Advertisement

ಚಾಮರಾಜನಗರ: ಕೋವಿಡ್ ಸೋಂಕಿಗೆ ಇಬ್ಬರು ಬಲಿ! 65 ಹೊಸ ಪ್ರಕರಣ ಪತ್ತೆ, 62 ಮಂದಿ ಗುಣಮುಖ

08:05 PM Oct 17, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಶನಿವಾರ 65 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 62 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ.

Advertisement

ಗುಂಡ್ಲುಪೇಟೆ ತಾಲೂಕು ತೆರಕಣಾಂಬಿ ಗ್ರಾಮದ 75 ರ್ಷದ ವೃದ್ಧ ಹಾಗೂ ಚಾ.ನಗರ ತಾಲೂಕು ಹರವೆ ಗ್ರಾಮದ 62 ವರ್ಷದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 5390 ಪ್ರಕರಣಗಳು ದೃಢಪಟ್ಟಿವೆ. 4480 ಮಂದಿ ಗುಣಮುಖರಾಗಿದ್ದಾರೆ. 796 ಸಕ್ರಿಯ ಪ್ರಕರಣಗಳಿವೆ. 114 ಮಂದಿ ಮೃತಪಟ್ಟಿದ್ದಾರೆ. 46 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 227 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಇಂದಿನ ಪ್ರಕರಣಗಳು: 65
ಇಂದು ಗುಣಮುಖ: 62
ಒಟ್ಟು ಗುಣಮುಖ: 4480
ಇಂದಿನ ಸಾವು: 02
ಒಟ್ಟು ಸಾವು: 114
ಸಕ್ರಿಯ ಪ್ರಕರಣಗಳು: 796
ಒಟ್ಟು ಸೋಂಕಿತರು: 5390

Advertisement

Udayavani is now on Telegram. Click here to join our channel and stay updated with the latest news.

Next