Advertisement
ಚಾರುಲತಾ ಅವರು 2012ನೇ ಬ್ಯಾಚಿನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿದ್ದರು. ಅಕ್ಟೋಬರ್ 18ರವೆರಗೂ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರು. ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದರು. ಸೋಮವಾರ ಅವರನ್ನು ಚಾಮರಾಜನಗರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
Related Articles
Advertisement
ಇದನ್ನೂ ಓದಿ:ವಾಕಿಂಗ್ ಹೋಗುತ್ತಿದ್ದಾಗ ನಟಿಗೆ ಹಲ್ಲೆ; ಮೊಬೈಲ್ ಕಿತ್ತುಕೊಂಡು ಪರಾರಿ
ಇದೇ ವರ್ಷದ ಮೇ 2ರ ರಾತ್ರಿ 10.30ರಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 35ಕ್ಕೂ ಹೆಚ್ಚು ರೋಗಿಗಳು ಮೃತಪಟ್ಟಿದ್ದರು. ಈ ದುರಂತಕ್ಕೆ ಜಿಲ್ಲಾಧಿಕಾರಿ ಡಾ. ರವಿ ಅವರ ನಿರ್ಲಕ್ಷ್ಯವೇ ಕಾರಣ ಎಂಬ ವ್ಯಾಪಕ ಆರೋಪ ಕೇಳಿಬಂದಿತ್ತು. ಅವರನ್ನು ವರ್ಗಾವಣೆ ಮಾಡಬೇಕೆಂದು ಅನೇಕ ಪ್ರತಿಭಟನೆಗಳು ನಡೆದಿದ್ದವು. ತೀವ್ರ ರೀತಿಯಲ್ಲಿ ಸಾರ್ವಜನಿಕರು ಆಕೊ್ರೀಶ ವ್ಯಕ್ತಪಡಿಸಿದ್ದರು. ಆದರೂ ಸರ್ಕಾರ ಅವರ ವರ್ಗಾವಣೆ ಮಾಡಿರಲಿಲ್ಲ.
ಅನಂತರ ಮೇ 19ರಂದು ಅವರ ವರ್ಗಾವಣೆಯಾಗಿದೆ ಎನ್ನಲಾಗಿತ್ತು. ಮೇ 20ರಂದು ವರ್ಗಾವಣೆ ರದ್ದಾಗಿದೆ ಎಂದೂ ಇದರಲ್ಲಿ ಪ್ರಮುಖ ರಾಜಕಾರಣಿಯೊಬ್ಬರ ಪಾತ್ರವಿದೆ ಎಂದು ಹೇಳಲಾಗಿತ್ತು. ಎರಡು ಬಾರಿ ವರ್ಗಾವಣೆಯಾಗಿದ್ದರೂ, ಅದನ್ನು ರದ್ದುಮಾಡಿಸಿಕೊಂಡು ಉಳಿಯಲು ಪ್ರಭಾವಿ ರಾಜಕಾರಣಿಯೊಬ್ಬರ ಕೃಪಾ ಕಟಾಕ್ಷವೇ ಕಾರಣ ಎಂದು ಹೇಳಲಾಗಿತ್ತು.
ಸೋಮವಾರ ಮೂರನೇ ಬಾರಿ ಅವರ ವರ್ಗಾವಣೆಯಾಗಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಚಾರುಲತಾ ಸೋಮಲ್ ಅವರು ಅಧಿಕಾರವನ್ನೂ ಸ್ವೀಕರಿಸಿರುವುದರಿಂದ ಮತ್ತೆ ಅವರ ವರ್ಗಾವಣೆ ರದ್ದಾಗುವುದಿಲ್ಲ ಎಂಬುದು ಖಚಿತವಾದಂತಾಗಿದೆ.