Advertisement

Sandalwood: ಇದೇ ಶುಕ್ರವಾರ ದರ್ಶನ್‌ ಅಭಿನಯದ ಸೂಪರ್‌ ಹಿಟ್‌ ʼರಾಬರ್ಟ್‌ʼ ಮರು ಬಿಡುಗಡೆ

03:01 PM Jun 05, 2024 | Team Udayavani |

ಬೆಂಗಳೂರು: 2021 ರಲ್ಲಿ ತೆರೆಕಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ʼರಾಬರ್ಟ್‌ʼ ಚಿತ್ರ ಮತ್ತೊಮ್ಮೆ ಬಿಗ್‌ ಸ್ಕ್ರೀನ್‌ ನಲ್ಲಿ ಅಬ್ಬರಿಸಲು ರೆಡಿಯಾಗಿದೆ.

Advertisement

ಡಿಬಾಸ್‌ ದರ್ಶನ್‌ ಡಿಫ್ರೆಂಟ್‌ ಶೇಡ್‌ ನಲ್ಲಿ ಕಾಣಿಸಿಕೊಂಡಿದ್ದ ʼರಾಬರ್ಟ್‌ʼ  ಪಕ್ಕಾ ಮಾಸ್‌ ಮಸಾಲ ಮೂವಿಯಾಗಿ ಪ್ರೇಕ್ಷಕರ ಗಮನ ಸೆಳೆದಿತ್ತು. ದರ್ಶನ್‌ ಜೊತೆ ವಿನೋದ್‌ ಪ್ರಭಾಕರ್‌ ಅವರ ಪಾತ್ರ ಕೂಡ ಸದ್ದು ಮಾಡಿತ್ತು.

ಮಾರ್ಚ್‌ 11, 2021 ರಲ್ಲಿ ತೆರೆಕಂಡಿದ್ದ ʼರಾಬರ್ಟ್‌ʼ ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ಕಮಾಲ್‌ ಮಾಡಿತ್ತು. 100 ಕೋಟಿ ಗಳಿಕೆ ಕಂಡು ದರ್ಶನ್‌ ಅವರಿಗೆ ಬಿಗ್‌ ಹಿಟ್‌ ತಂದುಕೊಟ್ಟಿತು.

ಈ ಸಿನಿಮಾ ಹಿಟ್‌ ಬಳಿಕ ತರುಣ್‌ ಸುಧೀರ್‌ ದರ್ಶನ್‌ ಅವರೊಂದಿಗೆ ʼಕಾಟೇರʼ ಮಾಡಿದ್ದರು. ʼಕಾಟೇರʼ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿತ್ತು.

ಇದನ್ನೂ ಓದಿ: Kannada Movies: ಸ್ಯಾಂಡಲ್‌ ವುಡ್‌ಗೆ ಜೀವಕಳೆ; ಜೂ.14ಕ್ಕೆ ಒಂದೇ ದಿನ 4 ಸಿನಿಮಾ ರಿಲೀಸ್

Advertisement

ಇದೀಗ ʼರಾಬರ್ಟ್ʼ ಆಗಿ ದರ್ಶನ್‌ ಮತ್ತೆ ತೆರೆ ಮೇಲೆ ಅಬ್ಬರಿಸಲಿದ್ದಾರೆ. ಇದೇ  ಶುಕ್ರವಾರ(ಜೂ.7 ರಂದು) ಮತ್ತೆ ಥಿಯೇಟರ್‌ನಲ್ಲಿ ʼರಾಬರ್ಟ್‌ʼ ರಿಲೀಸ್‌ ಆಗಲಿದೆ.

ಮಲ್ಟಿಫ್ಲೆಕ್ಸ್‌ ಸೇರಿದಂತೆ,ಸಿಂಗಲ್‌ ಥಿಯೇಟರ್‌ ನಲ್ಲಿ ʼರಾಬರ್ಟ್‌ʼ ರೀ ರಿಲೀಸ್‌ ಆಗಲಿದೆ. ಈ ಸುದ್ದಿ ಕೇಳಿ ಡಿಬಾಸ್‌ ಫ್ಯಾನ್ಸ್‌ ಗಳು ಸಖತ್‌ ಖುಷ್‌ ಆಗಿದ್ದಾರೆ.

ಚಿತ್ರದಲ್ಲಿ ದರ್ಶನ್‌ ಜೊತೆ ಆಶಾ ಭಟ್‌,ಸೋನಲ್‌ ಮೊಂಟೇರಿಯೋ,ವಿನೋದ್‌ ಪ್ರಭಾಕರ್‌, ಜಗಪತಿ ಬಾಬು,ದೇವರಾಜ್‌ ಮುಂತಾದವರು ನಟಿಸಿದ್ದರು.

ಸದ್ಯ ದರ್ಶನ್‌ ʼಡೆವಿಲ್‌ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ವರ್ಷದ ಕ್ರಿಸ್ಮಸ್‌ ಹಬ್ಬದ ಸಂದರ್ಭದಲ್ಲಿ ಚಿತ್ರ ರಿಲೀಸ್‌ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next