Advertisement

ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮ ಅನಿವಾರ್ಯ: ಎಸ್ಪಿ ರಾಧಿಕಾ

01:58 PM Apr 18, 2020 | Naveen |

ಚಳ್ಳಕೆರೆ: ಕೋವಿಡ್ ವೈರಾಣು ವ್ಯಾಪಿಸಿದಲ್ಲಿ ಸಾವಿರಾರು ಜನರು ಸಾವನ್ನಪ್ಪುವ ಸಾಧ್ಯತೆ ಇದ್ದು, ಎಲ್ಲರನ್ನೂ ಸಾವಿನಿಂದ ರಕ್ಷಿಸಲು ಅನಿವಾರ್ಯವಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಾಗಿದೆ. ಜನರಿಗೆ ಅನಗತ್ಯವಾಗಿ ತೊಂದರೆ ಕೊಡುವ ಉದ್ದೇಶ ಇಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ ಹೇಳಿದರು.

Advertisement

ನಗರದ ಮೊರಾರ್ಜಿ ವಸತಿ ಶಾಲೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಇರಿಸಲಾಗಿರುವ ಬೆಂಗಳೂರು ಮತ್ತು ರಾಮನಗರದಿಂದ ರಾಯಚೂರು ಮತ್ತು ಗುಲ್ಬರ್ಗಕ್ಕೆ ಹೊರಟಿದ್ದ 173 ಕೂಲಿ ಕಾರ್ಮಿಕರನ್ನು ಭೇಟಿ ಮಾಡಿ ಅವರು ಮಾತನಾಡಿದರು. ಪೊಲೀಸ್‌ ಇಲಾಖೆ ಪರವಾಗಿ ಬ್ರೆಡ್‌, ಬಿಸ್ಕಿಟ್‌, ಹಣ್ಣು ನೀಡಿದ ಎಸ್ಪಿ, ಪೊಲೀಸ್‌ ಇಲಾಖೆ ನಿಮಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಜಾಗ್ರತೆ ವಹಿಸಲಿದೆ. ಸರ್ಕಾರದಿಂದ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡಲಾಗುವುದು. ನೀವು ಸಹಕರಿಸಿದಲ್ಲಿ ಮಾತ್ರ ವೈರಾಣು ವ್ಯಾಪಿಸದಂತೆ ತಡೆಯಬಹುದು ಎಂದರು.

ರಾಯಚೂರು ಜಿಲ್ಲೆಯ ಜಾಲಹಳ್ಳಿ ಗ್ರಾಮದ ಹನುಮಕ್ಕ, ದಯಮಾಡಿ ನಮ್ಮನ್ನು ಊರಿಗೆ ಕಳುಹಿಸಿ ಕೊಡಿ. ನಮ್ಮ ಕುಟುಂಬವನ್ನು ಬಿಟ್ಟು ಇರಲು ಸಾಧ್ಯವಿಲ್ಲವೆಂದು ತನ್ನ ಪುಟ್ಟ ಮಗುವನ್ನು ಎತ್ತಿಕೊಂಡು ಕಣ್ಣೀರಿಟ್ಟಳು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ರಾಧಿಕಾ, ಅನಿವಾರ್ಯವಾಗಿ ಕೆಲವು ಸಂದರ್ಭಗಳನ್ನು ಸಮಾಧಾನದಿಂದ ಎದುರಿಸಬೇಕು. ನಿಮ್ಮ ಮುಂದಿನ ಭವಿಷ್ಯಕ್ಕಾಗಿ ಇಂದಿನ ತೊಂದರೆಯನ್ನು ತಾಳ್ಮೆಯಿಂದ ಎದುರಿಸಿ ಎಂದು ಸಮಾಧಾನಪಡಿಸಿದರು.

ಡಿವೈಎಸ್ಪಿ ಎಸ್‌. ರೋಷನ್‌ ಜಮೀರ್‌, ವೃತ್ತ ನಿರೀಕ್ಷಕರಾದ ಈ. ಆನಂದ, ಗೋಪಾಲ ನಾಯ್ಕ, ಪಿಎಸ್‌ಐಗಳಾದ ಎನ್‌. ಗುಡ್ಡಪ್ಪ, ಎಂ.ಕೆ. ಬಸವರಾಜು, ಪ್ರಾಂಶುಪಾಲ ನಾಗೇಂದ್ರಪ್ಪ, ಮುಖ್ಯ ಶಿಕ್ಷಕ ಬಸವರಾಜು, ಎಸ್ಟಿ ಕಲ್ಯಾಣಾಧಿ ಕಾರಿ ಮಾಲತಿ, ವಾರ್ಡ್ ನ್‌ ವಸಂತಕುಮಾರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next