Advertisement

ವಿದ್ಯಾರ್ಥಿನಿಗೆ ಶಾಕ್‌ ನೀಡಿದ ಪರೀಕ್ಷಾ ಮಂಡಳಿ!

10:22 AM May 13, 2019 | Team Udayavani |

ಚಳ್ಳಕೆರೆ: ಎಸ್ಸೆಸ್ಸೆಲ್ಸಿ ಉತ್ತರಪತ್ರಿಕೆ ಪ್ರತಿ ಕೇಳಿದ ವಿದ್ಯಾರ್ಥಿನಿಗೆ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಬೇರೆಯವರ ಉತ್ತರಪತ್ರಿಕೆ ಪ್ರತಿ ಕಳುಹಿಸಿದ ಸಂಗತಿ ಬೆಳಕಿಗೆ ಬಂದಿದೆ.

Advertisement

ಗಣಿತದಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಬೇಸರಗೊಂಡ ವಿದ್ಯಾರ್ಥಿನಿ ಉತ್ತರಪತ್ರಿಕೆ ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದಳು. ಆದರೆ ಪ್ರೌಢಶಿಕ್ಷಣ ಮಂಡಳಿ ಕಳುಹಿಸಿದ ಉತ್ತರಪತ್ರಿಕೆ ಪ್ರತಿ ನೋಡಿ ವಿದ್ಯಾರ್ಥಿನಿಗೆ ಶಾಕ್‌. ಏಕೆಂದರೆ ಮೊದಲ ಪುಟ ಬಿಟ್ಟರೆ ಉಳಿದ ಪುಟಗಳು ಬೇರೆ ಯಾರಧ್ದೋ ಆಗಿದ್ದವು.

ಚಳ್ಳಕೆರೆ ನಗರದ ವಾರಿಯರ್ ಪ್ರೌಢಶಾಲೆಯ ವಿದ್ಯಾರ್ಥಿನಿ ಜಿ.ಕೆ. ದಿವ್ಯ, ಗಣಿತ ವಿಷಯದಲ್ಲಿ 100ಕ್ಕೆ 80 ಅಂಕ ಬರಬಹುದು ಎಂದು ನಿರೀಕ್ಷಿಸಿದ್ದಳು. ಆದರೆ ಬಂದಿದ್ದು ಕೇವಲ 48 ಅಂಕ. ಇದರಿಂದ ಕಂಗಾಲಾದ ದಿವ್ಯ, ಕನಿಷ್ಠ ಎಂದರೂ 80 ಅಂಕ ಬರಬೇಕಿತ್ತು. ಆದರೆ ಕಡಿಮೆ ಅಂಕ ಬಂದಿದೆ ಎಂದು ತನ್ನ ತಂದೆ ಕೆ. ಗೋಪಿನಾಥ ಅವರಿಗೆ ತಿಳಿಸಿದ್ದಳು. ಅವರು ಉತ್ತರಪತ್ರಿಕೆಯ ನಕಲು ಪ್ರತಿಯನ್ನು ತರಿಸಿ ನೋಡಿದರು. ಮಂಡಳಿಯು ಮೊದಲ ಪುಟವೊಂದನ್ನು ಬಿಟ್ಟರೆ ಉಳಿದ ಪುಟಗಳನ್ನು ಬೇರೆ ವಿದ್ಯಾರ್ಥಿಯ ಉತ್ತರಪತ್ರಿಕೆಯ ನಕಲು ಪ್ರತಿ ಕಳುಹಿಸಿತ್ತು. ಅಲ್ಲದೆ ಯಾವುದೇ ಅಂಕಗಳನ್ನು ನೀಡದೆ ಸಹಿಯನ್ನೂ ಮಾಡದೆ ಬೇಕಾಬಿಟ್ಟಿಯಾಗಿ ಉತ್ತರಪತ್ರಿಕೆಯ ನಕಲನ್ನು ಕಳುಹಿಸಿದೆ. ಈ ಮೂಲಕ ತನಗೆ ಹೆಚ್ಚು ಅಂಕ ಬರಬಹುದೆಂಬ ನಿರೀಕ್ಷೆ ಹೊಂದಿದ್ದ ದಿವ್ಯಳ ಆಸೆಗೆ ತಣ್ಣೀರೆರಚಿದೆ.

ಮೊದಲ ಪುಟ ಬಿಟ್ಟರೆ ಮತ್ತೂಂದು ಉತ್ತರಪತ್ರಿಕೆಯಲ್ಲಿ ಬೇರೆ ವಿದ್ಯಾರ್ಥಿಯ ಪ್ರವೇಶ ಪತ್ರದ ಸಂಖ್ಯೆ ನಮೂದಾಗಿದೆ. ಇನ್ನುಳಿದ ಹತ್ತಕ್ಕೂ ಹೆಚ್ಚು ಪುಟಗಳಲ್ಲಿನ ಉತ್ತರ ಬೇರೆಯವರ ಅಕ್ಷರದಲ್ಲಿತ್ತು.

ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ಬೇಜವಾಬ್ದಾರಿತನಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕೆ. ಗೋಪಿನಾಥ, ನನ್ನ ಮಗಳ ಉತ್ತರಪತ್ರಿಕೆಯ ಮೊದಲ ಪುಟದಲ್ಲಿ ಮಾತ್ರ ಅವಳ ಪ್ರವೇಶ ಪತ್ರದ ಸಂಖ್ಯೆ ಇದೆ. ಬೇರೆ ಉತ್ತರಪತ್ರಿಕೆಯಲ್ಲಿ ಮತ್ತೂಬ್ಬರ ಪ್ರವೇಶ ಪತ್ರದ ಸಂಖ್ಯೆಯನ್ನು ನಮೂದು ಮಾಡಲಾಗಿದೆ. ದಿವ್ಯಳ ಪ್ರವೇಶ ಪತ್ರದ ಸಂಖ್ಯೆ 20190106242 ಇದ್ದು, ಉತ್ತರಪತ್ರಿಕೆ ನಕಲು ಕಳಿಸುವಾಗ ಮೊದಲ ಪುಟದಲ್ಲಿ ಮಾತ್ರ ಈ ಸಂಖ್ಯೆ ಇದೆ. ಮತ್ತೂಂದು ಉತ್ತರಪತ್ರಿಕೆಯ ಪ್ರವೇಶ ಪತ್ರದ ಸಂಖ್ಯೆ 20190171271 ಆಗಿದೆ. ಪ್ರೌಢಶಿಕ್ಷಣ ಮಂಡಳಿ ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಿ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮಂಡಳಿ ವಿರುದ್ಧ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next