Advertisement

ಸವಾಲುಗಳೇ ಸಾಧನೆಗೆ ಜೀವಾಳ

12:49 PM Nov 22, 2017 | Team Udayavani |

ಧಾರವಾಡ: ಬಡತನ, ನೋವು ಹಾಗೂ ಅಪಮಾನಗಳೇ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲವನ್ನು ಬೆಳೆಸುತ್ತವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹನುಮಾಕ್ಷಿ ಗೋಗಿ ಹೇಳಿದರು. ನಗರದ ವಿದ್ಯಾರಣ್ಯ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2016-17ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಸನ್ಮಾನ ಸೀಕರಿಸಿ ಅವರು ಮಾತನಾಡಿದರು. 

Advertisement

ಸಾಧನೆಗೆ ಸತತ ಪರಿಶ್ರಮ ಮತ್ತು ಅಭ್ಯಾಸ ಮುಖ್ಯ. ಕಲಿಯಬೇಕೆಂಬ ಆಸಕ್ತಿ ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ನಮ್ಮ ಬದುಕು ದೊಡ್ಡದಾಗಲು ನಾವು ಆದರ್ಶ ವ್ಯಕ್ತಿಗಳ  ಬದುಕನ್ನು ತಿಳಿಯಬೇಕು. ಜೀವನದಲ್ಲಿ ಬರುವ ನೋವಿನ ಅನುಭವಗಳೇ ನಮ್ಮನ್ನು ರೂಪಿಸುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆ.ಇ. ಬೋರ್ಡ್‌ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಮಾತನಾಡಿ, ಜೀವನದಲ್ಲಿ ಒಂದು ಗುರಿ ಇರಬೇಕು. ಉತ್ತಮ ಸಾಮರ್ಥ್ಯ ಬೆಳೆಸಿಕೊಳ್ಳುವ ಮೂಲಕ ಗುರಿ ತಲುಪಬಹುದು ಎಂದು ಹೇಳಿದರು. ಪ್ರಾಚಾರ್ಯರಾದ ಡಾ| ಎಸ್‌.ಎ. ಗೊರೇಬಾಳ ಪರಿಚಯಿಸಿದರು.

ಡಾ| ಬಿ.ಜಿ. ನಾಯಕ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸಚಿನ ಬಡಿಗೇರ, ಈರಣ್ಣ ಸೂಡಿ, ಕಾವ್ಯಾ ದಂಡವತಿ ಮತ್ತು ಮೃತ್ಯುಂಜಯ ಕಬ್ಬೂರ ಅನಿಸಿಕೆ ಹಂಚಿಕೊಂಡರು. ಶ್ವೇತಾ ನಾಯಕ ನಿರೂಪಿಸಿದರು. ಸೌಮ್ಯ ಕೋಳೂರ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next