Advertisement

ನೇಕಾರ ಸಮಾಜ ಸಂಘಟಿತವಾಗಲಿ

04:20 PM Jan 29, 2020 | Naveen |

ಚಳ್ಳಕೆರೆ: ಕಳೆದ ನೂರಾರು ವರ್ಷಗಳಿಂದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅನುಸರಿಸುತ್ತಾ ಬದುಕನ್ನು ಹಂಚಿಕೊಂಡ ನಾವು ದೇವರು, ದೈವತ್ವ ಮತ್ತೆ ಶ್ರೇಷ್ಠ ಮುನಿಗಳ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದೇವೆ. ಇಂದಿಗೂ ನಾವು ಸಂಸ್ಕಾರವಂತರಾಗಿ ನಮ್ಮ ಬದುಕನ್ನು ನಡೆಸಲು ಭಕ್ತ ಮಾರ್ಕಾಂಡೇಯರೂ ಸಹ ಪ್ರಮುಖ ಕಾರಣರು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

Advertisement

ಇಲ್ಲಿನ ಮದಕರಿನಗರದಲ್ಲಿರುವ ಪದ್ಮಸಾಲಿ ಕಲ್ಯಾಣಮಂಟಪದಲ್ಲಿ ನೇಕಾರರ ಸಮುದಾಯ ಹಮ್ಮಿಕೊಂಡಿದ್ದ ಭಕ್ತ ಮಾರ್ಕಂಡೇಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೇಕಾರ ಸಮುದಾಯದ ಕುಲದೇವರು ಆರಾಧ್ಯದೈವ ಆದ ಭಕ್ತಮಾರ್ಕಾಂಡೇಯ ತನ್ನದೇಯಾದ ವಿಶೇಷ ಭಕ್ತಿಯಿಂದ ವರ ಪಡೆದು ಅದನ್ನು ಸಮಾಜದ ಸದುಪಯೋಗಕ್ಕಾಗಿ ಧರ್ಮ ಪ್ರಚಾರ ಮೂಲಕ ಬಳಕೆಗೆ ತಂದು ಸಮಸ್ತ ಜನರ ಕಲ್ಯಾಣಕ್ಕೆ ನಾಂದಿ ಹಾಡಿದರು.

ಸಮುದಾಯ ಇಂತಹ ಮಹಾಪುರುಷರ ಜಯಂತಿ ಆಚರಣೆ ಮಾಡುವ ಮೂಲಕ ಇವರ ಕೊಡುಗೆಯನ್ನು ಮತ್ತೂಮ್ಮೆ ಎಲ್ಲರೂ ನೆನೆಪಿಸಿಕೊಳ್ಳುವಂತೆ ಮಾಡಿದೆ. ನೇಕಾರರ ಸಮುದಾಯ ಸಂಘಟಿತವಾಗಿ ಇನ್ನೂ ಹೆಚ್ಚಿನ ರಾಜಕೀಯ ಜಾಗೃತಿ ಮೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರು ತಮ್ಮ ಸಂಘಟನೆಯನ್ನು ಬಲಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮೇಡಂ ಶಿವಮೂರ್ತಿ ಮಾತನಾಡಿ, ಪ್ರತಿ ವರ್ಷ ಮಾರ್ಕಾಂಡೇಯ ಜಯಂತಿ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕರು ಆಗಮಿಸಿ ನಮ್ಮ ಸಮುದಾಯದ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಾ ಬಂದಿದ್ದಾರೆ. ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸುವುದಲ್ಲದೆ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ತಮ್ಮನ್ನೇ ತಾವು ಸಮರ್ಪಿಸಿಕೊಂಡು ಚಳ್ಳಕೆರೆ ಕ್ಷೇತ್ರ ಹಿಂದೆಂದೂ ಕಾಣದಂತಹ ಪ್ರಗತಿಯನ್ನು ಸಾಧಿಸಿ ತೋರಿಸಿದ್ದಾರೆ.  ಮುಂದಿನ ದಿನಗಳಲ್ಲೂ ಸಹ ನಾವು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರವಿಕುಮಾರ್‌, ಕಾರ್ಯದರ್ಶಿ ರಾಮಸ್ವಾಮಿ, ನಿರ್ದೇಶಕರಾದ ಸತ್ಯನಾರಾಯಣ, ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಮ್ಮ, ಯುವ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭೆ ಪೌರಾಯುಕ್ತ ಪಿ. ಪಾಲಯ್ಯ, ನಗರಸಭಾ ಸದಸ್ಯರಾದ ಸಿ. ಶ್ರೀನಿವಾಸ್‌, ರಮೇಶ್‌ ಗೌಡ, ಮಲ್ಲಿಕಾರ್ಜುನ್‌, ವೈ. ಪ್ರಕಾಶ್‌, ತಾಲೂಕು ಪಂಚಾಯತ್‌ ಸದಸ್ಯ ಜಿ. ವೀರೇಶ್‌ ಮತ್ತಿತರರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next