Advertisement

ಸಚಿವರ ಗ್ರಾಮ ವಾಸ್ತವ್ಯಕ್ಕೆ ಸಿದ್ಧತೆ 

06:02 PM Oct 20, 2019 | Team Udayavani |

ಚಳ್ಳಕೆರೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅ. 25 ರಂದು ತಳಕು ಹೋಬಳಿಯ ತಾಲೂಕಿನ ಗಡಿ ಭಾಗದಲ್ಲಿರುವ ಓಬಳಾಪುರದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ತಹಶೀಲ್ದಾರ್‌ ಎಂ.ಮಲ್ಲಿಕಾರ್ಜುನ್‌ ತಿಳಿಸಿದರು.

Advertisement

ಇಲ್ಲಿನ ತಾಲೂಕು ಕಚೇರಿಯಲ್ಲಿ ಶನಿವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಗ್ರಾಮ ವಾಸ್ತವ್ಯದ ಬಗ್ಗೆ ನಿರ್ದೇಶನ ನೀಡಿದೆ. ಸಚಿವ ಶ್ರೀರಾಮುಲು ಗ್ರಾಮ ವಾಸ್ತವ್ಯದ ಜೊತೆಗೆ ಜನಸ್ಪಂದನ ಸಭೆಯನ್ನೂ ನಡೆಸುವರು. ಓಬಳಾಪುರ ಗ್ರಾಮದ ಸಮಸ್ಯೆಗಳು ಮತ್ತು ಸರ್ಕಾರಿ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಲಿದ್ದು, ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಯ ವರದಿಯನ್ನು ಅ. 21 ರೊಳಗೆ ಸಿದ್ಧಪಡಿಸಿ ಪರಿಶೀಲನೆಗೆ ಒಳಪಡಿಸುವಂತೆ ಸೂಚಿಸಿದರು.

ಓಬಳಾಪುರ ಭಾಗದ ರಸ್ತೆಗಳ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ. ಯಾವುದೇ ಭಾಗದಲ್ಲಾದರೂ ದುರಸ್ತಿ ಮಾಡಬೇಕಿದ್ದಲ್ಲಿ ಕೂಡಲೇ ದುರಸ್ತಿಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಇಂಜಿಯರ್‌ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ನ. 1ರಂದು ಆಚರಿಸಲಿರುವ ಕನ್ನಡ ರಾಜ್ಯೋತ್ಸವದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಕನ್ನಡ ರಾಜ್ಯೋತ್ಸವ ಬಗ್ಗೆ ಉಪನ್ಯಾಸ ನೀಡಲು ಮಹಿಳೆಯರಿಗೆ ಅವಕಾಶ ನೀಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್‌ ಕೆ. ಬಾರಕೇರ್‌, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್‌, ಬಿಸಿಎಂ ಅಧಿ ಕಾರಿ ಡಿ.ಟಿ. ಜಗನ್ನಾಥ, ಸಮಾಜ ಕಲ್ಯಾಣಾಧಿಕಾರಿ ಮಂಜಪ್ಪ, ತೋಟಗಾರಿಕೆ ಇಲಾಖೆ ಅಧಿಕಾರಿ ವಿರೂಪಾಕ್ಷಪ್ಪ,
ಆರೋಗ್ಯ ಇಲಾಖೆಯ ಎಸ್‌.ಬಿ.ತಿಪ್ಪೇಸ್ವಾಮಿ, ದಯಾನಂದ, ಖಜಾನೆ ಇಲಾಖೆ ಅ ಧಿಕಾರಿ ಚೌಡಪ್ಪ, ಪಿಎಸ್‌ಐ ಶಿವಕುಮಾರ್‌, ಎಎಸ್‌ಐ ತಿಮ್ಮಣ್ಣ, ಮಂಜಪ್ಪ, ಕಂದಾಯಾಧಿಕಾರಿ ರಫೀ, ಪ್ರಭಾರಿ ಕಂದಾಯಾ ಧಿಕಾರಿ ರಾಜೇಶ್‌, ಶಿರಸ್ತೇದಾರ್‌ ಮಂಜುನಾಥಸ್ವಾಮಿ, ಡಿ. ಶ್ರೀನಿವಾಸ್‌, ರೇಣುಕಮ್ಮ, ಎಚ್‌.ಎಸ್‌. ಸೈಯ್ಯದ್‌, ನಗರಂಗೆರೆ ಶ್ರೀನಿವಾಸ್‌, ರಾಜಾ ಪರಶುರಾಮ ನಾಯಕ, ಕೆ.ಎಂ. ಜಗದೀಶ್‌, ರೇವಣ್ಣ, ಶಿವಕುಮಾರ್‌ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next