ ಬಳಿಕ ತೀವ್ರ ರೋಗ ಲಕ್ಷಣಗಳು ಕಾಣಿಸಿಕೊಂಡ ಕಾರಣ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ. ಮೃತರು ತಂದೆ ತಾಯಿ, ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಇದನ್ನೂ ಓದಿ :Airforce Test Pilot ಪದವೀಧರೆಯಾದ ಮೊದಲ ಭಾರತೀಯ ಮಹಿಳೆ: ಚಾ.ನಗರ ಜಿಲ್ಲೆಯ ಆಶ್ರಿತಾ ಒಲೇಟಿ

ಸೆಲ್ವ ನಾಯಕ್ ಅವರು, ಚೀನಾದ ಚೋಂಗ್‌ಕ್ವಿಂಗ್ ನಲ್ಲಿರುವ ಸೌತ್‌ವೆಸ್‌ಟ್ ವಿಶ್ವವಿದ್ಯಾಲಯದಲ್ಲಿ ಹಿರಿಯ ಸಂಶೋಧಕ ಸಹಾಯಕರಾಗಿ ನಾಲ್ಕು ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು. 2019ರ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಕೊರೊನಾ ವೈರಸ್ ಕಾಣಸಿಕೊಂಡ ಕಾರಣ, ಭಾರತಕ್ಕೆ ಮರಳಿ, ಸ್ವಗ್ರಾಮ ಹನೂರು ತಾಲೂಕು ಗುಂಡಾಪುರದಲ್ಲಿದ್ದರು. ಕೋವಿಡ್ ಮೊತ್ತ ಮೊದಲ ಬಾರಿಗೆ ಚೀನಾದಲ್ಲಿ ಕಾಣಿಸಿಕೊಂಡ ಕಾರಣ ಅಲ್ಲಿಂದ ಭಾರತಕ್ಕೆ ಬಂದರೂ, ಎರಡನೇ ಅಲೆ ಸಂದರ್ಭದಲ್ಲಿ ಅವರು ಕೋವಿಡ್‌ಗೇ ಬಲಿಯಾಗಿದ್ದು ವಿಪರ್ಯಾಸ.

ಸೆಲ್ವ ನಾಯಕ್ ಅವರ ನಿಧನಕ್ಕೆ ಜಿಲ್ಲಾ ಲಂಬಾಣಿ ನೌಕರರ ಬಳಗದವರು ಹಾಗೂ ಲೇಖಕ ಪಳನಿಸ್ವಾಮಿ ಜಾಗೇರಿ ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next