Advertisement

ಚಾಮರಾಜನಗರ: ಸೋಂಕಿನಿಂದ 120 ಮಂದಿ ಗುಣಮುಖ; 60 ಹೊಸ ಪ್ರಕರಣಗಳು

07:50 PM Oct 20, 2020 | Mithun PG |

ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ 60 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಇದೇ ವೇಳೆ  120 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ.

Advertisement

ಚಾಮರಾಜನಗರ ತಾಲೂಕಿನ ನಲ್ಲೂರು ಗ್ರಾಮದ ನಿವಾಸಿ 80 ವರ್ಷದ ವೃದ್ಧೆ ಅ. 11 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಚಾಮರಾಜನಗರ ಪಟ್ಟಣದ  62 ವರ್ಷದ ವೃದ್ಧೆ ಅ.10 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅ.20 ರಂದು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,551 ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 4,792 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 640ಕ್ಕಿಳಿದಿದೆ. ಮಂಗಳವಾರ ಒಟ್ಟು 1280 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.  1222 ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿದೆ.

ಇಂದಿನ ಪ್ರಕರಣಗಳು: 60

ಇಂದು ಗುಣಮುಖ: 120

Advertisement

ಒಟ್ಟು ಗುಣಮುಖ: 4792

ಇಂದಿನ ಸಾವು: 02

ಒಟ್ಟು ಸಾವು: 119

ಸಕ್ರಿಯ ಪ್ರಕರಣಗಳು: 640

ಒಟ್ಟು ಸೋಂಕಿತರು: 5551

Advertisement

Udayavani is now on Telegram. Click here to join our channel and stay updated with the latest news.

Next