Advertisement

ಚಾಮರಾಜನಗರ : 73 ಮಂದಿ ಗುಣಮುಖ : 50 ಹೊಸ ಕೋವಿಡ್ ಪ್ರಕರಣ ಪತ್ತೆ

06:08 PM Aug 16, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ 50 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 73 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 1601 ಆಗಿದ್ದು, ಇದರಲ್ಲಿ 424 ಸಕ್ರಿಯ ಪ್ರಕರಣಗಳಿವೆ.

Advertisement

ಇದುವರೆಗೆ ಒಟ್ಟು 1147 ಮಂದಿ ಗುಣಮುಖರಾಗಿದ್ದಾರೆ. 19 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 134 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.

ಭಾನುವಾರ 452 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. 403 ಪ್ರಕರಣಗಳು ನೆಗೆಟಿವ್ ಆಗಿವೆ. ಒಟ್ಟು 50 ಪ್ರಕರಣಗಳಲ್ಲಿ, ಚಾಮರಾಜನಗರ ತಾಲೂಕಿನಿಂದ 21, ಕೊಳ್ಳೇಗಾಲ ತಾಲೂಕಿನಿಂದ 14, ಗುಂಡ್ಲುಪೇಟೆ ತಾಲೂಕಿನಿಂದ 12, ಯಳಂದೂರು ತಾಲೂಕಿನಿಂದ 3 ಪ್ರಕರಣಗಳು ವರದಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next