Advertisement
ಮೇ 2ರ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಸ್ಥಗಿತದ ತಕ್ಷಣದ ಪರಿಣಾಮ ಮತ್ತು ನಾಲ್ಕು ಗಂಟೆಗಳ ಕಾಲ ಆಮ್ಲಜನಕ ಪೂರೈಕೆಯೇ ಸ್ಥಗಿತವಾದ ಸಂದರ್ಭದಲ್ಲಿ ಉಂಟಾದ ದುಷ್ಪರಿಣಾಮದಿಂದ ಮಾರನೆಯ ದಿನವೂ ರೋಗಿಗಳು ಸತ್ತಿದ್ದಾರೆಂದುಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ಹೈಕೋರ್ಟ್‌ಗೆ ಮೇ 13ರಂದೇ ವರದಿ ಸಲ್ಲಿಸಿತ್ತು. ಒಟ್ಟಾರೆ ಇದರಿಂದ 36 ಮಂದಿ ಮೃತಪಟ್ಟಿದ್ದಾರೆಂದು ವರದಿ ತಿಳಿಸಿತ್ತು.
Related Articles
Advertisement
ವರದಿ ಪ್ರಕಾರ ತಪ್ಪಿತಸ್ಥರು ಯಾರು?: ಆಮ್ಲಜನಕಕೊರತೆಯಂಥ ಗಂಭೀರ ಪರಿಸ್ಥಿತಿಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ತನ್ನಕ್ರಿಯಾಶೀಲತೆ ಮತ್ತು ನಾಯಕತ್ವ ಗುಣವನ್ನು ತೋರಿಲ್ಲ. ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರು, ಆಮ್ಲಜನಕ ಸರಬರಾಜುಕೊರತೆಯಂಥ ಗಂಭೀರ ಸನ್ನಿವೇಶವನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದುಕಾನೂನು ಪ್ರಾಧಿಕಾರಗಳ ಸಮಿತಿ ತಿಳಿಸಿದೆ. ಸಿಮ್ಸ್ ಡೀನ್ ಮತ್ತು ಪ್ರಭಾರ ಜಿಲ್ಲಾ ಸರ್ಜನ್ ಅವರು ತಮ್ಮ ಸಾಮರ್ಥ್ಯ ತೋರಿಲ್ಲ. ರೋಗಿಗಳ ಜೀವ ಕಾಪಾಡಲು ವಿಫಲರಾಗಿದ್ದಾರೆ ಎಂದು ಸಮಿತಿ ವರದಿ ನೀಡಿತ್ತು.
ಎರಡು ಬಾರಿ ಜಿಲ್ಲಾಧಿಕಾರಿ ವರ್ಗಾವಣೆ ರದ್ದು: ಇದೆಲ್ಲದರ ನಡುವೆ ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ವರ್ಗಾವಣೆಯಾಗಿ ಆ ಜಾಗಕ್ಕೆ ಡಾ. ಸತೀಶ್ ಬರುತ್ತಿದ್ದಾರೆ ಎಂದು ಹೇಳಲಾಗಿತ್ತು. ಗುರುವಾರ ತಾವು ಚಾ.ನಗರಕ್ಕೆ ವರದಿ ಮಾಡಿಕೊಳ್ಳಲು ತೆರಳುತ್ತಿದ್ದೆ. ಆದರೆ ವರ್ಗಾವಣೆ ರದ್ದಾಗಿದೆ ಎಂದು ಆದೇಶ ಬಂತು ಎಂದು ಡಾ. ಸತೀಶ್ ಮಾಧ್ಯಮಗಳಿಗೆ ತಿಳಿಸಿದ್ದರು.ಕೆಲ ತಿಂಗಳ ಹಿಂದೆಯೂ ಸತೀಶ್ ಅವರನ್ನು ಚಾ.ನಗರಕ್ಕೆ ವರ್ಗಾವಣೆ ಮಾಡಿ ತಕ್ಷಣ ರದ್ದು ಮಾಡಲಾಗಿತ್ತು. ಈಗ ಎರಡನೇ ಬಾರಿಯೂ ಅವರ ವರ್ಗಾವಣೆ ರದ್ದಾಗಿದೆ. ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಯೊಬ್ಬರು ಹಾಗೂ ಪ್ರಭಾವಿ ರಾಜಕೀಯ ವ್ಯಕ್ತಿಕಾರಣ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಕೋವಿಡ್ ಪೀಡಿತ ಸ್ತ್ರೀಯರಿಗೆ ಸರಕಾರಿ ಸಂಜೀವಿನಿ : 171 ಗರ್ಭಿಣಿಯರಿಗೆ ಕೋವಿಡ್ ಆರೈಕೆ
