Advertisement

31 ವಲಸೆ ಕಾರ್ಮಿಕರ ಗಂಟಲು ದ್ರವ ಪರೀಕ್ಷೆ

11:28 AM May 31, 2020 | Naveen |

ಚಳ್ಳಕೆರೆ: ಕಳೆದ ಮೇ 15ರಿಂದ ನಗರದ ಹೊರವಲಯದಲ್ಲಿರುವ ಬಿಸಿಎಂ ಹಾಸ್ಟೆಲ್‌ನಲ್ಲಿ ವಸತಿ ಕ್ವಾರಂಟೈನ್‌ ನಲ್ಲಿರುವ ಉತ್ತರ ಪ್ರದೇಶದ 31 ವಲಸೆ ಕಾರ್ಮಿಕರ ಎರಡನೇ ಹಂತದ ಗಂಟಲು ದ್ರವ ಪರೀಕ್ಷೆ ಶನಿವಾರ ನಡೆದಿದ್ದು, ಫಲಿತಾಂಶ ಬಂದ ಕೂಡಲೇ ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಂತೆ ವಲಸೆ ಕಾರ್ಮಿಕರನ್ನು ಬಿಡುಗಡೆಗೊಳಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಎನ್‌. ಪ್ರೇಮಸುಧಾ ತಿಳಿಸಿದ್ದಾರೆ.

Advertisement

ಬಿಸಿಎಂ ಹಾಸ್ಟೆಲ್‌ನಲ್ಲಿರುವ ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರ ಗಂಟಲು ದ್ರವ ಪರೀಕ್ಷೆ ಎರಡನೇ ಹಂತದ್ದಾಗಿದೆ. ಎರಡನೇ ಹಂತದಲ್ಲೂ ವರದಿ ನೆಗೆಟಿವ್‌ ಬಂದಲ್ಲಿ ಇಲಾಖೆ ನಿಯಮಾನುಸಾರ ಬಿಡುಗಡೆ ಮಾಡಲಾಗುವುದು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮಾರ್ಗದರ್ಶನದಲ್ಲಿ 26 ಕೋವಿಡ್ ಪಾಸಿಟಿವ್‌ ಪ್ರಕರಣಗಳಿಗೆ ಇಲ್ಲಿಯೇ ಚಿಕಿತ್ಸೆ ಮುಂದುವರೆದಿದ್ದು, ಯಾರೂ ಸಹ ಆತಂಕ ಪಡುವ ಅವಶ್ಯಕತೆ ಇಲ್ಲ. ಪ್ರತಿನಿತ್ಯ ವೈದ್ಯರ ತಂಡ ಹಾಗೂ ಸಿಬ್ಬಂದಿ ವರ್ಗ ಎರಡು ಬಾರಿ ಸೋಂಕಿತರ ಆರೋಗ್ಯ ತಪಾಸಣೆ ನಡೆಸುತ್ತಿದೆ. ಯಾವುದೇ ರೀತಿ ಅನಾರೋಗ್ಯ ಕಂಡುಬಂದಲ್ಲಿ ಕೋವಿಡ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗುವುದು. ಈಗಾಗಲೇ ನಾಲ್ವರನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದರು.

ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ್‌, ತಾಪಂ ಇಒ ಶ್ರೀಧರ್‌ ಐ. ಬಾರಕೇರ್‌, ಬಿಸಿಎಂ ಅಧಿಕಾರಿ ಜಗನ್ನಾಥ, ಎಸ್ಟಿ ನಿಗಮ ಕಲ್ಯಾಣಾಧಿಕಾರಿ ಮಾಲತಿ, ಆರ್‌ಆರ್‌ಟಿ ತಂಡದ ಮುಖ್ಯಸ್ಥರಾದ ಆರ್‌. ನಾಗರಾಜು, ಪ್ರಸನ್ನಕುಮಾರ್‌, ಗಂಗಾಧರ, ಚಂದ್ರಪ್ಪ, ಎಸ್‌.ಬಿ. ತಿಪ್ಪೇಸ್ವಾಮಿ, ಎನ್‌. ಪ್ರೇಮಕುಮಾರ್‌, ಪ್ರಯೋಗಾಲಯ ಸಿಬ್ಬಂದಿ ಶಿವಕುಮಾರ್‌, ರಮೇಶ್‌, ದಯಾನಂದ, ವಿಕ್ರಮ್‌, ಎಚ್‌.ತಿಪ್ಪೇಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next