Advertisement

ʼಒಡೆಯʼ,ʼಕಾಟೇರʼದಂತೆ ಡಿಸೆಂಬರ್‌ನಲ್ಲೇ ʼಡೆವಿಲ್‌ʼ ರಿಲೀಸ್:‌ ಮತ್ತೆ ಮೋಡಿ ಮಾಡ್ತಾರ ಡಿಬಾಸ್?

03:40 PM May 23, 2024 | Team Udayavani |

ಬೆಂಗಳೂರು: ʼಕಾಟೇರʼ ಬಳಿಕ  ಚಾಲೆಂಜಿಂಗ್ ಸ್ಟಾರ್ ದರ್ಶನ್‌ ʼಡೆವಿಲ್‌ʼ ಆಗಿ ಬರಲಿದ್ದಾರೆ. ‘ತಾರಕ್‌ʼ ಬಳಿಕ ಪ್ರಕಾಶ್‌ ವೀರ್‌ ಮತ್ತೊಮ್ಮೆ ದರ್ಶನ್‌ ಜೊತೆ ಕೈಜೋಡಿಸಿದ್ದಾರೆ.

Advertisement

ಸೆಟ್ಟೇರಿದ ದಿನದಿಂದ ದರ್ಶನ್‌ ಅವರ ʼಡೆವಿಲ್‌ʼ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ʼಕಾಟೇರʼ ಬ್ಲಾಕ್‌ ಬಸ್ಟರ್‌ ಹಿಟ್‌ ನಿಂದಾಗಿ ಡಿಬಾಸ್‌ ಮುಂದಿನ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿರುವ ʼಡೆವಿಲ್‌ʼ ಇದೇ ವರ್ಷದ ಅಂತ್ಯಕ್ಕೆ ತೆರೆಗೆ ಬರಲಿದೆ.

ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ಇದೇ ದಸರಾ ಹಬ್ಬಕ್ಕೆ ತೆರೆ ಮೇಲೆ ʼಡೆವಿಲ್‌ʼ ಅಪ್ಪಳಿಸಬೇಕಿತ್ತು. ಆದರೆ ದರ್ಶನ್‌ ಅವರ ಕೈಗೆ ಪೆಟ್ಟಾಗಿರುವುದರಿಂದ ಚಿತ್ರೀಕರಣಕ್ಕೆ ಹಿನ್ನಡೆಯಾಗಿದೆ.

ಇದೀಗ ಚಿತ್ರತಂಡ ರಿಲೀಸ್‌ ತಿಂಗಳು ಅನೌನ್ಸ್‌ ಮಾಡಿದೆ. ದರ್ಶನ್‌ ಅವರ ಮಾಸ್‌ ಲುಕ್‌ ವುಳ್ಳ ಪೋಸ್ಟರ್‌ ವೊಂದನ್ನು ರಿಲೀಸ್‌ ಮಾಡಿ ಯಾವ ತಿಂಗಳು ಸಿನಿಮಾ ಬರಲಿದೆ ಎನ್ನುವುದನ್ನು ರಿವೀಲ್‌ ಮಾಡಲಾಗಿದೆ.

“ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ –  ‘ಡೆವಿಲ್’ ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ” ಎಂದು ದರ್ಶನ್‌ ಪೋಸ್ಟರ್‌ ಹಂಚಿಕೊಂಡಿದ್ದಾರೆ.

Advertisement

ಇನ್ನು ಡಿಸೆಂಬರ್‌ ತಿಂಗಳಿನಲ್ಲಿ ದರ್ಶನ್‌ ಅವರ ಸಿನಿಮಾ ರಿಲೀಸ್‌ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಬಂದ ʼಕಾಟೇರʼ ಸಿನಿಮಾ ಕೂಡ ರಿಲೀಸ್‌ ಆಗಿದ್ದು ಡಿಸೆಂಬರ್‌ ನಲ್ಲೇ. ಇನ್ನುಳಿದಂತೆ ʼಒಡೆಯʼ ,ʼಅಣ್ಣಾವ್ರುʼ ಸಿನಿಮಾ ಬಂದದ್ದು ಡಿಸೆಂಬರ್‌ ತಿಂಗಳಿನಲ್ಲೇ. ಮತ್ತೆ ಡಿಸೆಂಬರ್‌ ಅದೃಷ್ಠಕ್ಕೆ ದರ್ಶನ್‌ ಮುಂದಾಗಿದ್ದಾರೆ.

ಕಳೆದ ಬಾರಿಯಂತೆ ಈ ಬಾರಿಯೂ ʼಡೆವಿಲ್‌ʼ ರಿಲೀಸ್‌ ಹೊತ್ತಿಗೆ ದೊಡ್ಡ ಸಿನಿಮಾಗಳು ರಿಲೀಸ್‌ ಆಗಲಿವೆ. ಅಕ್ಷಯ್‌ ಕುಮಾರ್‌, ಸುನಿಲ್‌ ಶೆಟ್ಟಿ ಸೇರಿದಂತೆ ಬಿಟೌನ್‌ ದೊಡ್ಡ ಕಲಾವಿದರ ದಂಡೇ ಇರುವ ʼವೆಲ್‌ ಕಂ ಟು ದಿ ಜಂಗಲ್‌ʼ ರಿಲೀಸ್‌ ಆಗಲಿದ. ಇನ್ನೊಂದೆಡೆ ಆಮೀರ್‌ ಖಾನ್‌ ಅವರ ʼಸಿತಾರೆ ಜಮೀನ್ ಪರ್ʼ, ಕಾಲಿವುಡ್‌, ಟಾಲಿವುಡ್‌ ನ ಚಿತ್ರವೂ ಕ್ರಿಸ್ಮಸ್‌ ಹಬ್ಬದಂದೇ ರಿಲೀಸ್‌ ಆಗಲಿದೆ ಎನ್ನಲಾಗುತ್ತಿದೆ.

ಆದರೆ ಈ ಎಲ್ಲಾ ಸಿನಿಮಾಗಳು ಕರ್ನಾಟಕದಲ್ಲಿ ʼಡೆವಿಲ್‌ʼ ಎದುರು ಹಾಕಿಕೊಂಡು ಗೆಲ್ಲುತ್ತಾ – ನಿಲ್ಲುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next