Advertisement

ಗಂಟಲು ದ್ರವ ಪರೀಕ್ಷಾ ಕೇಂದ್ರ ಉದ್ಘಾಟನೆ

06:24 PM May 03, 2020 | Naveen |

ಚಳ್ಳಕೆರೆ: ಕೋವಿಡ್ ವೈರಾಣು ನಿಯಂತ್ರಣದಲ್ಲಿ ತಾಲೂಕು ಆರೋಗ್ಯ ಇಲಾಖೆ ಹಾಗೂ ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗಾಗಿ ತಾಲೂಕಿನ ಯಾವುದೇ ಭಾಗದಲ್ಲೂ ಕೊರೊನಾ ವೈರಾಣು ಸೋಂಕಿತ ವ್ಯಕ್ತಿಗಳು ಪತ್ತೆಯಾಗಲಿಲ್ಲ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

Advertisement

ಶುಕ್ರವಾರ ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕೋವಿಡ್‌-19ನ ಗಂಟಲು ದ್ರವ ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ| ಶ್ರೀಧರ್‌ ಐ. ಬಾರಕೇರ್‌ ತಮ್ಮ ಸ್ವಂತ ವೆಚ್ಚದಲ್ಲಿ ಪರೀಕ್ಷಾ ಕೇಂದ್ರವನ್ನು ನಿರ್ಮಿಸಿದ್ದಾರೆ. ತಾಲೂಕು ವೀರಶೈವ ನೌಕರರ ಒಕ್ಕೂಟ ಅಧ್ಯಕ್ಷ ಜಗದೀಶ್‌ ಮತ್ತು ಪದಾಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ಅಗತ್ಯವಿರುವ ಸಾಧನ-ಸಲಕರಣೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ| ವೆಂಕಟೇಶ್‌, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ| ಬಸವರಾಜು, ಟಿಎಚ್‌ಒ ಡಾ|ಎನ್‌. ಪ್ರೇಮಸುಧಾ, ಡಾ| ಓಂಕಾರಪ್ಪ, ಡಾ| ಸತೀಶ್‌ ಆದಿಮನಿ, ಡಾ| ಪ್ರಜ್ವಲ್‌ ಧನ್ಯ, ಡಾ| ಜಯಲಕ್ಷ್ಮೀ ರಾಜಕುಮಾರ್‌, ಸಹಾಯಕ ಆಡಳಿತಾಧಿ ಕಾರಿ ಕದರಪ್ಪ, ಶುಶ್ರೂಷಕಿಯರಾದ ನಿರ್ಮಲಾ, ಶಶಿಕಲಾ, ಓಂಕಾರಮ್ಮ, ಸವಿತಾ, ಎನ್‌. ಪ್ರೇಮಕುಮಾರ್‌, ಎಸ್‌.ಬಿ. ತಿಪ್ಪೇಸ್ವಾಮಿ,
ಗಂಗಾಧರಪ್ಪ, ತಿಪ್ಪೇಸ್ವಾಮಿ, ಪ್ರಸನ್ನ, ತಾಪಂ ಇಒ ಡಾ| ಶ್ರೀಧರ್‌ ಐ. ಬಾರಕೇರ್‌, ಪ್ರಕಾಶ್‌, ಸಂತೋಷ್‌ ಕುಮಾರ್‌, ಸಿಪಿಐ ಈ. ಆನಂದ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next