Advertisement

ಮಧುರೈ ಮೀನಾಕ್ಷಿ ದೇವಾಲಯದಲ್ಲಿ 94ರ ವೃದ್ಧನ ಚಾಮರ ಸೇವೆ

11:44 PM Apr 30, 2023 | Team Udayavani |

ದೇವೋಪಾಸನೆ, ಭಕ್ತಿ, ಧಾರ್ಮಿಕ ಸೇವೆಗಳಲ್ಲಿ ಜನರು ಹೊಂದಿರುವ ನಂಬಿಕೆ ನೋಡುಗರ ಅಳತೆಗೆ ಮೀರಿದ್ದು. 94 ವರ್ಷದ ವಯೋವೃದ್ಧ ಮಧುರೈ ಮೀನಾಕ್ಷಿ ದೇವಾಲಯದಲ್ಲಿ 12 ದಿನಗಳ ಅವಧಿಯಲ್ಲಿ ನಡೆಯುವ ಚಿತ್ತಿರೈ ಉತ್ಸವದಲ್ಲಿ ಭಾಗಿಯಾಗುವ ಎಲ್ಲ ಭಕ್ತಾದಿಗಳಿಗೆ ವೃದ್ಧರೊಬ್ಬರು ನವಿಲುಗರಿಗಳಿಂದ ಚಾಮರ ಬೀಸುತ್ತಲೇ ಇರುತ್ತಾರೆ.

Advertisement

ದೇಗುಲಕ್ಕೆ ಆಗಮಿಸುವ ಲಕ್ಷಾಂತರ ಮಂದಿಗೆ ಹೀಗೆ ದಿನಪೂರ್ತಿ ಚಾಮರ ಬೀಸುವುದು ಇವರ ಕಾಯಕವಲ್ಲ, ಬಿಸಿಲ ಬೇಗೆಯಲ್ಲಿ ಬಂದವರನ್ನು ತಣಿಸುವ ಸೇವೆಯಷ್ಟೇ. ವಿಶೇಷವಂದರೆ ಈ ವ್ಯಕ್ತಿಯ ಸೇವೆ ಇಂದಿನಧ್ದೋ, ನಿನ್ನೆಯಧ್ದೋ ಅಲ್ಲ, ಬರೋಬ್ಬರಿ 69 ವರ್ಷಗಳದ್ದು! ಈ ವೀಡಿಯೋ ಈಗ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವೃದ್ಧನ ನಿಸ್ವಾರ್ಥ ಸೇವೆಗೆ ಜನರು ಹುಬ್ಬೇರಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next