ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ 47 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 85 ಮಂದಿ ಗುಣಮುಖರಾಗಿದ್ದಾರೆ. ಓರ್ವರು ಮೃತಪಟ್ಟಿದ್ದಾರೆ.
ಯಳಂದೂರು ತಾಲೂಕು ಗಣಿಗನೂರು ಗ್ರಾಮದ ನಿವಾಸಿ 48 ವರ್ಷದ ವ್ಯಕ್ತಿ ಅ. 6 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 5437 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 4565 ಮಂದಿ ಗುಣಮುಖರಾಗಿದ್ದಾರೆ. 757 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 113ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಭಾನುವಾರ ಒಟ್ಟು 1132ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 47 ಪ್ರಕರಣಗಳು ಮಾತ್ರ ಪಾಸಿಟವ್ ಆಗಿರುವುದು ಸಮಾಧಾನಕರ ಸಂಗತಿಯಾಗಿದೆ.
ಇಂದಿನ ಪ್ರಕರಣಗಳು: 47
ಇಂದು ಗುಣಮುಖ: 85
ಒಟ್ಟು ಗುಣಮುಖ: 4565
ಇಂದಿನ ಸಾವು: 01
ಒಟ್ಟು ಸಾವು: 115
ಸಕ್ರಿಯ ಪ್ರಕರಣಗಳು: 757
ಒಟ್ಟು ಸೋಂಕಿತರು: 5437