Advertisement

Politics: ಪಾರ್ಲಿಮೆಂಟ್ ಚುನಾವಣೆ ಬಳಿಕ ಸರ್ಕಾರ ಪತನ; ಛಲವಾದಿ ನಾರಾಯಣಸ್ವಾಮಿ

02:43 PM Mar 16, 2024 | Suhan S |

ವಿಜಯಪುರ : ರಾಜ್ಯದಲ್ಲಿ ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಹೊರಟವರು ಲೂಟಿಗೆ ಇಳಿಯಲಿದೆ. ಲೂಟಿ ಹೊಡೆಯುವ ಬೆಂಗಳೂರು ಮಾಡಿದ್ದಾರೆ. ಇವರ ಯೋಗ್ಯತೆ ರಾಜ್ಯದ ಜನರಿಗೆ ಅರಿವಾಗಿದ್ದು ಪಾರ್ಲಿಮೆಂಟ್ ಚುನಾವಣೆ ಬಳಿಕ ಸರ್ಕಾರ ಇರಲ್ಲ. ಈ ಸರ್ಕಾರದ ಆಯುಷ್ಯ ಬಹಳ ಕಡಿಮೆ ಇದೆ ಬಿಜೆಪಿ ವಕ್ತಾರ ಛಲವಾದಿ ನಾರಾಯಣಸ್ವಾಮಿ ಆರೋಪ ಮಾಡಿದರು.

Advertisement

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೈದು ತಿಂಗಳ ಹಿಂದೆ ತೆಲಂಗಾಣ, ರಾಜ್ಯಸ್ಥಾನ, ಮಧ್ಯಪ್ರದೇಶ ರಾಜ್ಯಗಳ ಚುನಾವಣೆಗೆ ಇಲ್ಲಿಂದ ಲೂಟಿ ಹೊಡೆದ ಹಣವನ್ನೇ ಕಳಿಸಲಾಗಿತ್ತು. ಇದೀಗ ಪಾರ್ಲಿಮೆಂಟ್ ಚುನಾವಣೆಗಾಗಿ ದುಡ್ಡು ವಸೂಲಿಗೆ ಇಳಿದಿದ್ದಾರೆ ಎಂದು ಆರೋಪಿಸಿದರು.

ಗುತ್ತೇದಾರರ ಸಂಘದ ಕೆಂಪಣ್ಣ ಅವರನ್ನು ಬಳಸಿಕೊಂಡು ನಮ್ಮ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಎಂಧು ಕಾಂಗ್ರೆಸ್ ಆರೋಪ ಮಾಡಿಸಿತ್ತು. ಇದೀಗ ಅದೇ ಕೆಂಪಣ್ಣ ಈ ಸರ್ಕಾರದಲ್ಲಿ ಶೇ.60 ರಷ್ಟು ಕಮಿಷನ್ ಹೊಡೆಯಲಾಗುತ್ತದೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ನಿಮಗೆ ಸ್ಪರ್ಧೆ ಮಾಡಲಾಗದಿದ್ದಲ್ಲಿ ನಿಮ್ಮ ಮನೆಯ ಮಕ್ಕಳಿಗಾಗಲಿ, ಮನೆಯವರಿಗಾಗಲಿ ಟಿಕೆಟ್ ಕೊಡುತ್ತೇವೆ ಎಂದರೂ ಸ್ಪರ್ಧೆಗೆ ಅಲ್ಲಿ ಯಾರೂ ಮುಂದೆ ಬರುತ್ತಿಲ್ಲ. ನಮ್ಮ ಪಕ್ಷದಲ್ಲಿ ಒಂದೊಂದು ಕ್ಷೇತ್ರದಲ್ಲಿ 10-15 ಸ್ಪರ್ಧಾಕಾಂಕ್ಷಿಗಳಿದ್ದು, ಸ್ವಲ್ಪ ಕಷ್ಟವಾಗುತ್ತಿದೆ ಎಂದರು.

ಟಿಕೆಟ್ ಸಿಗಲಿಲ್ಲ ಎಂದು ಓಡಿ ಹೋದವರೂ ವಾಪಸ್ ಪಕ್ಷಕ್ಕೆ ಬರುತ್ತಾರೆ. ನಮ್ಮಲ್ಲಿ ಗೊಂದಲಗಳಿಲ್ಲ, ಪ್ರಯತ್ನಗಳು ನಡೆಯುತ್ತವೆ. ಹಿರಿಯ ನಾಯಕರೂ ಟಿಕೆಟ್‍ಗೆ ಬೇಡಿಕೆ ಇಡುತ್ತಿದ್ದಾರೆ. ಕೆ.ಎಸ್.ಈಶ್ವರಪ್ಪ ಸೇರಿದಂತೆ ಅಸಮಾಧಾನಿತರಿಗೆ ಕೇಂದ್ರ ನಾಯಕರು ಉತ್ತರ ಕೊಡಲಿದ್ದಾರೆ ಎಂದರು.

