Advertisement
ಈ ಸಂದರ್ಭದಲ್ಲಿ ಮಾತನಾಡಿದ ವೃತ್ತ ನಿರೀಕ್ಷಕ ಎನ್. ತಿಮ್ಮಣ್ಣ, ತಾಲೂಕಿನ ವೃತ್ತ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಪಘಾತಗಳು ಹಾಗೂ ದುರ್ಮರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾಯೋನ್ಮುಖವಾಗಿದೆ. ಪ್ರಸ್ತುತ ಶ್ರೀರಂಗಪಟ್ಟಣ-ಬೀದರ್‌ನ ರಾಷ್ಟ್ರೀಯ, ರಾಜ್ಯ ಹೆದ್ದಾರಿ 150(ಎ)ವ್ಯಾಪ್ತಿಯಲ್ಲಿ ಅಪಘಾತಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದರು.
Related Articles
Advertisement
ಹೆಗ್ಗೆರೆ ಗೇಟ್, ಸಾಣೀಕೆರೆ, ಗೋಪನಹಳ್ಳಿ ಕ್ರಾಸ್, ಹೊಟ್ಟೆಪ್ಪನಹಳ್ಳಿ ಕ್ರಾಸ್, ಲಕ್ಷ್ಮೀ ಪುರ ಗೇಟ್, ನಗರಂಗೆರೆ ಗೇಟ್, ಬಳ್ಳಾರಿ ರಸ್ತೆ ಚಳ್ಳಕೆರೆಯಮ್ಮ ದೇವಸ್ಥಾನ ಸೇತುವೆ, ನಾಯಕನಹಟ್ಟಿ ಕ್ರಾಸ್, ಬುಡ್ನಹಟ್ಟಿ ಬಸ್ ನಿಲ್ದಾಣ, ಚಿಕ್ಕಮ್ಮನಹಳ್ಳಿ ಬಸ್ ನಿಲ್ದಾಣ, ಗಿರಿಯಮ್ಮನಹಳ್ಳಿ ಬಸ್ ನಿಲ್ದಾಣ, ತಳಕು, ನಾಯಕನಹಟ್ಟಿ, ಪರಶುರಾಂಪುರ ವ್ಯಾಪ್ತಿಯ ಅಪಘಾತ ಸ್ಥಳಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅವರು ಕೆಲವೆಡೆ ಬಿಳಿ ಬಣ್ಣದ ಎಚ್ಚರಿಕೆ ಮಾಹಿತಿ ಫಲಕ ಹಾಗೂ ರಿಫ್ಲೆಕ್ಟಿಂಗ್ ಲೈಟ್, ಮಿರರ್, ಹಂಪ್ಸ್ ನಾಮಫಲಕ ಅಳವಡಿಸುವ ಬಗ್ಗೆ ಮುಕ್ತವಾಗಿ ಚರ್ಚಿಸಿ ಈ ಬಗ್ಗೆ ಅಧಿಕಾರಿಗಳಿಗೆ ವರದಿ ನೀಡಿ ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಚಳ್ಳಕೆರೆ ವೃತ್ತ ವ್ಯಾಪ್ತಿಯಲ್ಲಿ ನಡೆಯುವ ಅಪಘಾತಗಳು ನಿಯಂತ್ರಣಗೊಂಡಲ್ಲಿ ನೂರಾರು ಜನರ ಪ್ರಾಣವನ್ನು ರಕ್ಷಣೆ ಮಾಡಿದಂತಾಗುತ್ತದೆ. ವಿಶೇಷವಾಗಿ ಸಂಜೆಯಿಂದ ಬೆಳಗಿನ ತನಕ ಒಮ್ಮೆಮ್ಮೆ ಒಂದೇ ರಾತ್ರಿಯಲ್ಲಿ ಎರಡ್ಮೂರು ಅಪಘಾತಗಳು ನಿರಂತರವಾಗಿ ನಡೆದು ಹಲವರು ಪ್ರಾಣ ಕಳೆದುಕೊಂಡ ಉದಾಹರಣೆಗಳು ಹಲವಾರು ಇವೆ. ರಾತ್ರಿವೇಳೆ ಸಂಚರಿಸುವ ವಾಹನಗಳಿಗೆ ರಿಪ್ಲೆಕ್ಟರ್ ಲೈಟ್ ಹಾಗೂ ಮಿರರ್ ಕಂಡು ಬಂದಲ್ಲಿ ವಾಹನದ ವೇಗವನ್ನು ನಿಯಂತ್ರಿಸಿ ಅಪಘಾತಗಳನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ವಾಹನ ಚಾಲಕರು ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು.•ಎನ್.ತಿಮ್ಮಣ್ಣ, ವೃತ್ತ ನಿರೀಕ್ಷಕ.