Advertisement

ಚಾಮರಾಜನಗರದಲ್ಲಿ 39 ಮಂದಿಗೆ ಕೋವಿಡ್ ಸೋಂಕು ದೃಢ! ಓರ್ವ ಸಾವು

06:54 PM Sep 03, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ ಕೋವಿಡ್ ಸೋಂಕಿನಿಂದ 76 ಮಂದಿ ಗುಣಮುಖರಾಗಿದ್ದಾರೆ. 39 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಓರ್ವ ವೃದ್ಧರು ಮೃತಪಟ್ಟಿದ್ದಾರೆ.

Advertisement

ಕೊಳ್ಳೇಗಾಲ ಪಟ್ಟಣದ 67 ವರ್ಷದ ವೃದ್ಧರು ಬುಧವಾರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಬರುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದರು. ನಿಧನದ ಬಳಿಕ ಪರೀಕ್ಷೆ ನಡೆಸಿದಾಗ ಕೋವಿಡ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 2530 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 1983 ಮಂದಿ ಗುಣಮುಖರಾಗಿದ್ದಾರೆ. 497 ಸಕ್ರಿಯ ಪ್ರಕರಣಗಳಿವೆ. 16 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 108 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.

ಗುರುವಾರ ಒಟ್ಟು 720 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದರಲ್ಲಿ 39 ಪಾಸಿಟಿವ್ ಫಲಿತಾಂಶ ಬಂದಿರುವುದು ಸಮಾಧಾನಕರ ಅಂಶವಾಗಿದೆ. ಚಾಮರಾಜನಗರ ತಾಲೂಕಿನಿಂದ 12, ಕೊಳ್ಳೇಗಾಲ 13, ಗುಂಡ್ಲುಪೇಟೆ 8, ಯಳಂದೂರು 4 ಹಾಗೂ ಹನೂರು ತಾಲೂಕಿನಿಂದ 1, ಹೊರ ಜಿಲ್ಲೆಯ 01 ಪ್ರಕರಣಗಳು ವರದಿಯಾಗಿವೆ.

ಇಂದಿನ ಪ್ರಕರಣಗಳು -39
ಇಂದು ಗುಣಮುಖ -76
ಒಟ್ಟು ಗುಣಮುಖ -1983
ಇಂದಿನ ಸಾವು -01
ಒಟ್ಟು ಸಾವು -50
ಸಕ್ರಿಯ ಪ್ರಕರಣಗಳು -497
ಒಟ್ಟು ಸೋಂಕಿತರು -2530

Advertisement
Advertisement

Udayavani is now on Telegram. Click here to join our channel and stay updated with the latest news.

Next