Advertisement

ಬಿಜೆಪಿ ಭದ್ರಕೋಟೆಯಲ್ಲಿ ಎನ್‌ಸಿಪಿಗೆ ಸವಾಲು

05:31 PM Apr 21, 2019 | Vishnu Das |

ಮುಂಬಯಿ: ಉತ್ತರ ಮಹಾರಾಷ್ಟ್ರದ ವ್ಯಾಪ್ತಿಯಲ್ಲಿ ಬರುವ ರಾವೇರಿ ಲೋಕಸಭೆ ಕ್ಷೇತ್ರವು 2008ರ ಲೋಕಸಭೆ ಸೀಟಿನ ಇತಿಮಿತಿಯ ಅಡಿಯಲ್ಲಿ ಅಸ್ತಿತ್ವಕ್ಕೆ ಬಂತು. ಈ ಕ್ಷೇತ್ರದ ಗಡಿ ಪ್ರದೇಶವು ಮಧ್ಯಪ್ರದೇಶ ಮತ್ತು ಗುಜರಾತ್‌ ಹಂಚಿಕೊಂಡಿವೆ. ಗುಡ್ಡ ಬೆಟ್ಟಗಳ ಸುಂದರ ಪ್ರಕೃತಿಯನ್ನು ಹೊಂದಿದ ರಾವೇರಿ ಲೋಕಸಭೆ ಕ್ಷೇತ್ರದಲ್ಲಿ ಪ್ರಸಕ್ತ ಚುನಾವಣೆಯಲ್ಲಿ 12 ಮಂದಿ ಅಭ್ಯರ್ಥಿಗಳು ಸ್ಪರ್ಧೆಗಾಗಿ ಕಣಕ್ಕಿಳಿದ್ದಾರೆ. ಇದರಲ್ಲಿ ನಾಲ್ಕು ಮಂದಿ ಅಭ್ಯರ್ಥಿಗಳು ಪಕ್ಷೇತರವಾಗಿ ಸ್ಪರ್ಧಿಸಲಿದ್ದಾರೆ.

Advertisement

ರಾವೇರಿ ಲೋಕಸಭೆ ಕ್ಷೇತ್ರದಲ್ಲಿ 2009ರಲ್ಲಿ ಮೊದಲ ಬಾರಿ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಭಾವು ಜವಲೆ ಅವರು ಸಂಸದರಾದರು. ಅದೇ 2014ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯು ಹರೀಭಾವು ಜವಲೆ ಅವರ ಟಿಕೆಟ್‌ಗೆ ಕತ್ತರಿ ಹಾಕಿ ಈ ಕ್ಷೇತ್ರದಿಂದ ಬಿಜೆಪಿ ಹಿರಿಯ ನಾಯಕ ಏಕನಾಥ ಖಡ್ಸೆ ಅವರ ಸೊಸೆ ರಕ್ಷಾ ನಿಖೀಲ್‌ ಖಡ್ಸೆ ಅವರಿಗೆ ಟಿಕೆಟ್‌ ನೀಡಿದ್ದು, ಸುಮಾರು 3,18,068 ಮತಗಳ ಅಂತ ರದಿಂದ ಗೆಲುವು ಸಾಧಿಸಿದ್ದರು. ಪ್ರಸ್ತಕ ನಡೆಯಲಿರುವ ಚುನಾ ವಣೆಯಲ್ಲಿ ಬಿಜೆಪಿ ಮತ್ತೆ ರಕ್ಷಾ ಖಡ್ಸೆ ಅವರಿಗೆ ಟಿಕೆಟು ನೀಡಿ ಕಣಕ್ಕಿಳಿಸಿದೆ.

ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಿದ ಎನ್‌ಸಿಪಿಯು ಸೋಲನ್ನು ಅನುಭವಿಸಿತು. ಪ್ರಸಕ್ತ ಚುನಾವಣೆಯಲ್ಲಿ ಎನ್‌ಸಿಪಿಯು ಈ ಕ್ಷೇತ್ರದಲ್ಲಿ ಉಲ್ಲಾಸ್‌ ವಾಸುದೇವ್‌ ಪಾಟೀಲ್‌ ಅವರನ್ನು ಕಣಕ್ಕಿಳಿಸಿದೆ. ಇದಲ್ಲದೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ವತಿಯಿಂದ ಯೋಗೇಶ್‌ ವಿಠಲ್‌ ಕೋಲೆ¤ ಅವರನ್ನು ಹಾಗೂ ಭಾರಿಪ ವತಿಯಿಂದ ನಿತೀನ್‌ ಪ್ರಹ್ಲಾದ್‌ ಕೋಲೆಲ್ಕರ್‌ ಅವರಿಗೆ ಟಿಕೆಟು ನೀಡಿ ಸ್ಪಧೇìಗಿಳಿಸಿದ್ದಾರೆ.

ರಾವೇರಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಚೋಪಡಾ, ರಾವೇರಿ, ಭುಸಾವಲ್‌, ಜಾಮ್ನೆàರ್‌, ಮುಕ್ತಾಯಿನಗರ ಮತ್ತು ಮಲಕಾಪುರ ಸೇರಿದಂತೆ 6 ವಿಧಾನಸಭೆ ಕ್ಷೇತ್ರಗಳು ಸೇರಿವೆ. ಚೋಪಡಾ ವಿಧಾನಸಭೆ ಕ್ಷೇತ್ರದಲ್ಲಿ ಶಿವಸೇನೆ ಆಡಳಿತದಲ್ಲಿದೆ. ಅದೇ ರಾವೇರಿ, ಭುಸಾವಲ್‌, ಜಾಮ್ನೆàರ್‌, ಮುಕ್ತಾಯಿನಗರ ಮತ್ತು ಮಲಕಾಪುರ ಈ 5 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೇರಿದೆ.

ರಾವೇರಿ ಜಿಲ್ಲೆಯು ದೇಶವ್ಯಾಪ್ತಿ ಬಾಳೆಹಣ್ಣು ಬೆಳೆಗೆ ಪ್ರಸಿದ್ಧವಾಗಿದೆ. ಎಲ್ಲಕ್ಕಿಂತ ಅಧಿಕ ಬಾಳೆ ಬೆಳೆಯು ಈ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಇಲ್ಲಿನ ಬಾಳೆ ಹಣ್ಣು ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಿಗೂ ರಫ್ತು ಆಗುತ್ತದೆ. ಸುಮಾರು 22,56,863 ಜನಸಂಖ್ಯೆ ಹೊಂದಿದ ರಾವೇರಿಯ ಜಿಲ್ಲೆಯಲ್ಲಿ ಶೇ. 73ರಷ್ಟು ಜನರು ಹಳ್ಳಿಗಳಲ್ಲಿ ಹಾಗೂ ಶೇ.27ರಷ್ಟು ಮಂದಿಯು ನಗರ ಪ್ರದೇಶದಲ್ಲಿ ವಾಸವಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next