Advertisement

ಚಾಮರಾಜನಗರ: 22 ಮಂದಿಗೆ ಸೋಂಕು

05:07 AM Jul 02, 2020 | Lakshmi GovindaRaj |

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ 22 ಜನರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ವಾಹನ ಚಾಲಕ ಸೇರಿದಂತೆ, ನಗರದಲ್ಲಿ 4, ತಾಲೂಕಿನಲ್ಲಿ 2 ಗುಂಡ್ಲುಪೇಟೆಯಲ್ಲಿ 16 ಪ್ರಕರಣಗಳು ದೃಢಪಟ್ಟಿವೆ.  ಕೋವಿಡ್‌ ಲ್ಯಾಬ್‌ ಸೀಲ್‌ಡೌನ್‌ ಆಗಿದ್ದ ಕಾರಣ ಕಳೆದ 3 ದಿನಗಳಿಂದ ಫ‌ಲಿತಾಂಶ ಲಭ್ಯವಾಗಿರಲಿಲ್ಲ.

Advertisement

ಬೆಂಗಳೂರಿಗೆ ಕಳುಹಿಸಲಾಗಿದ್ದ 904 ಮಾದರಿ ಫ‌ಲಿತಾಂಶ ಬುಧವಾರ ಬಂದಿದ್ದು, ಇದರಲ್ಲಿ 22 ಮಂದಿಗೆ ಸೋಂಕು  ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 54 ಮಂದಿಗೆ ಸೋಂಕು ತಗುಲಿದ್ದು, ಓರ್ವ ಗುಣಮುಖನಾಗಿದ್ದಾನೆ. 53 ಸಕ್ರಿಯ ಪ್ರಕರಣಗಳಿವೆ. ಗುಂಡ್ಲುಪೇಟೆಯಲ್ಲಿ ಪತ್ತೆಯಾಗಿರುವ 16 ಪ್ರಕರಣಗಳಲ್ಲಿ ಬಹುತೇಕ ಮಹದೇವ ಪ್ರಸಾದ್‌ ನಗರದವು. 3 ಪ್ರಕರಣಗಳು  ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದವರದು. ಕನಕದಾಸನಗರ, ನಾಯಕರ ಬೀದಿ, ಕೆಎಸ್‌ಎನ್‌ ಲೇಔಟ್‌ನಲ್ಲೂ ಪ್ರಕರಣಗಳು ಕಾಣಿಸಿಕೊಂಡಿವೆ.

ಚಾಲಕನಿಗೆ ಸೋಂಕು: ಎಸ್ಪಿ ವಾಹನ ಚಾಲಕನಿಗೂ ಸೋಂಕು ದೃಢಪಟ್ಟಿದೆ. ನಗರದ  ಸೆಸ್ಕ್ ಕಚೇರಿ ಲೆಕ್ಕಾಧಿಕಾರಿ ಹಾಗೂ ಕ್ಯಾಶಿಯರ್‌ಗೆ, 45 ವರ್ಷದ ಮಹಿಳೆಗೆ, ತಾಲೂಕಿನ ನಾಗವಳ್ಳಿಯ 34 ವರ್ಷದ ಮಹಿಳೆ ಹಾಗೂ 57 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಮುಚ್ಚಲಾಗಿದ್ದ ನಗರದ ಕೋವಿಡ್‌ ಪ್ರಯೋಗಾಲಯ ಬುಧವಾರದಿಂದ ಮತ್ತೆ ಕಾರ್ಯಾರಂಭ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next