Advertisement

ಈ ವಾರ “ಚಮಕ್‌’ಒಂದೇ

10:51 AM Dec 25, 2017 | Team Udayavani |

ಗಣೇಶ್‌ ನಾಯಕರಾಗಿ ನಟಿಸಿರುವ “ಚಮಕ್‌’ ಚಿತ್ರ ಈ ವರ್ಷಾಂತ್ಯ ಅಂದರೆ ಡಿಸೆಂಬರ್‌ 29 ರಂದು ಬಿಡುಗಡೆಯಾಗುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ವಿಶೇಷವೆಂದರೆ “ಚಮಕ್‌’ ಜೊತೆ ಬೇರೆ ಯಾವ ಚಿತ್ರವೂ ಬಿಡುಗಡೆಯಾಗುತ್ತಿಲ್ಲ. ಈ ಮೂಲಕ ವರ್ಷಾಂತ್ಯದಲ್ಲಿ “ಚಮಕ್‌’ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.

Advertisement

ಹೌದು, ಆರಂಭದಲ್ಲಿ “ಚಮಕ್‌’ ಜೊತೆ “ಹಂಬಲ್‌ ಪೊಲಿಟೀಷಿಯನ್‌’ ಚಿತ್ರ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದ್ದು, ಜನವರಿ ಎರಡನೇ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಜೊತೆಗೆ ಇನ್ನೊಂದೆರಡು ಚಿತ್ರಗಳು “ಚಮಕ್‌’ ಜೊತೆ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತಾದರೂ ಆ ಚಿತ್ರಗಳ ಬಿಡುಗಡೆ ಕೂಡಾ ಮುಂದಕ್ಕೆ ಹೋಗಿದೆ. ಹಾಗಾಗಿ, ಈ ವಾರ “ಚಮಕ್‌’ ಒಂದೇ ಬಿಡುಗಡೆಯಾಗಲಿದೆ. ಅದು ಬಿಟ್ಟರೆ ಇಲ್ಲಿವರೆಗೆ ಬೇರೆ ಯಾವ ಚಿತ್ರಗಳು ಕೂಡಾ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿಲ್ಲ. 

ಸುನಿ ನಿರ್ದೇಶಿಸಿರುವ “ಚಮಕ್‌’ನಲ್ಲಿ ಗಣೇಶ್‌ ಹಾಗೂ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಮೊದಲ ಬಾರಿಗೆ ಗಣೇಶ್‌ ಈ ಚಿತ್ರದಲ್ಲಿ ಡಾಕ್ಟರ್‌ ಆಗಿ ಕಾಣಿಸಿಕೊಂಡಿದ್ದಾರೆ. “ಚಮಕ್‌’ ಹೆಸರು ಕೇಳಿದಾಗ ಇದು ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ ಎಂಬ ಭಾವನೆ ಬರುತ್ತದೆ.

ಆದರೆ, ನಿರ್ದೇಶಕ ಸುನಿ, ಕಾಮಿಡಿ ಜೊತೆಗೆ ಸೆಂಟಿಮೆಂಟ್‌ ಕೂಡಾ ಇದೆ ಎನ್ನುತ್ತಾರೆ. “ಚಮಕ್‌ ಕೇವಲ ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಸಿನಿಮಾವಲ್ಲ. ಇಲ್ಲಿ ಸೆಂಟಿಮೆಂಟ್‌ ಕೂಡಾ ಇದೆ. ಚಿತ್ರದ ದ್ವಿತೀಯಾರ್ಧ ಸೆಂಟಿಮೆಂಟ್‌ನೊಂದಿಗೆ ಸಾಗಲಿದೆ.

Advertisement

ಯೂತ್‌ ಜೊತೆಗೆ ಫ್ಯಾಮಿಲಿ ಕೂಡಾ ಈ ಸಿನಿಮಾವನ್ನು ಎಂಜಾಯ್‌ ಮಾಡುತ್ತಾರೆ’ ಎನ್ನುತ್ತಾರೆ. ಈ ಚಿತ್ರವನ್ನು ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಲ್ಲಿ ಚಂದ್ರಶೇಖರ್‌ ಚಿತ್ರ ನಿರ್ಮಿಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ “ಚಮಕ್‌’ ತೆರೆಕಾಣಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next