Advertisement

ಕಾಂಗ್ರೆಸ್‌ನಿಂದ ಪರಿಶಿಷ್ಟ ಜಾತಿ, ಪಂಗಡ ನಿರ್ಲಕ್ಷ್ಯ: ಟೀಕೆ

04:03 PM Jan 24, 2023 | Team Udayavani |

ತುಮಕೂರು: ಕಳೆದ ಐವತ್ತು ವರ್ಷಗಳಿಂದ ಮೀಸಲಾತಿ ಹೆಚ್ಚಳಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಹೋರಾಟ ನಡೆಸು ತ್ತಿದ್ದರೂ, ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷ ಅತ್ತ ತಿರುಗಿಯೂ ನೋಡಲಿಲ್ಲ. ಈಗ ಬಿಜೆಪಿ ಮಾಡಿದ ಕೆಲಸವನ್ನು ಕಣೋರೆಸೋ ತಂತ್ರ ಎನ್ನುತ್ತಿರು ವುದು ನಾಚಿಕೆ ಗೇಡಿನ ಸಂಗತಿ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ ದೂರಿದರು.

Advertisement

ನಗರದ ಜಯಪುರ, ದಿಬ್ಬೂರಿನಲ್ಲಿ ನಗರ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ಬೂತ್‌ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೊಸದಾಗಿ ಎಸ್ಸಿ, ಎಸ್ಟಿ ಜಾತಿಗೆ ಬೇರೆ ಜಾತಿಗಳನ್ನು ಸೇರಿಸುತಿದ್ದರೇ ವಿನಹಃ ಅವರ ಮೀಸಲಾತಿ ಹೆಚ್ಚಳ ಮಾಡುವ ಮಾತೇ ಇರಲಿಲ್ಲ. ಈ ಸಮುದಾಯಗಳನ್ನು ಕೇವಲ ವೋಟ್‌ ಬ್ಯಾಂಕಾಗಿ ಮಾತ್ರ ಕಾಂಗ್ರೆಸ್‌ ಮತ್ತು ಇತರೆ ಪಕ್ಷಗಳು ಪರಿಗಣಿಸಿದ್ದವು ಎಂಬುದಕ್ಕೆ ಇದಕ್ಕಿಂತ ನಿರ್ದೇಶನ ಬೇಕೆ ಎಂದು ಪ್ರಶ್ನಿಸಿದರು.

ವೋಟ್‌ ಬ್ಯಾಂಕ್‌ ರಾಜಕಾರಣ: ಬಿಜೆಪಿಯವರು ದಲಿತರು ಸೇರಿದಂತೆ ಮತದಾರರಿಗೆ ಯಾವುದೇ ಆಸೆ, ಆಮಿಷ ಒಡ್ಡುವುದಿಲ್ಲ, ಬದಲಿಗೆ ಮಾಡಿ ತೋರಿಸುತ್ತೇವೆ. ಕಾಂಗ್ರೆಸ್‌ ಪಕ್ಷದ ರೋಟಿಗರ್‌ ಔರ್‌ ಮಕಾನ್‌(ಗರೀಬಿ ಹಠಾವೋ) ಸಾಧ್ಯವಾಗಿದೆಯೇ, ಆದರೆ ಇದನ್ನು ಬಿಜೆಪಿ ಪಕ್ಷ ಮಾಡಿ ತೋರಿಸಿದೆ. 80 ಕೋಟಿ ಜನರಿಗೆ ಪಡಿತರ ಆಹಾರ ವಿತರಿಸಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಎರಡು ಸಾವಿರ ನೀಡುತ್ತೇವೆ ಎನ್ನತ್ತೀರುವುದು ವೋಟ್‌ ಬ್ಯಾಂಕ್‌ ರಾಜಕಾರಣ ಅಲ್ಲವೇ? ನಿಮ್ಮದು ವೋಟ್‌ ಬ್ಯಾಂಕ್‌ ರಾಜಕಾರಣ, ಇದು ಪ್ರಜಾಪ್ರಭುತ್ವ ವಿರೋಧಿ, ನಮ್ಮದು ಸೇವಾ ರಾಜಕಾರಣ ಎಂದು ತಿಳಿಸಿದರು.

ಜನರ ಜತೆ ಬೆರೆತು ಕೆಲಸ: ಬೂತ್‌ ವಿಜಯ ಸಂಕಲ್ಪ ಅಭಿಯಾನದ ಮೂಲಕ ಕಳೆದ ಇಷ್ಟು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಜನರಿಗಾಗಿ ಏನು ಮಾಡಿದೆಯೋ ಅದನ್ನು ಪ್ರತಿ ಮನೆ ಮನೆಗೆ ತಿಳಿಸುವುದೇ ಇದರ ಉದ್ದೇಶ. ಕಾಂಗ್ರೆಸ್‌ದು ಕುರ್ಚಿ ಹಿಡಿಯುವ ಅಭಿಯಾನ, ನಾವು ಗಾಳಿಯಲ್ಲಿ ಬಂದು ಗಾಳಿಯಲ್ಲಿ ಹೋಗುವವರಲ್ಲ. ಇಲ್ಲಿಯೇ ಇದ್ದು ಜನರೊಟ್ಟಿಗೆ ಬೆರೆತು ಕೆಲಸ ಮಾಡುವವರು ಎಂದರು.

ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‌, ಪಾಲಿಕೆ ಸದಸ್ಯರಾದ ವೀಣಾ ಮನೋಹರಗೌಡ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಟಿ.ಕೆ.ನರಸಿಂಹ ಮೂರ್ತಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಹನುಮಂತರಾಜು ಟಿ.ಎಚ್‌, ನಗರ ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ಹನುಮಂತರಾಯಪ್ಪ, ವಿರೂಪಾಕ್ಷಪ್ಪ, ವಾರ್ಡ್‌ ಅಧ್ಯಕ್ಷ ಸಿದ್ದಲಿಂಗಯ್ಯ, ನವೀನ್‌, ಪಾಲಿಕೆ ನಾಮಿನಿ ಸದಸ್ಯರಾದ ಮಂಜುನಾಥ್‌, ಪ್ರತಾಪ್‌, ವಿಶ್ವನಾಥ್‌, ಯೋಗೀಶ್‌, ನರಸಿಂಹಮೂರ್ತಿ, ಬೂತ್‌ ಅಧ್ಯಕ್ಷರಾದ ಶ್ರೀನಿವಾಸ್‌, ಪರಮೇಶ್‌, ಶಶಿಧರ್‌, ಶಿವರಾಜು, ಶಿವಣ್ಣ, ಹತ್ಯಾಳಯ್ಯ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next