Advertisement

27ರಿಂದ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ -ಮಸ್ತಕಾಭಿಷೇಕ

04:10 PM Jan 25, 2020 | Naveen |

ಚಳ್ಳಕೆರೆ: ನಗರದ ಮಹದೇವಿ ರಸ್ತೆಯ ಪುಣ್ಯನಗರಿಯಲ್ಲಿ ತಾಲೂಕು ಜೈನ ಸಮುದಾಯದ ವತಿಯಿಂದ ಭಗವಾನ್‌ 1008 ಶ್ರೀಪಾಶ್ವನಾಥ ಜಿನಮಂದಿರದ ಸ್ವರ್ಣಮಹೋತ್ಸವದ ನಿಮಿತ್ತ ಶ್ರೀಮದ್‌ ಜಿನೇಂದ್ರ ಪಂಚಕಲ್ಯಾಣ ನೂತನ ಏಕಶಿಲಾ ಭಗವಾನ್‌ 1008 ಶ್ರೀಬಾಹುಬಲಿ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಮಸ್ತಕಾಭಿಷೇಕ ಮಹೋತ್ಸವನ್ನು ಜ.27ರಿಂದ 30ರ ತನಕ ಜೈನಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಜೈನ ಸಮಾಜದ ಹಿರಿಯ ಮುಖಂಡ, ಮಾಜಿ ಸಚಿವ ಡಿ.ಸುಧಾಕರ್‌ ತಿಳಿಸಿದ್ದಾರೆ.

Advertisement

ಈ ಬಗ್ಗೆ ಮಾಹಿತಿ ನೀಡಿದ ಅವರು, ಚಳ್ಳಕೆರೆ ನಗರದಲ್ಲಿ ಇದೇ ಮೊದಲ ಬಾರಿಗೆ ಬಾಹುಬಲಿ ಸ್ವಾಮಿಯ ಪ್ರತಿಷ್ಠಾಪನೆ, ಮಸ್ತಕಾಭಿಷೇಕ ಮತ್ತು ತಾಲೂಕು ಜೈನ ಸಮಾಜದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜೈನ ಪರಂಪರೆ ಬಗ್ಗೆ ಸಾರ್ವಜನಿಕರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಲು
ಒಟ್ಟು 4 ದಿನಗಳ ಕಾಲ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸರ್ವರೂ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿಕೊಡುವಂತೆ ಮನವಿ ಮಾಡಿದ್ಧಾರೆ.

ಈ ಪುಣ್ಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿ, ಭಕ್ತರಿಗೆ ಆಶೀರ್ವಾದ ನೀಡಲು ನಾಡಿನ ವಿವಿಧೆಡೆಯಲ್ಲಿರುವ ಜೈನಮುನಿಗಳು ಹಾಗೂ ಜೈನ ಸಮುದಾಯದ ಎಲ್ಲಾ ಹಿರಿಯರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕಾರ ನೀಡುತ್ತಿದ್ದಾರೆ. ತಾಲೂಕು ಜೈನ ಸಮಾಜದ ವತಿಯಿಂದ ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ರೀತಿಯ ಸಹಕಾರಗಳನ್ನು ನೀಡಲು ಸಮುದಾಯ ಮುಂದೆ ಬಂದಿದೆ. ಜೈನ ಸಮುದಾಯದ ಈ ಮಹತ್ವಪೂರ್ಣ ಕಾರ್ಯಕ್ರಮಕ್ಕೆ ಮುನಿಶ್ರೀ108 ಅಮೋಘಕೀರ್ತಿಜೀ ಮಹಾರಾಜರು ಮತ್ತು ಮುನಿಶ್ರೀ108 ಅಮರಕೀರ್ತಿ ಶ್ರೀಮಹಾರಾಜರು ಜ.23ರಂದು ಚಳ್ಳಕೆರೆಗೆ ಆಗಮಿಸಿದ್ದು, ಅವರನ್ನು ಬೆಂಗಳೂರು ರಸ್ತೆಯ ಪದ್ಮಚಿತ್ರಮಂದಿರದ ಬಳಿ ಸಮುದಾಯದ ಪರವಾಗಿ ಮಂಗಳ
ವಾದ್ಯಗಳೊಂದಿಗೆ ಸ್ವಾಗತಿಸಿ ಮೆರವಣಿಗೆ ಮೂಲಕ ಪುರಪ್ರವೇಶ ಮಾಡಿಸಲಾಯಿತು ಎಂದರು.

ಕಾರ್ಯಕ್ರಮಕ್ಕೆ 108 ಪುಣ್ಯಸಾಗರಮುನಿ ಮಹಾರಾಜರು ಜ.25ರ ಶನಿವಾರ ಬೆಳಗ್ಗೆ ಚಳ್ಳಕೆರೆ ನಗರಕ್ಕೆ ಆಗಮಿಸಲಿದ್ದು, ಅವರನ್ನು ಬೆಂಗಳೂರು ರಸ್ತೆಯ ಮಾರುಕಟ್ಟೆ ಆವರಣದಿಂದ ಸಮಸ್ತ ಜೈನಸಮುದಾಯದ ಪರವಾಗಿ ಸ್ವಾಗತಿಸಲಾಗುವುದು ಎಂದರು.

ಜ.27ರ ಸೋಮವಾರ ಸಂಜೆ 7ಕ್ಕೆ ಜೈನಮಂದಿರದಲ್ಲಿ ನಡೆಯುವ ಧಾರ್ಮಿಕ ಸಭೆಗೆ ಮುಖ್ಯ ಅತಿಥಿಗಳಾಗಿ ಶಾಸಕ ಟಿ.ರಘುಮೂರ್ತಿ, ಬೆಳಗಾವಿ ಶಾಸಕ ಅಭಯ್‌ಕುಮಾರ್‌ ಪಾಟೀಲ್‌, ಮಾಜಿ ಶಾಸಕರಾದ ಇಳ್ಕಲ್‌ ವಿಜಯಕುಮಾರ್‌, ಸಂಜಯ ಪಾಟೀಲ, ತಹಶೀಲ್ದಾರ್‌
ಎಂ.ಮಲ್ಲಿಕಾರ್ಜುನ್‌, ವೀರಶೈವ ಸಮಾಜ ಅಧ್ಯಕ್ಷ ಎಚ್‌.ಗಂಗಣ್ಣ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ರಾಮಮೋಹನ್‌, ವಾಲ್ಮೀಕಿ ಸಮಾಜದ ಅಧ್ಯಕ್ಷ ಬಂಗೆಪ್ಪಮಾಸ್ಟರ್‌ ಆಗಮಿಸುವರು.
ಜೈನ ಸಮುದಾಯದ ಧಾರ್ಮಿಕ ಕಾರ್ಯಕ್ರಮಗಳಿಗೆ ಸರ್ವರೂ ಆಗಮಿಸಿ ಯಶಸ್ವಿಗೊಳಿಸುವಂತೆ ಬಾಹುಬಲಿ ದಿಗಂಬರ ಜೈನಟ್ರಸ್ಟ್‌ ಅಧ್ಯಕ್ಷ ಡಿ.ಭರತ್‌ರಾಜ್‌, ಡಿ.ಅಂಬಣ್ಣ, ಡಿ.ಪ್ರಭಾರಕ್‌, ಡಾ.ವಿಜಯೇಂದ್ರ, ಗೌರಿಪುರ ಪಾಶ್ವನಾಥ, ಎನ್‌.ಜೆ. ವೆಂಕಟೇಶ್‌, ಸಚಿನ್‌, ದರ್ಶನ್‌, ನಾಗರಾಜು, ಕೋರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next