Advertisement

ಚಾಮರಾಜನಗರ ಜಿಲ್ಲೆಯಲ್ಲಿ 30 ಕೋವಿಡ್ ಪ್ರಕರಣ ಪತ್ತೆ: ಶತಕ ದಾಟಿದ ಸಕ್ರಿಯ ಪ್ರಕರಣಗಳು

09:21 PM Apr 05, 2021 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಳೆದ ಒಂದು ವಾರದಿಂದ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿವೆ. ವಾರದ ಹಿಂದೆ ಸಿಂಗಲ್ ಡಿಜಿಟ್ ಇದ್ದ ಪ್ರಕರಣಗಳು ದಿಢೀರ್ ಏರಿಕೆ ಕಂಡು ಸೋಮವಾರ ಒಟ್ಟು 30 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಶತಕ ದಾಟಿದೆ.

Advertisement

15 ದಿನಗಳ ಹಿಂದೆಯಷ್ಟೇ ಜಿಲ್ಲೆಯಲ್ಲಿ ಪ್ರತಿ ದಿನ ಶೂನ್ಯ, ಎರಡು, ಮೂರು, ಐದು ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಕಳೆದ ಒಂದು ವಾರದಿಂದ ಪ್ರಕರಣಗಳ ಸಂಖ್ಯೆ ದ್ವಿಗುಣ ಗತಿಯಲ್ಲಿ ಏರಿಕೆಯಾಗುತ್ತಿವೆ. ಎರಡು ದಿನಗಳ ಹಿಂದೆ ದಿನ 18 ಹಾಗೂ 15 ಪ್ರಕರಣಗಳು ವರದಿಯಾಗಿದ್ದರೆ, ಸೋಮವಾರ ಏಕಾಏಕಿ 30 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಮೈಸೂರಿನಲ್ಲಿ ದೃಢೀಕೃತವಾದ 3 ಪ್ರಕರಣಗಳು ಸೇರಿವೆ.

30 ಪ್ರಕರಣಗಳಲ್ಲಿ ಚಾ.ನಗರ ತಾಲೂಕಿನಿಂದ 8, ಗುಂಡ್ಲುಪೇಟೆ ತಾಲೂಕಿನಿಂದ 10, ಕೊಳ್ಳೇಗಾಲ ತಾಲೂಕಿನಿಂದ 5, ಹನೂರು ತಾಲೂಕಿನಿಂದ 3, ಯಳಂದೂರು ತಾಲೂಕಿನಿಂದ 4 ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ :ಪೊಲೀಸರ ಬಲೆಗೆ ಬಿದ್ದ ಎಟಿಎಂ ವಂಚಕ ! ಈತನ ಬಳಿ ಇತ್ತು 112 ಎಟಿಎಂ ಕಾರ್ಡ್

ನಾಲ್ವರು ಸೋಂಕಿತರು ಗುಣಮುಖರಾಗಿದ್ದಾರೆ. ಮೂವರು ಐಸಿಯುನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 59 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 7,146ಕ್ಕೇರಿವೆ. ಇವರಲ್ಲಿ 6913 ಮಂದಿ ಗುಣಮುಖರಾಗಿದ್ದಾರೆ.

Advertisement

ಜಿಲ್ಲೆಯಲ್ಲಿ ಇದುವರೆಗೆ 132 ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಸೋಮವಾರ ಒಟ್ಟು 933 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು.

ಕೋವಿಡ್ ಅಂಕಿ ಅಂಶ
ಇಂದಿನ ಪ್ರಕರಣ: 30
ಇಂದು ಗುಣಮುಖ: 04
ಒಟ್ಟು ಗುಣಮುಖ: 6913
ಇಂದಿನ ಸಾವು: 00
ಒಟ್ಟು ಸಾವು: 132
ಸಕ್ರಿಯ ಪ್ರಕರಣಗಳು: 101
ಒಟ್ಟು ಸೋಂಕಿತರು: 7146

Advertisement

Udayavani is now on Telegram. Click here to join our channel and stay updated with the latest news.

Next