ಬೆಂಗಳೂರು: ತಾಲಿಬಾನ್ ರನ್ನು ಓಲೈಸುವವರು ಕಾಂಗ್ರೆಸ್‌ನವರು. ಆರ್.ಎಸ್.ಎಸ್ ನವರೂ ಎಂದೂ ಹೋಗಿಲ್ಲ. ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಬಹಳ ಕೀಳಾಗಿ ಮಾತನಾಡಿದ್ದಾರೆ. ಇಂದು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು. ಅರ್.ಎಸ್.ಎಸ್ ನ್ನು ತಾಲಿಬಾನಿಗೆ ಹೋಲಿಸಿದ್ದಾರೆ. ಇದನ್ನ ನಾವು ಖಂಡಿಸುತ್ತೇವೆ ಎಂದು ಬಿಜೆಪಿ ವಕ್ತಾರ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ತಾಲಿಬಾನಿಗಳ ಪರಿಸ್ಥಿತಿ ಹೇಗಿದೆಯೆಂದು ನೋಡಿದ್ದೇವೆ. ತಾಲಿಬಾನಿಗಳು ತಮ್ಮ ಜನರನ್ನೇ ಕೊಲ್ಲುತ್ತಿದೆ. ಆದ್ರೆ ಆರ್.ಎಸ್.ಎಸ್ ತಮ್ಮ ದೇಶದ ರಕ್ಷಣೆಗೆ ನಿಲ್ಲುತ್ತದೆ. ಅರ್.ಎಸ್.ಎಸ್ ಈ ದೇಶದ ಒಂದು ಅಸ್ಮಿತೆ ಎಂದರು.
ಧ್ರುವನಾರಾಯಣ್ ಹಿರಿಯರಾಗಿದ್ದು, ಅವಿವೇಕತನದ ಹೇಳಿಕೆ ನೀಡಬಾರದು. ಇಂದು ನಿಮ್ಮ ಪಕ್ಷದ ಪರಿಸ್ಥಿತಿ ಹೇಗಿದೆ ಎನ್ನುವುದು ನಿಮಗೆ ಗೊತ್ತಿರಲಿ. ಧ್ರುವನಾರಾಯಣ್ ಅವಕಾಶವಾದಿ. ಅವರ ಅತಿರೇಕದ ಹೇಳಿಕೆಗೆ ಜನ ಬುದ್ದಿ ಕಲಿಸುತ್ತಾರೆ ಎಂದು ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಇದನ್ನೂ ಓದಿ:ಕಾಗಿನಲೆ ಸ್ವಾಮೀಜಿ ಆರ್ಶಿವಾದ ಪಡೆದ ಕೇಂದ್ರ ಸಚಿವ ನಾರಾಯಣಸ್ವಾಮಿ: ಎಸ್ ಟಿ ಮೀಸಲಾತಿ ಚರ್ಚೆ
ಲಕ್ಷಣ್ ಎಂಬ ಸಹ ವಕ್ತಾರ ಸಿ.ಟಿ ರವಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಸಿ.ಟಿ ರವಿ ರಾಷ್ಟ್ರೀಯ ನಾಯಕರು. ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿ, ಅನ್ನಪೂರ್ಣೇಶ್ವರಿ ಹೆಸರು ಹೇಳಿದ್ದಾರೆ. ಅನ್ನ ಕೊಡುವ ದೇವತೆಗೆ ಹೋಲಿಸಿದರೆ ಸಿ.ಟಿ.ರವಿ ಕುಡುಕ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಸರಿಯಲ್ಲ. ಕಟೀಲ್ ಕೂಡ ತಮ್ಮ ಹೇಳಿಕೆ ನೀಡಿದ್ದಾರೆ. ಕ್ಯಾಂಟೀನ್‌ನಲ್ಲಿ ತಳ ಸಮುದಾಯದವರು ಊಟ ಮಾಡುತ್ತಿದ್ದಾರೆ. ಹೀಗಾಗಿ ಕ್ಯಾಂಟೀನಿಗೆ ಅಂಬೇಡ್ಕರ್ ಹೆಸರಿಡಲು ಸೂಚಿಸಿದ್ದಾರೆ. ಆದರೆ ಅಂತಿಮವಾಗಿ ಸಿಎಂ ಅವರು ಯಾವ ಹೆಸರೆಂದು ನಿರ್ಧಾರ ಮಾಡಲಿದ್ದಾರ ಎಂದರು.