Advertisement

ನೆರೆ ರಾಜ್ಯದವರು ಕಾಲಿಡದಂತೆ ಜಾಗ್ರತೆ ವಹಿಸಿ

12:32 PM Apr 20, 2020 | Naveen |

ಚಳ್ಳಕೆರೆ: ತಾಲೂಕಿನ ಗಡಿ ಗ್ರಾಮದ ವ್ಯಕ್ತಿಯೊಬ್ಬರು ಆಂಧ್ರಪ್ರದೇಶದ ಕೋವಿಡ್ ಪೀಡಿತರನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಯಾರೂ ಸಹ ಆಂಧ್ರದಿಂದ ಕರ್ನಾಟಕದ ಕಡೆಗೆ ಹೆಜ್ಜೆ ಇಡದಂತೆ ಎಚ್ಚರಿಕೆ ವಹಿಸಬೇಕೆಂದು ಶಾಸಕ ಟಿ. ರಘುಮೂರ್ತಿ ಸೂಚಿಸಿದರು.

Advertisement

ಜಾಜೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ದೊಡ್ಡಓಬಯ್ಯನಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ತಾಲೂಕಿನ ಗಡಿಭಾಗದಲ್ಲಿರುವ ಈ ಗ್ರಾಮದಲ್ಲಿ ಬಹುತೇಕ ಬಡ ಮತ್ತು ಅನಕ್ಷರಸ್ಥ ಕುಟುಂಬಗಳಿವೆ. ಕೋವಿಡ್ ವೈರಾಣು ಯಾವುದೇ ಸಂದರ್ಭದಲ್ಲೂ ನಮ್ಮ ಪ್ರದೇಶಕ್ಕೆ ಕಾಲಿಡಬಹುದಾಗಿದೆ. ಆದ್ದರಿಂದ ಆರೋಗ್ಯ ಮತ್ತು ಆರಕ್ಷಕ ಇಲಾಖೆ ಅಧಿಕಾರಿಗಳು ಈ ಭಾಗದಲ್ಲಿರುವ ಎಲ್ಲಾ ಗ್ರಾಮಗಳ ಮೇಲೆ ನಿಗಾ ವಹಿಸಬೇಕೆಂದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಎನ್‌.ಪ್ರೇಮಸುಧಾ ಮಾತನಾಡಿ, ಆಂಧ್ರಪ್ರದೇಶದ ಗಂಟೆಓಬಯ್ಯನಹಟ್ಟಿ ಗ್ರಾಮದ ಯುವತಿಯೋರ್ವಳು ಜಾಜೂರಿನ ಓಬಳೇಶ್‌ ಎಂಬುವವರನ್ನು ವಿವಾಹವಾಗಿದ್ದಾಳೆ. ಗಂಟೆಓಬಯ್ಯನಹಟ್ಟಿಯ ಓರ್ವ ವ್ಯಕ್ತಿ ಅನಂತಪುರದಲ್ಲಿ ಕೊರೊನಾ ಪಾಸಿಟಿವ್‌ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಟೆಓಬಯ್ಯನಹಟ್ಟಿ ಸಂಪರ್ಕ ಪಡೆದ ಎಲ್ಲರನ್ನೂ ಪರೀಕ್ಷೆಗೆ ಒಳಡಿಸಲಾಗಿದ್ದು, ಯಾವುದೇ ರೀತಿಯ ಅಪಾಯವಿಲ್ಲ ಎಂದು ತಿಳಿಸಿದರು.

ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ, ಕಂದಾಯಾಧಿಕಾರಿಗಳಾದ ರಫೀ, ಹಿರಿಯಪ್ಪ, ತಿಪ್ಪೇಸ್ವಾಮಿ, ಪಿಎಸ್‌ಐ ಮಹೇಶ್‌, ಆರೋಗ್ಯ ಇಲಾಖೆಯ ಎನ್‌. ಪ್ರೇಮಕುಮಾರ್‌, ಜಾಜೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಶ್ರೀನಿವಾಸ್‌, ಹನುಮಕ್ಕ, ನಗರಸಭಾ ಸದಸ್ಯ ಬಿ.ಟಿ. ರಮೇಶ್‌ ಗೌಡ, ಗ್ರಾಪಂ ಅಧ್ಯಕ್ಷರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next