Advertisement
ಇದಕ್ಕಾಗಿಯೇ ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿ ಪ್ರದೇಶದಲ್ಲಿ ಸಿದ್ಧಪಡಿಸಲಾಗಿದ್ದ ಕೃತಕ ಚಂದ್ರನ ನೆಲದಲ್ಲಿ ಪ್ರಯೋಗಕ್ಕೆ ಒಳಪಟ್ಟಿದ್ದವು. ಚಂದ್ರನ ಮೇಲಿನ ನೆಲ ಹಾಗೂ ಇಲ್ಲಿನ ಪ್ರದೇಶಕ್ಕೆ ಸಾಮ್ಯತೆಯಿದೆ. ಆದ್ದರಿಂದ ಇಸ್ರೋ ಇಲ್ಲಿನ ಪ್ರದೇಶದಲ್ಲಿ ಚಂದ್ರನ ಅಂಗಳವನ್ನು ಕೃತಕವಾಗಿ ಸೃಷ್ಟಿಸಿ ಪ್ರಯೋಗಗಳನ್ನು ಕೈಗೊಂಡಿತು. ಚಂದ್ರನ ಅಂಗಳಕ್ಕಿಳಿಯುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಉಪಕರಣಗಳು ಇಲ್ಲಿ ಕಠಿಣ ಪರೀಕ್ಷೆಗೆ ಒಳಪಟ್ಟಿವೆ.
Related Articles
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ವಿಜ್ಞಾನ ಹಾಗೂ ತಂತ್ರಜ್ಞಾನದ ಪ್ರಮುಖ ಕೇಂದ್ರ ವಾಗಿದೆ. ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಇಸ್ರೋ), ಬಾಬಾ ಅಣುಶಕ್ತಿ ಕೇಂದ್ರ (ಬಿಎಆರಿÕ), ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಪ್ರದೇಶದಲ್ಲಿ ಸ್ಥಾಪಿತವಾಗಿವೆ. ದೇಶದ ಪ್ರಮುಖ ವೈಜ್ಞಾನಿಕ ಸಂಸ್ಥೆಗಳು ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ವ್ಯಾಪಿಸಿವೆ. ಚಳ್ಳಕೆರೆ ತಾಲೂಕಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಎರಡು ಕೇಂದ್ರಗಳನ್ನು ಹೊಂದಿದೆ. ಒಂದು ಕೇಂದ್ರ ಚಳ್ಳಕೆರೆಯಿಂದ 7 ಕಿಮೀ ಹಾಗೂ ಬೆಂಗಳೂರಿನಿಂದ 214 ಕಿಮೀ ದೂರದಲ್ಲಿದೆ. ಮತ್ತೂಂದು ಕೇಂದ್ರ ಚಳ್ಳಕೆರೆಯಿಂದ 18 ಕಿಮೀ, ಬೆಂಗಳೂರಿನಿಂದ 218 ಕಿಮೀ ಹಾಗೂ ನಾಯಕನಹಟ್ಟಿಯಿಂದ 3 ಕಿಮೀ ದೂರದಲ್ಲಿದೆ. ದೊಡ್ಡಉಳ್ಳಾರ್ತಿ ಪ್ರದೇಶದಲ್ಲಿ 473 ಎಕರೆ ಹಾಗೂ ನಾಯಕನಹಟ್ಟಿ ಸಮೀಪದ ಕುದಾಪುರ ಕಾವಲು ಪ್ರದೇಶದಲ್ಲಿ 100 ಎಕರೆ ಪ್ರದೇಶವನ್ನು ಇಸ್ರೋಗೆ ನೀಡಲಾಗಿದೆ. ಈ ಎರಡು ಪ್ರದೇಶಗಳಲ್ಲಿ ಇಸ್ರೋ ಕಾಂಪೌಂಡ್‌ಗಳನ್ನು ನಿರ್ಮಿಸಿ ಪ್ರಯೋಗಗಳನ್ನು ಆರಂಭಿಸಿದೆ.
Advertisement
ಕೆಎಂ ಶಿವಸ್ವಾಮಿ