ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 40 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಸಮಾಧಾನಕರ ವಿಷಯವಾಗಿದ್ದು, ಇದೇ ವೇಳೆ ಇಂದು ಜಿಲ್ಲೆಯಲ್ಲಿ 25 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. 81 ಸಕ್ರಿಯ ಪ್ರಕರಣಗಳಿವೆ.
ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 259 ಪ್ರಕರಣಗಳು ದೃಢೀಕೃತವಾಗಿವೆ. 175 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 3 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಮೂವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ದೃಢಪಟ್ಟಿರುವ 25 ಪಾಸಿಟಿವ್ ಪ್ರಕರಣಗಳು, 513 ಮಾದರಿಗಳ ಪರೀಕ್ಷೆಯಿಂದ ದೃಢಪಟ್ಟಿವೆ. ಪ್ರಯೋಗಾಲಯಕ್ಕೆ ಕಳುಹಿಸಿರುವ ಮಾದರಿಗಳ ಪೈಕಿ ಇನ್ನು 143 ಮಾದರಿಗಳ ಫಲಿತಾಂಶ ಬಾಕಿಯಿದೆ.
ಜಿಲ್ಲೆಯಲ್ಲಿ ಇಂದು ವರದಿಯಾಗಿರುವ 25 ಪಾಸಿಟಿವ್‌ಪ್ರಕರಣಗಳಲ್ಲಿ, ಸಿಂಹಪಾಲು ಚಾಮರಾಜನಗರ ತಾಲೂಕಿನದ್ದಾಗಿದೆ. ಈ ತಾಲೂಕಿನಲ್ಲಿ ಇಂದು ಒಂದೇ ದಿನ 13 ಪ್ರಕರಣಗಳು ಪತ್ತೆಯಾಗಿವೆ. ಗುಂಡ್ಲುಪೇಟೆ ತಾಲೂಕಿನಲ್ಲಿ 7, ಕೊಳ್ಳೇಗಾಲ ತಾಲೂಕಿನಿಂದ 4 ಹಾಗೂ ಹನೂರು ತಾಲೂಕಿನಿಂದ 1 ಪ್ರಕರಣ ವರದಿಯಾಗಿದೆ. ಇವರಲ್ಲಿ 12 ಮಂದಿ ಬೆಂಗಳೂರಿನಿಂದ ಬಂದವರಾಗಿದ್ದಾರೆ.
ಚಾಮರಾಜನಗರ ತಾಲೂಕು: 38 ವರ್ಷದ ಮಹಿಳೆ ಮೂಡಲ ಅಗ್ರಹಾರ. 59 ವರ್ಷದ ಪುರುಷ ಸಂತೆಮರಹಳ್ಳಿ. 66 ವರ್ಷದ ವೃದ್ಧ ಹರದನಹಳ್ಳಿ. 21 ವರ್ಷದ ಯುವಕ ಪುಣಜನೂರು. 6 ವರ್ಷದ ಬಾಲಕ ಸಾಗಡೆ. 26 ವರ್ಷದ ಯುವಕ ನಾಗವಳ್ಳಿ, 30 ವರ್ಷದ ಮಹಿಳೆ ಉಮ್ಮತ್ತೂರು. 31 ವರ್ಷದ ಯುವಕ, 5ನೇ ವಾರ್ಡ್ ಚಾಮರಾಜನಗರ. 38 ವರ್ಷದ ಮಹಿಳೆ, ಸೋಮವಾರಪೇಟೆ. 14 ವರ್ಷದ ಬಾಲಕಿ, ಸೋಮವಾರಪೇಟೆ. 11 ವರ್ಷದ ಬಾಲಕಿ ಸೋಮವಾರಪೇಟೆ. 53 ವರ್ಷದ ಪುರುಷ ಜೆಎಸ್‌ಎಸ್ ಕಾಲೇಜ್ ಎದುರು, ಚಾ.ನಗರ. 42 ವರ್ಷದ ಪುರುಷ ಕಿರಗಸೂರು, ಮಾದಾಪುರ.
ಗುಂಡ್ಲುಪೇಟೆ ತಾಲೂಕು: 26 ವರ್ಷದ ಯುವಕ ಅಂಕಹಳ್ಳಿ. 38 ವರ್ಷದ ಪುರುಷ ಶಿಂಡನಪುರ. 43 ವರ್ಷದ ಪುರುಷ ಶಿಂಡನಪುರ. 23 ವರ್ಷದ ಯುವಕ ಹಂಗಳ. 43 ವರ್ಷದ ಪುರುಷ ಹಂಗಳ. 45 ವರ್ಷದ ಮಹಿಳೆ ಶಿಂಡನಪುರ. 42 ವರ್ಷದ ಮಹಿಳೆ ಹೊಸಳ್ಳಿ ಕಾಲೋನಿ.
ಕೊಳ್ಳೇಗಾಲ ತಾಲೂಕು: 33 ವರ್ಷದ ಪುರುಷ,ನಾಯಕರ ಬೀದಿ. ಕೊಳ್ಳೇಗಾಲ. 30 ವರ್ಷದ ಪುರುಷ ದೇವಾಂಗ ಬೀದಿ, ಕೊಳ್ಳೇಗಾಲ. 38 ವರ್ಷದ ಪುರುಷ ಭೀಮನಗರ, ಕೊಳ್ಳೇಗಾಲ, 27 ವರ್ಷದ ಯುವಕ ದೇವಾಂಗ ಬೀದಿ, ಕೊಳ್ಳೇಗಾಲ.
ಹನೂರು ತಾಲೂಕು: 29 ವರ್ಷದ ಯುವಕ ಬಂಡಳ್ಳಿ.