Advertisement

ಛಲಗಾರನ ಸಾಧನೆಯ ಬಗ್ಗೆ ಖುಷಿ ಚಿತ್ರಕ್ಕೆ ಪ್ರಶಸ್ತಿ ಬರದಿದ್ದಕ್ಕೆ ಬೇಸರ

03:50 AM Apr 14, 2017 | |

“ಛಲಗಾರ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಕರ್ನಾಟಕ ಚಲಚನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.  ಮನುಷ್ಯ ಏನಾದರೂ ಸಾಧಿಸಲು  ಹೊರಟಾಗ ಅದಕ್ಕೆ ಅಂಗವೈಕಲ್ಯತೆ ಅಡ್ಡಿಯಾಗದು. ಸಾಧಿಸುವ ಛಲ ಮುಖ್ಯ ಎಂಬ ಸಂದೇಶದೊಂದಿಗೆ ಈ ಚಿತ್ರವನ್ನು ಎ.ಆರ್‌.ರವೀಂದ್ರ ಅವರು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕೇಶವಚಂದ್ರ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಎಸ್‌.ಆರ್‌. ಸನತ್‌ ಕುಮಾರ್‌ ಈ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಸಮರ್ಥನಂ ವಿಕಲಚೇತನ ಶಾಲೆಯಲ್ಲಿ ಓದುತ್ತಿರುವ ಮನು ನಟಿಸಿದ್ದಾರೆ.

Advertisement

 ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ರವೀಂದ್ರ, “ಇದು ವಿಕಲಚೇತನ ಹುಡುಗನೊಬ್ಬನ ಸಾಧನೆಯ ಕಥೆ. ತಾಯಿಯ ಪ್ರೀತಿಯ ಆಸರೆಯಲ್ಲಿ ಬೆಳೆದ ಪೋಲಿಯೋ ಪೀಡಿತ ಹುಡುಗ ಆಕಸ್ಮಿಕವಾಗಿ ತನ್ನ ತಾಯಿಯನ್ನು ಕಳೆದುಕೊಳ್ಳುತ್ತಾನೆ. ಮಲತಾಯಿಯ ಧೋರಣೆ, ತಿರಸ್ಕಾರದ ನಡವಳಿಕೆಗಳಿಂದ ಮನನೊಂದ  ಬಾಲಕ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಲು ಪ್ರಯತ್ನಿಸಿ ಸ್ವಾವಲಂಬಿಯಾಗುತ್ತಾನೆ. ಜೊತೆಗೆ ಊರಿನಲ್ಲಿ ನಡೆದ ಕೆಸರುಗದ್ದೆ ಓಟದಲ್ಲಿ ಭಾಗವಹಿಸಿ ಅದರಲ್ಲಿ ಗೆಲ್ಲುವ ಮೂಲಕ ಇಡೀ ಊರೇ ಹೆಮ್ಮೆಪಡುವಂಥ ಸಾಧನೆ ಮಾಡುತ್ತಾನೆ’ ಎಂದು ಸಿನಿಮಾ ಬಗ್ಗೆ ಹೇಳಿದರು. ಚಿತ್ರ ನೈಜವಾಗಿ ಮೂಡಿಬರಬೇಕೆಂಬ ಕಾರಣಕ್ಕೆ ವಿಕಲಚೇತನ ಶಾಲೆಯಲ್ಲಿ ಓದುತ್ತಿದ್ದ ಮನುವಿನಿಂದ ನಟನೆ ತೆಗೆಸಿದ್ದಾಗಿ ಹೇಳಿಕೊಂಡರು. ಜೊತೆಗೆ, ಸಿನಿಮಾ ಶುರು ಆಗಲು ಕೇಶವಚಂದ್ರ ಅವರ ಕಥೆ ಕಾರಣ ಎನ್ನಲು ಅವರು ಮರೆಯಲಿಲ್ಲ. “ಕಾಲಿಲ್ಲದ ಹುಡುಗನೊಬ್ಬನನ್ನು ಇಟ್ಟುಕೊಂಡು ಕೆಸರುಗ¨ªೆಯಲ್ಲಿ ಓಡಿಸಿದ್ದೇವೆ. ಚಿತ್ರದಲ್ಲಿ ಆ ಹುಡುಗ ಪ್ಯಾಡ್‌ ಸಹಾಯವಿಲ್ಲದೇ ನಿಂತಿದ್ದಾನೆ. ಅದಕ್ಕಾಗಿ ಆತ ಸತತ 3 ದಿನಗಳ ಕಾಲ ಕಷ್ಟಪಟ್ಟಿದ್ದಾನೆ. ನಮ್ಮ ಚಿತ್ರಕ್ಕೆ ಯಾವುದೇ ಪ್ರಶಸ್ತಿ ಬರದಿರುವುದು ನೋವಾಗಿದೆ’ ಎಂಬುದು ರವೀಂದ್ರ ಅವರ ಬೇಸರದ ನುಡಿ. 

ಲೇಖಕ ಕೇಶವಚಂದ್ರ ಕೂಡಾ ಕಥೆ ಬಗ್ಗೆ ಮಾತನಾಡಿದರು. ಅತಿಯಾದ ಪ್ರೀತಿಯೇ, ಮಗನ ಜೀವನಕ್ಕೆ ಹೇಗೆ ಮುಳುವಾಯಿತು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದಾಗಿ ಹೇಳಿಕೊಂಡರು. ಉಳಿದ ತಾರಾಗಣದಲ್ಲಿ ಮಂಜುನಾಥ ಹೆಗಡೆ, ಪದ್ಮಾವಾಸಂತಿ, ಬೇಬಿ ಪುಣ್ಯ ಕಲ್ಯಾಣಿ,  ಗುರುರಾಜ ಹೊಸಕೋಟೆ, ಯಮುನಾ ಶ್ರೀನಿಧಿ  ಮುಂತಾದವರಿದ್ದಾರೆ. ಈ ಚಿತ್ರಕ್ಕೆ ಮಂಜುನಾಥ್‌ ಬಿ. ಛಾಯಾಗ್ರಹಣ, ರವಿನಂದನ್‌ ಜೈನ್‌ ಸಂಗೀತ, ಕೇಶವ ಚಂದ್ರ ಕಥೆ, ಸಂಭಾಷಣೆ ಮತ್ತು ಸಾಹಿತ್ಯ, ಎಂ. ಮುನಿರಾಜು ಸಂಕಲನ, ಪೂರ್ಣೇಶ್‌ ಸಾಗರ್‌ ಚಿತ್ರಕತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next