Advertisement

ಚಾಮರಾಜನಗರ ಜಿಲ್ಲೆ ಅಭಿವೃದ್ಧಿ ಹರಿಕಾರ ರಾಚಯ್ಯ

06:05 PM Aug 12, 2022 | Team Udayavani |

ಚಾಮರಾಜನಗರ: ಬುದ್ಧನ ಹಾದಿ, ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಆದರ್ಶ ಮತ್ತು ಮೌಲ್ಯಗಳನ್ನಿಟ್ಟುಕೊಂಡು ರಾಜಕಾರಣ ಮಾಡಿದ ರಾಚಯ್ಯನವರು ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಯ ಹರಿಕಾರ ಎಂದು ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಹೇಳಿದರು.

Advertisement

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟ ನೆಗಳ ಒಕ್ಕೂಟದಿಂದ ನಡೆದ ಬಿ.ರಾಚಯ್ಯ ಅವರ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂದಿನ ಶುದ್ಧ ರಾಜಕಾರಣದಲ್ಲಿ ಬೆಳೆದು ಬಂದವರು ಬಿ.ರಾಚಯ್ಯನವರು. ಗುಣಾತ್ಮಕ ನಾಯಕತ್ವ ಹೊಂದಿದ್ದರು. ಶಿಕ್ಷಣ ಸಚಿವರಾಗಿ ಸಮಗ್ರ ಶಿಕ್ಷಣ ನೀತಿ ಜಾರಿಗೆ ತಂದು ಶಿಕ್ಷಣ ಕ್ರಾಂತಿ ಮಾಡಿದರು. ಪ್ರಪಂಚಕ್ಕೆ ಅಹಿಂಸೆಯನ್ನು ಸಾರಿದ ಬುದ್ಧ, ದೇಶಕ್ಕೆ ಸಂವಿಧಾನಕೊಟ್ಟ ಅಂಬೇಡ್ಕರ್‌ ಅವರ ಹಾದಿಯಲ್ಲಿ ಸಾಗಿದ ಬಿ.ರಾಚಯ್ಯ ಅವರು ರಾಜಕೀಯ ಅಧಿಕಾರವನ್ನು, ತುಳಿತಕ್ಕೊಳಗಾದ ಸಮುದಾಯ ಗಳಿಗೆ ಸವಲತ್ತು ಕಲ್ಪಿಸಲು ಬಳಸಿದರು ಎಂದರು.

ರಾಚಯ್ಯನವರಿಗೆ ಮುಖ್ಯಮಂತ್ರಿಯಾಗುವ ಯೋಗ್ಯತೆ, ಅರ್ಹತೆ ಅಂದೇ ಇತ್ತು. ಅಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿ.ರಾಚಯ್ಯನವರು ಮುಖ್ಯಮಂತ್ರಿ ಮಾಡಬೇಕು ಎಂದು ಒತ್ತಾಯ ಮಾಡಿದವರಲ್ಲಿ ನಾನು ಮೊದಲಿಗ. ಆಗಿನ ಜಾತಿ ಕಾರಣದಿಂದ ಕೈ ತಪ್ಪಿತ್ತು ಎಂದರು.

ಕಬಿನಿ ಎರಡನೆಯ ಹಂತ ಯೋಜನೆ ಬಗ್ಗೆ ಬದನವಾಳು ಏತ ನೀರಾವರಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಒತ್ತು ಕೊಟ್ಟವರು ರಾಚಯ್ಯನವರು. ತಾವು ಮಾಡಿದ ಕೆಲಸಗಳ ಬಗ್ಗೆ ಅವರು ಎಂದು ಮಾತಾಡಲಿಲ್ಲ. ಹೆಜ್ಜೆ ಗುರುತನ್ನು ರಾಜ್ಯಾದ್ಯಂತ ಬಿಟ್ಟು ಹೋಗಿದ್ದಾರೆ.

Advertisement

ಸಿದ್ದರಾಮಯ್ಯ ಅವರನ್ನುಗುರುತಿಸಿ ಅವರಿಗೆ ನಾಯಕತ್ವ ನೀಡಿ, ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ರೇಷ್ಮೆ ಸಚಿವರಾಗಿ ಮಾಡಿದ್ದರು. 2017-18 ಸಾಲಿನಲ್ಲಿ‰ 37 ಕೋಟಿ ರೂ. ಬಿ.ರಾಚಯ್ಯ ಜೋಡಿರಸ್ತೆ ಅಭಿವೃದ್ಧಿ ಹಾಗೂ ಪುತ್ಥಳಿ ನಿರ್ಮಾಣ ಅನುದಾನ ಬಿಡುಗಡೆ ಮಾಡಿದೆ. ಬೀದರ್‌ ನಿಂದ ಚಾಮರಾಜ ನಗರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಿದೆ. ಅಂದು ರಾಚಯ್ಯನವರು ನನ್ನನ್ನು ಗುರುತಿಸಿ ಟಿಕೆಟ್‌ ನೀಡಿದ್ದರಿಂದ ಇದೆಲ್ಲ ಸಾಧ್ಯವಾಯಿತು ಎಂದರು.

ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮಾತನಾಡಿ, ಬಿ.ರಾಚಯ್ಯನವರು ಆಡಳಿತ ದಲ್ಲಿ ಮೌನ ಕ್ರಾಂತಿ ಮಾಡಿದ್ದರು. ಬಿ.ರಾಚಯ್ಯನವರು ರಾಜ್ಯದ ಕಂಡ ಅಪರೂಪದ ರಾಜಕಾರಣಿ. ಅವರ ಚುನಾವಣೆ ಸಂದರ್ಭದಲ್ಲಿ ಜನರೇ ಹಣ ನೀಡಿ, ಮತ ನೀಡಿ ಗೆಲ್ಲಿಸುತ್ತಿದ್ದರು. ಇಂದು ಆ ಪರಿಸ್ಥಿತಿ ಇಲ್ಲ ಎಂದು ರಾಚಯ್ಯನವರು ಹೇಳುತ್ತಿದ್ದರು ಎಂದರು. ಇಂದು ಖಾಸಗೀಕರಣ ಮಾಡಿ, ಮೀಸಲಾತಿಯನ್ನು ಪರೋಕ್ಷವಾಗಿ ತೆಗೆದುಹಾಕಲಾಗುತ್ತಿದೆ ಇದು ಅಪಾಯಕಾರಿ ಬೆಳವಣಿಗೆ ಎಂದು ವಿಷಾದಿಸಿದರು.

ಹಲವಾರ ಮಠದ ಶ್ರೀ ಷಡಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಡಾ ಅಧ್ಯಕ್ಷ ನಿಜಗುಣ ರಾಜು, ಶಾಸಕ ಸಿ. ಪುಟ್ಟರಂಗಶೆಟ್ಟಿ, ದಲಿತ ಮಹಾ ಸಭಾದ ವೆಂಕಟರಮಣಸ್ವಾಮಿ, ಮಾಜಿ ಶಾಸಕ ಎ.ಆರ್‌. ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯರಾದ ಆರ್‌ .ಬಾಲರಾಜು, ಸಿ.ಎನ್‌.ಬಾಲ ರಾಜ್‌, ಬರಹಗಾರ ಲಕ್ಷ್ಮೀನರಸಿಂಹ, ಜಿಲ್ಲಾ ಕಾಂಗ್ರೆ ಸ್‌ ಅಧ್ಯಕ್ಷ ಪಿ.ಮರಿಸ್ವಾಮಿ, ಜಾನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ, ರವಿಚಂದ್ರಪ್ರಸಾದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next