Advertisement

ರಾಜ್ಯದ 28 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಕೇವಲ ಒಂದು ಸ್ಥಾನವನ್ನು. ಡಾ.ಮಂಜುನಾಥ ಅವರ ಹೆಸರು ಘೋಷಣೆ ಬಳಿಕ ಆ ಸ್ಥಾನವನ್ನೂ ಕಳೆದುಕೊಳ್ಳುವ ಬೀತಿ ಎದುರಿಸುತ್ತಿದೆ. ಪರಿಣಾಮ ಚುನಾವಣೆ ಬಲಿಕ ಮತದಾರರಿಗೆ ಫ್ರಿಜ್, ವಾಸಿಂಗ್ ಮಷೀನ್ ಕೊಡಲು ಕೋಪನ್ ವಿತರಿಸಲು ಮುಂದಾಗಿದೆ ಎಂದೂ ಆರೋಪಿಸಿದರು.

ಓಟ್ ಹಾಕಿದರೆ ಟ್ಯಾಂಕರ್ ನೀರು ಘೋಷಿಸಬಹುದು : ನಾರಾಯಣಸ್ವಾಮಿ

ವಿಜಯಪುರ : ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ದಾರಿದ್ರ್ಯ ಆಗಮನವಾಗಿದ್ದು, ಭೀಕರ ಬರ ಎದುರಾಗಿದೆ. ಬೇಡಿಗೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ಸರ್ಕಾರ ತಮ್ಮ ಪಕ್ಷಕ್ಕೆ ಓಟ್ ಹಾಕಿದವರಿಗೆ ಟ್ಯಾಂಕರ್ ನೀರು ಘೋಷಿಸಬಹುದು ಎಂದು ಬಿಜೆಪಿ ವಕ್ತಾರ ಚಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಎಂಕೆ ಜೊತೆಗಿನ ಸಂಬಂಧ ಕಳೆದುಕೊಳ್ಳಲು ಬಯಸದ ಕಾಂಗ್ರೆಸ್, ಬೇಸಿಗೆಯಲ್ಲೂ ರಾಜ್ಯದ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಿದೆ. ನಮ್ಮದೇ ಬೆಂಗಳೂರಿನ ಜನರಿಗೆ ನೀರು ಕೊಡಲು ವಿಫಲವಾಗಿದೆ. ರಾಜ್ಯಲ್ಲಿ ತಮ್ಮ ಪಕ್ಷಕ್ಕೆ ಓಟ್ ಹಾಕಿದವರಿಗೆ ಟ್ಯಾಂಕರ್ ನೀರು ಘೋಷಿಸಬಹುದು ಎಂದು ಬಿಜೆಪಿ ವಕ್ತಾರ ಚಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ಬ್ರ್ಯಾಂಡ್ ಬೆಂಗಳೂರಿಗೆ ಈ ಸರ್ಕಾರದಲ್ಲಿ ಹಿನ್ನಡೆಯಾಗಿದೆ. ಬೆಂಗಳೂನಲ್ಲಿ ನಿತ್ಯದ ಬಳಕೆಗೂ ನೀರಿಲ್ಲದ ಕಾರಣ ಜನ ನಗರ ತೊರೆದು ಹಳ್ಳಿಗೆ ಹೊರಟಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಫಲಾನುಭವಿಗಳಿಗೆ ಶೇ.80 ರಷ್ಟು ಮಹಿಳೆಯರ ಖಾತೆಗಳಿಗೆ 2 ಸಾವಿರ ಹಣವನ್ನು ಹಾಕೇ ಇಲ್ಲ. ಹೀಗಾಗಿ ಸುಳ್ಳು ಹೇಳುವ ವಿಯದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲಾಗದು ಎಂದು ಟೀಕಿಸಿದರು.

ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ದಾರಿದ್ರ್ಯ ಆಗಮನವಾಗಿದ್ದು, ಭೀಕರ ಬರ ಎದುರಾಗಿದೆ. ಕುಡಿಯಲು ನೀರೂ ಸಿಗದೇ ಜನರು ಬೆಂಗಳೂರು ತೊರೆಯುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಚಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ಜನರಿಗೆ ಈಡೇರದ ಆಶ್ವಾಸನೆ ಮೂಲಕ ಧೋಕಾ ಮಾಡಿದ್ದು, ಶೇಕಡಾ ನೂರರಷ್ಟು ದೋಖಾ ಮಾಡಿದ ಸರ್ಕಾರ. ಭೀಕರ ಬರದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಕಿಡಿ ಕಾರಿದರು.

ಪ್ರಕೃತಿ ವಿಕೋಪಗಳು ಸಂಭವಿಸಿದಾಗ ರಾಜ್ಯ ಸರ್ಕಾರ ಕೂಡಲೇ ಬಾಧಿತರ ನೆರವಿಗೆ ಧಾವಿಸಬೇಕು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಎದುರಾದ ಪ್ರವಾಹ ಸಂದರ್ಭದಲ್ಲಿ ಅದನ್ನು ಮಾಡಿದ್ದರು. ತುರ್ತು ಕೆಲಸಗಳಿಗೆ ರಾಜ್ಯ ಸರ್ಕಾರ ಅನುದಾನ ಬಳಸಿ ನಂತರ, ಕೇಂದ್ರಕ್ಕೆ ನಿಯಮಾನುಸಾದ ಪ್ರಸ್ತಾವನೆ ಸಲ್ಲಿಸಬೇಕು. ಆ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next