Advertisement

ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಬಲಪಡಿಸಿ

03:46 PM Aug 03, 2019 | Naveen |

ಚಳ್ಳಕೆರೆ: ಬಿಜೆಪಿ ಕಾರ್ಯಕರ್ತರ ಪರಿಶ್ರಮ ಹಾಗೂ ಭಗವಂತನ ಅನುಗ್ರಹ ನಮ್ಮೆಲ್ಲರ ಕನಸು ಇಂದು ನನಸಾಗಿದೆ. ರೈತ ಹೋರಾಟಗಾರ ಬಿ.ಎಸ್‌.ಯಡಿಯೂರಪ್ಪ ಮತ್ತೆ ಸಿಎಂ ಆಗಿದ್ದಾರೆ. ಎಲ್ಲ ಹಂತದ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನವನ್ನು ಚುರುಕುಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ.ಎಸ್‌.ನವೀನ್‌ ಮನವಿ ಮಾಡಿದರು.

Advertisement

ಇಲ್ಲಿನ ದಲ್ಲಾಲರ ಸಮುದಾಯ ಭವನದಲ್ಲಿ ಪಕ್ಷ ಹಮ್ಮಿಕೊಂಡಿದ್ದ ಬಿಜೆಪಿ ಸಂಘಟನಾ ಪರ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಮಂಡಲ ವಿಭಾಗದಲ್ಲಿ ಸದಸ್ಯತ್ವ ನೋಂದಣಿ ಕಾರ್ಯ ಚುರುಕಿನಿಂದ ಸಾಗಿದೆ. ಚಳ್ಳಕೆರೆ ಮಂಡಲಕ್ಕೆ ಈಗಾಗಲೇ 40 ಸಾವಿರ ಸದಸ್ಯತ್ವವನ್ನು ನೋಂದಾಯಿಸುವಂತೆ ಸೂಚನೆ ನೀಡಿದ್ದು, ಈ ಗುರಿ ಈಡೇರಿಸುವುದು ಎಲ್ಲರ ಜವಾಬ್ದಾರಿ ಎಂದರು.

ಜಿಲ್ಲಾ ಸದಸ್ಯತ್ವ ಅಭಿಯಾನ ಪ್ರಭಾರಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ನಡೆಯುತ್ತಿದ್ದು, ಆ.11ರೊಳಗೆ ಈ ಅಭಿಯಾನ ಕಾರ್ಯಕ್ರಮ ಮುಕ್ತಯವಾಗಲಿದೆ. ಪಕ್ಷದ ಕಾರ್ಯಕರ್ತರು ಸಮಾಜದ ಎಲ್ಲಾ ವರ್ಗದ ಜನರನ್ನು ಗುರುತಿಸಿ ಅವರಿಗೆ ಸದಸ್ಯತ್ವ ನೀಡಬೇಕು. ಯಾವ ಕಾರ್ಯಕರ್ತನು ಸಹ ಅಭಿಯಾನದಿಂದ ದೂರ ಉಳಿಯದೆ ತನ್ನ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.

ಮಂಡಲ ಸಂಚಾಲಕ ಟಿ.ಬೋರನಾಯಕ ಮಾತನಾಡಿ, ಮಂಡಲ ವ್ಯಕ್ತಿಯ ಎಲ್ಲಾ ಗ್ರಾಮಗಳಿಗೆ ಸದಸ್ಯತ್ವ ನೋಂದಣಿ ಬಗ್ಗೆ ಮಾಹಿತಿ ನೀಡಲಾಗಿದ್ದು, ಕಾರ್ಯಕರ್ತರು ನೋಂದಣಿ ಕಾರ್ಯದಲ್ಲಿ ಸಕ್ರಿಯವಾಗಿದ್ದಾರೆ. ಈಗಾಗಲೇ 10 ಸಾವಿರ ಸದಸ್ಯರನ್ನು ಪಕ್ಷಕ್ಕೆ ನೋಂದಾಯಿಸಲಾಗಿದೆ ಎಂದರು.

