Advertisement

ಚಾಮರಾಜನಗರ ಜಿಲ್ಲೆಯಲ್ಲಿ ಇಂದು ಒಂದೇ ದಿನ 38 ಕೋವಿಡ್ ಪ್ರಕರಣ ದೃಢ!

06:34 PM Jul 19, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಇಂದು ಒಂದೇ ದಿನ 38 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನ ಈ ಪ್ರಮಾಣದ ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 297ಕ್ಕೇರಿದೆ. 106 ಸಕ್ರಿಯ ಪ್ರಕರಣಗಳಿವೆ.

Advertisement

ಇಂದು ವರದಿಯಾಗಿರುವ ಪ್ರಕರಣಗಳಲ್ಲಿ ಸೋಂಕು ಹೇಗೆ ತಗುಲಿದೆ ಎಂಬುದೇ ತಿಳಿಯದ ಪ್ರಕರಣಗಳೇ ಹೆಚ್ಚು ಇರುವುದು ಆತಂಕಕಾರಿಯಾಗಿದೆ. ಹೆಚ್ಚಿನ ಪ್ರಕರಣಗಳ ಸಂಪರ್ಕ ಪತ್ತೆ ಹಚ್ಚಬೇಕಾಗಿದೆ.

ಒಟ್ಟು 471 ಮಾದರಿಗಳ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವ ಪ್ರಕರಣಗಳಿವು. ಇಂದು 13 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದುವರೆಗೆ ಒಟ್ಟು 188 ಮಂದಿ ಬಿಡುಗಡೆಯಾಗಿದ್ದಾರೆ. ಇನ್ನು ಕೇವಲ 98 ಮಾದರಿಗಳ ಫಲಿತಾಂಶವಷ್ಟೇ ಬಾಕಿಯಿದೆ.

ಇಂದು ವರದಿಯಾಗಿರುವ ಪ್ರಕರಣಗಳ ಪೈಕಿ ಕೊಳ್ಳೇಗಾಲ ತಾಲೂಕಿನದು ಸಿಂಹ ಪಾಲು. ಅಲ್ಲಿ 18 ಪ್ರಕರಣಗಳು ವರದಿಯಾಗಿವೆ.

ಗುಂಡ್ಲುಪೇಟೆ ತಾಲೂಕಿನಿಂದ 10, ಚಾಮರಾಜನಗರ ತಾಲೂಕಿನಿಂದ 5, ಹನೂರು ತಾಲೂಕಿನಿಂದ 3, ಯಳಂದೂರು ತಾಲೂಕಿನಿಂದ 2 ಪ್ರಕರಣಗಳು ವರದಿಯಾಗಿವೆ.

Advertisement

ಕೊಳ್ಳೇಗಾಲ ಪಟ್ಟಣದ ದೇವಾಂಗ ಪೇಟೆ, ಚಿನ್ನದಂಗಡಿ ಬೀದಿ, ಕೊಳ್ಳೇಗಾಲ ಮೋಳೆ, ಬವಸವೇಶ್ವರ ನಗರ, ತಾಲೂಕಿನ ಸತ್ತೇಗಾಲ, ಚೆನ್ನಿಪುರದೊಡ್ಡಿ, ಕೊಂಗರಹಳ್ಳಿ, ಮಲ್ಲಹಳ್ಳಿ ಮಾಳದಲ್ಲಿ ಪ್ರಕರಣಗಳು ಕಂಡು ಬಂದಿವೆ.

ಗುಂಡ್ಲುಪೇಟೆ ಪಟ್ಟಣದ ಕೆಎಸ್‌ಎನ್ ಲೇಔಟ್, 9ನೇ ವಾರ್ಡ್, ಸಂತೆಮಾಳ, ತಾಲೂಕಿನ ನಿಟ್ರೆ, ಪಂಜನಹಳ್ಳಿ, ತೊಂಡವಾಡಿಯಲ್ಲಿ ಪ್ರಕರಣಗಳು ವರದಿಯಾಗಿವೆ.

ಚಾಮರಾಜನಗರದ ಜೆಎಸ್‌ಎಸ್ ಕಾಲೇಜು ಎದುರು, ವೈದ್ಯಕೀಯ ಕಾಲೇಜು, ತಾಲೂಕಿನ ಉತ್ತವಳ್ಳಿ, ಜ್ಯೋತಿಗೌಡನಪುರದಲ್ಲಿ ಸೋಂಕು ಕಾಣಿಸಿಕೊಂಡಿದೆ.

ಹನೂರು ತಾಲೂಕಿನ ಮಹದೇಶ್ವರಬೆಟ್ಟಿ, ಗಾಣಿಗ ಮಂಗಲ, ಬಂಡಳ್ಳಿಯಲ್ಲಿ ಹಾಗೂ ಯಳಂದೂರು ತಾಲೂಕಿನ ಹೊನ್ನೂರು, ಗುಂಬಳ್ಳಿಯಲ್ಲಿ ಪ್ರಕರಣಗಳು ವರದಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next