Advertisement
ಅಂದಹಾಗೆ, “ಚಕ್ರವರ್ತಿ’ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ “ಎ’ ಪ್ರಮಾಣ ಪತ್ರ ಸಿಕ್ಕಿದೆ. ಮಲ್ಟಿಪ್ಲೆಕ್ಸ್‌ನಲ್ಲಿ ಬಿಡುಗಡೆ ಹಿಂದಿನ ದಿನದ ರಾತ್ರಿಯೇ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ “ಎ’ ಪ್ರಮಾಣ ಪತ್ರ ಅಲ್ಲಿಗೆ ಬರುವ ಪ್ರೇಕ್ಷಕರ ಮೇಲೆ ಪರಿಣಾಮ ಬೀರುವುದಿಲ್ಲವೇ? ಈ ಪ್ರಶ್ನೆಗೆ, ಉತ್ತರಿಸುವ ದರ್ಶನ್, “ಚಿತ್ರದಲ್ಲಿ ಎರಡು ದೃಶ್ಯಗಳಿಗೆ ಕತ್ತರಿ ಹಾಕುವುದಾದರೆ, “ಯು/ಎ’ ಪ್ರಮಾಣ ಪತ್ರ ಕೊಡುವುದಾಗಿ ಸೆನ್ಸಾರ್ ಮಂಡಳಿ ಹೇಳಿತ್ತು. ಆದರೆ, ಆ ದೃಶ್ಯಗಳು ಸಿನಿಮಾದಲ್ಲಿ ಹೈಲೆಟ್ ಆಗಿವೆ. ಅಷ್ಟಕ್ಕೂ ಮಲ್ಟಿಪ್ಲೆಕ್ಸ್‌ನಲ್ಲಿ ಶೇ.12 ರಷ್ಟು ಮಂದಿ ಮಾತ್ರ ನನ್ನ ಸಿನಿಮಾ ನೋಡಲು ಬರುತ್ತಾರೆ. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಮುಖ್ಯ ಚಿತ್ರಮಂದಿರಗಳು ಮತ್ತು ಸಿಂಗಲ್ ಸ್ಕ್ರೀನ್ ಮುಖ್ಯ. ಈಗಾಗಲೇ ರಾಜ್ಯಾದ್ಯಂತ ನನ್ನ ಚಿತ್ರಗಳು ಸಹಜವಾಗಿಯೇ ಪ್ರದರ್ಶನ ಕಾಣುವ ಮೂಲಕ ಸಕ್ಸಸ್ ಆಗಿರುವುದುಂಟು. “ಚಕ್ರವರ್ತಿ’ ಕೂಡ ಸಿಂಗಲ್ ಸ್ಕ್ರೀನ್‌ನಲ್ಲಿ ರಿಲೀಸ್ ಆಗುತ್ತಿದೆ. ನನಗೆ ಅದು ಮುಖ್ಯ. ಆದರೆ, ಇದೇ ಮೊದಲ ಬಾರಿಗೆ ಮಲ್ಟಿಪ್ಲೆಕ್ಸ್‌ನಲ್ಲಿ ಗುರುವಾರ ರಾತ್ರಿಯಿಂದಲೇ “ಚಕ್ರವರ್ತಿ’ ಪ್ರದರ್ಶನ ಕಾಣುತ್ತಿದೆ ಎಂಬುದನ್ನು ಕೇಳಿ ಖುಷಿಯಾಗುತ್ತಿದೆ. ನನಗೆ ತಿಳಿದ ಮಟ್ಟಿಗೆ ಬೇರೆ ಯಾವ ಚಿತ್ರಗಳೂ ಮಲ್ಪಿಪ್ಲೆಕ್ಸ್‌ನಲ್ಲಿ ಬಿಡುಗಡೆ ಹಿಂದಿನ ರಾತ್ರಿ ಪ್ರದರ್ಶನ ಕಂಡಿಲ್ಲ. ಇದು ವಿಶೇಷ’ ಎಂದಷ್ಟೇ ಹೇಳುತ್ತಾರೆ ದರ್ಶನ್. Advertisement
ದಾಖಲೆ!! ಮಲ್ಟಿಪ್ಲೆಕ್ಸ್‌ನಲ್ಲಿ ಗುರುವಾರ ರಾತ್ರಿ ಚಕ್ರವರ್ತಿಯ ದರ್ಶನ
04:36 PM Apr 13, 2017 | |
Advertisement
Udayavani is now on Telegram. Click here to join our channel and stay updated with the latest news.