ಜಿಲ್ಲಾ ಸಹ ಪ್ರಭಾರಿ ಜಿ.ಎಂ. ಸುರೇಶ್‌, ರಾಜ್ಯದ ಎಲ್ಲೆಡೆ ಬಿಜೆಪಿ ಪರವಾದ ಅಲೆ ಇದೆ. ಯಾರನ್ನೇ ಕೇಳಿದರೂ ಸದಸ್ಯತ್ವ ಸ್ವೀಕರಿಸಲು ಸಿದ್ಧರಿದ್ದಾರೆ. ಕಾರ್ಯಕರ್ತರು ಮನೆ, ಮನೆಗೂ ತೆರಳಿ ಭೇಟಿ ಮಾಡಿ ಅವರಿಗೆ ಸದಸ್ಯತ್ವವನ್ನು ನೀಡಬೇಕಿದೆ. ನಿಮ್ಮೆಲ್ಲರ ನಿರಂತರ ಪರಿಶ್ರಮದಿಂದ ಮಾತ್ರ ಪಕ್ಷ ಸಂಘಟನೆಯಾಗಲು ಸಾಧ್ಯ ಎಂದರು.

Advertisement

ಮಾಜಿ ಮಂಡಲಾಧ್ಯಕ್ಷ ಡಿ.ಸೋಮಶೇಖರ ಮಂಡಿಮಠ ಮಾತನಾಡಿ, ಕಳೆದ ಸುಮಾರು 20 ವರ್ಷಗಳಿಂದ ಪಕ್ಷದ ಹಲವಾರು ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸಿದ್ದಾರೆ. ಯಾವುದೇ ಹಂತದಲ್ಲೂ ಹಿನ್ನಡೆಯಾಗಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ವಿಶ್ವಾಸ ಹೆಚ್ಚಿದ್ದು, ಸದಸ್ಯತ್ವ ನೋಂದಣಿ ಗುರಿ ಸಾಧಿಸಲಾಗುವುದು ಎಂದರು.

ಬಿಜೆಪಿ ಮುಖಂಡ ಎಂ.ಎಸ್‌.ಜಯರಾಂ ಮಾತನಾಡಿ, ಕ್ಷೇತ್ರದಾದ್ಯಂತ ಈಗಾಗಲೇ ವಿವಿಧ ತಂಡಗಳಲ್ಲಿ ಪ್ರವಾಸ ನಡೆಸಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಯಶಸ್ಸಿಯಾಗಿ ನಡೆಸಲಾಗುತ್ತಿದೆ. ಪ್ರತಿ ಮಂಡಲ ವ್ಯಾಪ್ತಿಯಲ್ಲೂ ಸಹ ಸದಸ್ಯತ್ವ ನೋಂದಣಿ ಯಾವುದೇ ಲೋಪವಿಲ್ಲದೆ ಯಶಸ್ಸಿಯಾಗಿ ನಡೆಯುತ್ತಿದೆ. ಪಕ್ಷದ ಸಂಘಟನೆಗೆ ಸದಸ್ಯತ್ವ ನೋಂದಣಿ ಹೆಚ್ಚು ಬಲ ನೀಡಲಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿ ರಾಮದಾಸ್‌, ಬಿ.ಎಸ್‌.ಶಿವಪುತ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿ, ಮಲ್ಲಿಕಾರ್ಜುನ, ಬಿಜೆಪಿ ಮುಖಂಡರಾದ ಎ.ವಿಜಯೇಂದ್ರ, ಡಿ.ಎಂ.ತಿಪ್ಪೇಸ್ವಾಮಿ, ಆರ್‌.ನಾಗೇಶ್‌, ಎಚ್.ಡಿ.ಭೂಲಿಂಗಪ್ಪ, ಭರತೇಶ್‌ರೆಡ್ಡಿ, ಕರೀಕೆರೆ ನಾಗರಾಜು, ಹಟ್ಟಿರುದ್ರಪ್ಪ, ದಿನೇಶ್‌ರೆಡ್ಡಿ, ಮೋಹನ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next