ಈ ಘಟನೆಯ ಬಗ್ಗೆ ಇನ್ನೂ ಸಮಗ್ರ ತನಿಖೆ ನಡೆಯಬೇಕು. ಸರ್ಕಾರವೇ ಈ ಘಟನೆಯನ್ನು ಮುಚ್ಚಿ ಹಾಕುತ್ತಿದೆ. ಸರ್ಕಾರ ಮನಸ್ಸು ಮಾಡಿದ್ದರೆ ತಕ್ಷಣ ಕ್ರಮ ಕೈಗೊಳ್ಳಬಹುದಿತ್ತು. ಮುಖ್ಯಮಂತ್ರಿಯವರು ಸೌಜನ್ಯಕ್ಕೂ ಭೇಟಿ ನೀಡಲಿಲ್ಲ. ಜಿಲ್ಲಾಧಿಕಾರಿ, ಸಿಮ್ಸ್ ಡೀನ್, ಜಿಲ್ಲಾ ಸರ್ಜನ್‌ರ ವೈಫಲ್ಯವನ್ನು ವರದಿ ತಿಳಿಸಿದೆ. ಈ ಘಟನೆಗೆ ಯಾರೇ ಕಾರಣರಾಗಲಿ, ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. -ಚಾ.ರಂ.ಶ್ರೀನಿವಾಸಗೌಡ, ಅಧ್ಯಕ್ಷ, ಕರ್ನಾಟಕ ಸೇನಾ ಪಡೆ
ರಾಜ್ಯ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನ್ಯಾಯಾಲಯ ವರದಿ ಸಲ್ಲಿಸಿದ್ದರೂ ಆ ಬಗ್ಗೆಕ್ರಮ ಕೈಗೊಳ್ಳುತ್ತಿಲ್ಲ.ಕಾರ್ಯಾಂಗ, ಶಾಸಕಾಂಗದ ಕೆಲಸವನ್ನೂ ಸರ್ಕಾರ ಮಾಡುತ್ತಿಲ್ಲ. ನ್ಯಾಯಾಂಗ ಆದೇಶ ನೀಡಿದರೂ ಅದನ್ನೂ ಪಾಲಿಸುತ್ತಿಲ್ಲ. ಇದು ಖಂಡನೀಯ.- ಎ.ಎಂ.ಮಹೇಶಪ್ರಭು, ರಾಜ್ಯ ಉಪಾಧ್ಯಕ್ಷ, ರೈತ ಸಂಘ
ಆಮ್ಲಜನಕ ದುರಂತಕ್ಕೆ ಜಿಲ್ಲಾಧಿಕಾರಿ ಹೊಣೆಗಾರರಲ್ಲ. ಜಿಲ್ಲಾಧಿಕಾರಿಯವರಿಗೆ ಜಿಲ್ಲೆಯ ಎಲ್ಲ ಇಲಾಖೆಗಳೂ ಬರುತ್ತವೆ.ಕೆಳ ಹಂತದ ಅಧಿಕಾರಿಗಳು ವೈದ್ಯರು ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿಲ್ಲ. ಡೀನ್, ಡಿಎಚ್‌ಒ, ಜಿಲ್ಲಾ ಸರ್ಜನ್, ಕೋವಿಡ್ ನೋಡೆಲ್ ಅಧಿಕಾರಿ ಇವರೆಲ್ಲರೂ ಆರೋಪಿಗಳು.ಕೊನೆಯ ಸ್ಥಾನದ ಆರೋಪಿ ಜಿಲ್ಲಾಧಿಕಾರಿ. ಎಲ್ಲರ ಮೇಲೆಯೂ ಕ್ರಮಕೈಗೊಳ್ಳಲಿ.- ಸಿ.ಎಂ.ಕೃಷ್ಣಮೂರ್ತಿ, ಸಂಚಾಲಕ, ಪ್ರಗತಿಪರ ಸಂಘಟನೆಗಳ ಒಕ್ಕೂಟ
ಹೈಕೋರ್ಟ್ ಆದೇಶದ ಮೇರೆಗೆ ತನಿಖೆಯಾಗಿದೆ. ಆ ವರದಿಯಲ್ಲಿಯಾರು ತಪ್ಪಿತಸ್ಥರು ಎಂದು ಹೇಳಲಾಗಿದೆ. ನ್ಯಾಯಾಲಯ ಕ್ರಮಕೈಗೊಂಡು ಮುಜುಗರಕ್ಕೀಡಾಗುವ ಮುನ್ನ ಸರ್ಕಾರ ತಪ್ಪಿತಸ್ಥರ ವಿರುದ್ಧಕ್ರಮ ಕೈಗೊಳ್ಳಬೇಕು. -ನಿಜಗುಣರಾಜು, ಬಿಜೆಪಿ ರಾಜ್ಯ ಪದಾಧಿಕಾರಿ
ವರದಿ: ಕೆ.ಎಸ್.ಬನಶಂಕರ ಆರಾಧ್ಯ